ಬೆಂಗಳೂರು: ನಗರದ ಪ್ರಮುಖ ರಸ್ತೆಗಳಾದ ಕೆಜಿ ರೋಡ್, ಮೈಸೂರು ಬ್ಯಾಂಕ್ ಸರ್ಕಲ್ ಮತ್ತು ಗಾಂಧಿನಗರದ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿದ್ದ ಮಾಂಸ ದಂಧೆ ಬಗ್ಗೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿದ್ದ ಕುರಿತು ಡಿಸಿಪಿ ರವಿಚೆನ್ನಣ್ಣನವರ್ ಪ್ರತಿಕ್ರಿಯೆ ನೀಡಿದ್ದು, ಅಕ್ರಮಗಳಿಗೆ ಬ್ರೇಕ್ ಹಾಕುವುದಾಗಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಪ್ರಸಾರ ಮಾಡಿದ್ದ ವರದಿ ಬಿತ್ತರವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಡಿಸಿಪಿ ರವಿಚೆನ್ನಣ್ಣನವರ್ ಅಕ್ರಮ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಹೇಳಿದ್ರು. ಇಂದು ರಾತ್ರಿಯಿಂದಲೇ ಟೀಮ್‍ಗಳನ್ನು ರಚನೆ ಮಾಡಿ ಪೊಲೀಸ್ ತಂಡದ ಮೂಲಕ ಈ ಚಟುವಟಿಕೆಗೆ ಬ್ರೇಕ್ ಹಾಕೋದಾಗಿ ಹೇಳಿದರು. ಪ್ರಕರಣದಲ್ಲಿ ಖಾಕಿ ಕೈ ಇದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳೋದಾಗಿ ತಿಳಿಸಿದರು. ಇದನ್ನು ಓದಿ: ನಟ್ಟ ನಡುರಸ್ತೆಯಲ್ಲಿ ಲಾಡ್ಜ್ ರಾಣಿಯರ ಕಾಟ-ಗಂಡಸರೇ ಹುಷಾರಪ್ಪೋ ಹುಷಾರು..!
Advertisement
Advertisement
ಈ ಮೊದಲು ಮೆಜೆಸ್ಟಿಕ್ ಬಸ್ ನಿಲ್ದಾಣದ ಅಸುಪಾಸು ನಡೆಯುತ್ತಿದ್ದ ಈ ವೇಶ್ಯಾವಾಟಿಕೆ ದಂಧೆ ಈಗ ಈ ಮುಖ್ಯ ರಸ್ತೆಗಳಲ್ಲೇ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ಬೆನ್ನತ್ತಿದ್ದ ಪಬ್ಲಿಕ್ ಟಿವಿ ಲಾಡ್ಜ್ ರಾಣಿಯರ ರಹಸ್ಯವನ್ನು ಬಟಾಬಯಲು ಮಾಡಿ, ಸಿಕ್ರೇಟ್ ಪಿಂಪ್‍ಗಳ ಮುಖವನ್ನು ಬಯಲಿಗೆಳೆದಿತ್ತು. ಕಾರ್ಯಾವರಣೆ ವೇಳೆ ಅಕ್ರಮ ಚಟುವಟಿಕೆಯಲ್ಲಿ ಪೊಲೀಸ್ ಬೆಂಬಲ ಇರುವ ಬಗ್ಗೆಯೂ ಮಾಹಿತಿ ಬೆಳಕಿಗೆ ಬಂದಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv