ಬೆಂಗಳೂರು: ದುನಿಯಾ ವಿಜಿ ಮೊದಲ ಪತ್ನಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ನಾಗರತ್ನಗೆ ಎಚ್ಚರಿಕೆ ನೀಡಿದ್ದಾರೆ.
ನಾಗರತ್ನ ದುನಿಯಾ ವಿಜಿ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯಗಳು ಬಿಡುಗಡೆಯಾದ ದಿನದಿಂದ ನಾಪತ್ತೆಯಾಗಿದ್ದಾರೆ. ಹೀಗಾಗಿ ಒಂದು ವಾರದ ಒಳಗೆ ಉತ್ತರ ನೀಡಬೇಕೆಂದು ಸೂಚನೆ ನೀಡಿದ್ದೇವೆ ಅಂತ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ನಾಗರತ್ನ ನಾಪತ್ತೆ ಆಗಿದ್ದಾರೆ. ಅವರಿಗಾಗಿ ಗಿರಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಾಗರತ್ನ ಮಾಧ್ಯಮವನ್ನು ಹೆಚ್ಚು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಈಗಾಗಲೇ ನಾಗರತ್ನ ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಅಲ್ಲದೇ ಇದು ಎರಡೂ ಕುಟುಂಬದ ಮಧ್ಯೆ ಫ್ಯಾಮಿಲಿ ಡಿಸ್ಪ್ಯೂಟ್. ಈಗಾಗಲೇ ಸಿಆರ್‍ಪಿಸಿ 107 ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದೀವಿ ಂದರು.
ನಾಗರತ್ನ ಹಲ್ಲೆ ಮಾಡಿದ ಡಿವಿಆರ್ ಅನ್ನು ನೀರಲ್ಲಿ ಹಾಕಿದ್ದಾರೆ. ನಾವು ಈಗ ಟೆಕ್ನಿಕಲ್ ಸಪೋರ್ಟ್ ಪಡೆದು ವಿಡಿಯೋ ರಿಕವರಿ ಮಾಡಿದ್ದೇವೆ. ಸದ್ಯ ನಾಗರತ್ನ ವಿರುದ್ಧ ಐಪಿಸಿ 326 ಹಾಕಿದ್ದೇವೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
I am truly happy to read this web site posts which carries tons of valuable
data, thanks for providing these data.