ಬೆಂಗಳೂರು: ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸಿದ ಆಟೋರಿಕ್ಷಾ ಡ್ರೈವರ್ ಅವರ ಪ್ರಮಾಣಿಕತೆಯನ್ನು ಮೆಚ್ಚಿ ಪಶ್ಚಿಮ ವಲಯ ಡಿಸಿಪಿ ರವಿ ಡಿ ಚನ್ನಣ್ಣನವರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಗಾಂಧಿನಗರದ ನಿವಾಸಿ ಶ್ರಿ.ಜುವೇರ್ ಖಾನ್ ಎಂಬವರು ಬೆಂಗಳೂರು ಉಬರ್ ಆಟೋವನ್ನು ಬುಕ್ ಮಾಡಿ ಪ್ರಯಾಣಿಸಿದ್ದಾರೆ. ಆದರೆ ಈ ವೇಳೆ ಆಟೋದಲ್ಲಿಯೇ ಲ್ಯಾಪ್‍ಟಾಪ್ ಇದ್ದ ಬ್ಯಾಗನ್ನು ಮರೆತು ಅಲ್ಲೇ ಬಿಟ್ಟು ಹೋಗಿದ್ದಾರೆ.
Advertisement
Advertisement
ಈ ವೇಳೆ ಆಟೋರಿಕ್ಷಾ ಚಾಲಕ ಆ ಲ್ಯಾಪ್‍ಟಾಪ್ ಬ್ಯಾಗನ್ನು ಉಪ್ಪರಪೇಟೆ ಪೊಲೀಸ್ ಠಾಣೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರ ಬ್ಯಾಗಿನ ವಾರಸುದಾರರ ಮಾಹಿತಿಯನ್ನು ತಿಳಿದುಕೊಂಡು ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಆಟೋ ಚಾಲಕನ ಕೈಯಲ್ಲಿಯೇ ಬ್ಯಾಗನ್ನು ಹಿಂದಿರುಗಿಸಿದ್ದಾರೆ.
Advertisement
ಆಟೋರಿಕ್ಷಾ ಚಾಲಕನ ಪ್ರಮಾಣಿಕತೆಯನ್ನು ಮೆಚ್ಚಿ ಬೆಂಗಳೂರು ಸಿಟಿ ಪೊಲೀಸ್ ಪರವಾಗಿ ಡಿಸಿಪಿ ರವಿ ಡಿ ಚನ್ನಣ್ನನವರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ. ಈ ಬಗ್ಗೆ ಡಿಸಿಪಿ ಅವರೇ ಟ್ವೀಟ್ ಮಾಡಿದ್ದಾರೆ.
Advertisement
ಗಾಂಧಿನಗರ ನಿವಾಸಿ ಶ್ರೀ.ಜುಬೇರ್ ಖಾನ್ ಎಂಬುವರು @Uber_BLR ಆಟೋರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟುಹೋಗಿದ್ದ ಲ್ಯಾಪ್.ಟಾಪ್ ಅನ್ನು @upparpeteps ಗೆ ವಶಕ್ಕೆ ನೀಡಿದ್ದು, ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.
ಆಟೋರಿಕ್ಷಾ ಡ್ರೈವರ್ ರವರ ಪ್ರಾಮಾಣಿಕತೆಯನ್ನು ಮೆಚ್ಚಿ @BlrCityPolice ಪರವಾಗಿ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. pic.twitter.com/lROjhYFpUe
— Laxman B. Nimbargi, IPS (@DCPWestBCP) October 20, 2018
ಇತ್ತೀಷೆಗಷ್ಟೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಚಂದ್ರಕುಮಾರ್ ಅವರಿಗೆ 60 ಸಾವಿರ ರೂ. ಬೆಲೆ ಬಾಳುವ ಫೋನ್ ಸಿಕ್ಕಿದೆ. ಬಳಿಕ ಅದನ್ನು ಪೊಲೀಸರ ಸಹಾಯದ ಮೂಲಕ ಫೋನ್ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇದರಿಂದ ಚಂದ್ರಕುಮಾರ್ ಅವರ ಪ್ರಮಾಣಿಕತೆಯನ್ನು ಮೆಚ್ಚಿ ಅವರಿಗೂ ಕೂಡ ಡಿಸಿಪಿ ರವಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಶ್ರೀ.ಚಂದ್ರಕುಮಾರ್ ಎಂಬುವರಿಗೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಸುಮಾರು 60,000/-ರೂ ಬೆಲೆ ಬಾಳುವ #iPhone ಮೋಬೈಲ್ ಪೋನ್ ಸಿಕ್ಕಿದ್ದು, ವಾರಸುದಾರರಿಗೆ @upparpeteps ಮುಖಾಂತರ ಹಿಂದಿರುಗಿಸಿರುತ್ತಾರೆ.
ಇವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ @BlrCityPolice ಪರವಾಗಿ ಪ್ರಶಂಸನಾ ಪತ್ರದೊಂದಿಗೆ ಗೌರವಿಸಲಾಯಿತು. ???????????????????????????? pic.twitter.com/sxqrqfOSbI
— Laxman B. Nimbargi, IPS (@DCPWestBCP) October 16, 2018