ಬೆಂಗಳೂರು: ಬುದ್ಧಿವಾದ ಹೇಳಿದ್ದಕ್ಕೆ ಮಗನೊಬ್ಬ ತನ್ನ ಹೆತ್ತಮ್ಮನಿಗೆ ಪೊರಕೆಯಿಂದ ಹೊಡೆದು ಕ್ಲಾಸ್ ತೆಗೆದುಕೊಂಡ ಪ್ರಕರಣಕ್ಕೆ ಡಿಸಿಪಿ ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಡಿಸಿಪಿ ಅಣ್ಣಾಮಲೈ, “ನಾನು ಈ ಪ್ರಕರಣದ ದೃಶ್ಯಗಳನ್ನು ಪಬ್ಲಿಕ್ ಟಿವಿಯಲ್ಲಿ ನೋಡಿದೆ. ನಂತರ ಈ ಪ್ರಕರಣದ ಬಗ್ಗೆ ಪರಿಶೀಲಿಸಿದಾಗ ಜೆ.ಪಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸುದ್ದಿ ನೋಡಿದ ತಕ್ಷಣ ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ” ಎಂದರು. ಇದನ್ನೂ ಓದಿ: ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದು ಮಗನಿಂದ ಕ್ಲಾಸ್..!
ಈ ಮೊದಲು ಜೀವನ್ ತಾಯಿಯ ಬಳಿ ಮಾತನಾಡಿ ಅವರಿಗೆ ಹಲ್ಲೆಯಿಂದ ಗಾಯಗಾಳಾಗಿದ್ದೀಯಾ ಎಂಬುದು ಪರಿಶೀಲಿಸಬೇಕು. ನಂತರ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಈ ಪ್ರಕರಣದಲ್ಲಿ ತಾಯಿಯೇ ದೂರು ನೀಡಬೇಕಾಗುತ್ತೆ. ಆದರೆ ಸ್ವಂತ ಮಗನ ವಿರುದ್ಧ ಏಕೆ ದೂರು ನೀಡಬೇಕು ಎಂದು ತಾಯಿ ಹಿಂಜರಿಯುತ್ತಾರೆ. ಕುಟುಂಬದವರು ಯಾರೂ ದೂರು ನೀಡದ ಕಾರಣ ನಾವೇ ಸ್ವತಃ ದೂರು ದಾಖಲಿಸಿಕೊಳ್ಳುತ್ತಿದ್ದೇವೆ ಎಂದರು.
ಏನಿದು ಪ್ರಕರಣ?
ಬುದ್ಧಿವಾದ ಹೇಳಿದ್ದಕ್ಕೆ ಜೀವನ್ ತನ್ನ ತಾಯಿಗೆ ಪೊರಕೆಯಿಂದ ಹೊಡೆದು ಕ್ಲಾಸ್ ತೆಗೆದುಕೊಂಡಿದ್ದಾನೆ. ಅಲ್ಲದೇ ಹೊರಗಡೆ ನನ್ನ ವಿಚಾರ ಮಾತಾಡಿದರೆ, ಇದೇ ರೀತಿ ಟ್ರೀಟ್‍ಮೆಂಟ್ ಇರುತ್ತೆ ಎಂದು ಜೀವನ್ ತಾಯಿಗೆ ಧಮ್ಕಿ ಹಾಕಿದ್ದಾನೆ. ತಾಯಿ ತನ್ನ ಮಗನ ಮುಂದೆ ಕೈ ಮುಗಿದರೂ ಜೀವನ್ ಕರುಣೆ ತೋರಲಿಲ್ಲ. ಅಲ್ಲದೇ ತಾಯಿ ಎದುರಲ್ಲೇ ಸಿಗರೇಟ್ ಸೇದಿ ಅಸಭ್ಯವಾಗಿ ವರ್ತಿಸಿದ್ದಾನೆ. ಹಾಗಾಗಿ ತಾಯಿ ಮಗನಿಗೆ ಬುದ್ಧಿವಾದ ಹೇಳುವಂತೆ ಪೊಲೀಸರ ಮೊರೆ ಹೋಗಿದ್ದರು ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv