ಟ್ರಕ್‌ನಲ್ಲಿದ್ದದ್ದು ಹಸು ಮಾಂಸ ತ್ಯಾಜ್ಯ ಅಲ್ಲ: ನಟಿ ಐಂದ್ರಿತಾ ರೈ ಪೋಸ್ಟ್‌ಗೆ ಡಿಸಿಪಿ ಸ್ಪಷ್ಟನೆ

Public TV
2 Min Read
aindrita ray cow waste

ಬೆಂಗಳೂರು: ಟ್ರಕ್‌ನಲ್ಲಿ ಹಸು ಮಾಂಸ ತ್ಯಾಜ್ಯ ಸಾಗಣೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿ ನಟಿ ಐಂದ್ರಿತಾ ರೈ (Aindrita Ray) ಮಾಡಿದ್ದ ಆರೋಪಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಸ್ಪಷ್ಟನೆ ಕೊಟ್ಟಿದ್ದಾರೆ. ಅದು ಹಸು ಮಾಂಸ ತ್ಯಾಜ್ಯ ಅಲ್ಲ ಎಂದು ತಿಳಿಸಿದ್ದಾರೆ.

ನಟಿ ಆರೋಪಕ್ಕೆ ಡಿಸಿಪಿ ಸಿ.ಕೆ.ಬಾಬಾ ಸ್ಪಷ್ಟನೆ ನೀಡಿರುವ ಡಿಸಿಪಿ, ಟ್ರಕ್‌ನಲ್ಲಿದ್ದ ಮಾಂಸದ ತ್ಯಾಜ್ಯ ಪರಿಶೀಲನೆ ನಡೆಸಲಾಗಿದೆ. ಟ್ರಕ್‌ನಲ್ಲಿದ್ದದ್ದು ಹಸು ಮಾಂಸದ ತ್ಯಾಜ್ಯವಲ್ಲ. ಟ್ರಕ್‌ನಲ್ಲಿದ್ದ ಮೂಳೆಗಳು, ಕೊಂಬು, ಚರ್ಮ ಹಸುವಿನದ್ದಲ್ಲ. ಪತ್ತೆಯಾದ ತ್ಯಾಜ್ಯ ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಪಟ್ಟಿದ್ದು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: KRSಗೆ ಇಂದು ಬಿಜೆಪಿ ನಿಯೋಗ – ಮಂಡ್ಯದಲ್ಲಿ ಮುಂದುವರಿದ ಪ್ರತಿಭಟನೆ

ಟ್ರಕ್‌ನಲ್ಲಿ ಮಾಂಸದ ತ್ಯಾಜ್ಯ ಸಾಗಣೆ ಮಾಡಲಾಗುತ್ತಿತ್ತು. ಅದು ಹಸು ಮಾಂಸ ತ್ಯಾಜ್ಯ ಎಂದು ಆರೋಪ ಮಾಡಲಾಗಿತ್ತು. ಸಾಗಣೆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ನಟಿ ಐಂದ್ರಿತಾ ರೈ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದರು. ತನಿಖೆ ನಡೆಸಿ ಎಫ್‌ಐಆರ್‌ ಹಾಕಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಪೊಲೀಸ್‌ ಕಮಿಷನರ್‌, ಬೆಂಗಳೂರು ಪೊಲೀಸ್‌ ಹಾಗೂ ಆಗ್ನೇಯ ಡಿಸಿಪಿಗೆ ಟ್ಯಾಗ್‌ ಮಾಡಿದ್ದರು.

ಬುಧವಾರ ರಾತ್ರಿ ಬೊಮ್ಮನಹಳ್ಳಿ ಬಳಿ ಮಾಂಸ ಸಾಗಣೆಯಾಗುತ್ತಿತ್ತು. ತ್ಯಾಜ್ಯ ಸಾಗಿಸುತ್ತಿದ್ದ ಟ್ರಕ್ ಅಡ್ಡಗಟ್ಟಿ ಕೆಲ ವ್ಯಕ್ತಿಗಳು ವೀಡಿಯೋ ಮಾಡಿದ್ದರು. ಇದನ್ನು ನಟಿ ಐಂದ್ರಿತಾ ರೈ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಆಕೆಯ ಪೊಲೀಸರು ಪರಿಶೀಲನೆ ನಡೆಸಿದ್ದರು.

ಆದರೆ ಟ್ರಕ್‌ನಲ್ಲಿ ಸಾಗಣೆ ಮಾಡುತ್ತಿದ್ದದ್ದು ಹಸು ತ್ಯಾಜ್ಯ ಅಲ್ಲ ಎಂಬ ವಿಚಾರವನ್ನು ಪಾಲಿಕೆ ಪಶು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಪಾಲಿಕೆ ಪಶುವೈದ್ಯರು ಪರಿಶೀಲನೆ ಮಾಡಿ ಎಮ್ಮೆ ತ್ಯಾಜ್ಯ ಎಂಬುದನ್ನು ದೃಢಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಆರೋಗ್ಯ ಸುಧಾರಣೆಗೆ ಪ್ರತ್ಯೇಕ ವಿಭಾಗ, ಡೆಂಗ್ಯೂ ಪ್ರಕರಣಗಳ ಮೇಲ್ವೀಚಾರಣೆಗೆ ತಂತ್ರಾಶ: ದಿನೇಶ್ ಗುಂಡೂರಾವ್

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article