ಬೆಂಗಳೂರು: ನಗರ ಪ್ರದಕ್ಷಿಣೆ ವೇಳೆ ರಸ್ತೆಯ ಕೆಸರು ಬಟ್ಟೆಗೆ ಸಿಡಿದಿದ್ದಕ್ಕೆ, ಸ್ಥಳದಲ್ಲೇ ಗನ್‍ಮ್ಯಾನ್‍ನಿಂದ ಬಟ್ಟೆ ಹಾಗೂ ಶೂಗಳನ್ನು ಸ್ವಚ್ಛಮಾಡಿಸಿಕೊಳ್ಳುವ ಮೂಲಕ ಉಪಮುಖ್ಯಮಂತ್ರಿ ಹಾಗೂ ನಗರ ಉಸ್ತುವಾರಿ ಸಚಿವ ಪರಮೇಶ್ವರ್ ಅಂಧ ದರ್ಬಾರ್ ನಡೆಸಿದ್ದಾರೆ.
ಡಿಸಿಎಂ ಪರಮೇಶ್ವರ್ ರವರು ತಮ್ಮ ಎರಡನೇ ದಿನದ ಸಿಟಿ ರೌಂಡ್ಸ್ ಮುಂದುವರಿಸಿ, ಹಲಸೂರು ಬಳಿಯಿರುವ ಗುರುದ್ವಾರದ ಮಳೆ ನೀರುಗಾಲುವೆಗೆ ಮೊದಲು ಭೇಟಿ ನೀಡಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆ ಮೇಲಿದ್ದ ನೀರು ಸಚಿವರ ಬಟ್ಟೆ ಹಾಗೂ ಶೂಗೆ ಸಿಡಿದಿದೆ. ಕೂಡಲೇ ಅಲ್ಲೇ ಇದ್ದ ತಮ್ಮ ಗನ್‍ಮ್ಯಾನ್ ಹಾಗೂ ಸಹಾಯಕರಿಗೆ ಸ್ವಚ್ಛಮಾಡುವಂತೆ ತಾಕೀತು ಮಾಡಿದ್ದಾರೆ.
Advertisement
ಈ ವೇಳೆ ಗನ್‍ಮ್ಯಾನ್ ತಮ್ಮ ಕರವಸ್ತ್ರದ ಮೂಲಕವೇ ಸಚಿವರ ಬಟ್ಟೆ ಹಾಗೂ ಶೂಗಳನ್ನು ಸ್ವಚ್ಛ ಮಾಡಿದ್ದಾರೆ. ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಡಿಸಿಎಂ ತಮ್ಮ ಅಂಧಾ ದರ್ಬಾರ್ ಮೆರೆದಿದ್ದಾರೆ.
Advertisement
Advertisement
ಪರಮೇಶ್ವರ್ ರವರ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿ, ಅವರು ನಗರ ಪ್ರದಕ್ಷಿಣೆಗಾಗಿಯೇ ಬಂದಿದ್ದಾರೆ. ಈ ತರಹದ ಘಟನೆಗಳು ಸಾಮಾನ್ಯ, ಕೇವಲ ಕೆಸರು ನೀರು ಸಿಡಿದಿದ್ದಕ್ಕೆ, ತಮಗಿಂತ ಕೆಳವರ್ಗದ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಂಡಿದ್ದು ಸರಿಯಲ್ಲ. ಉನ್ನತ ಸ್ಥಾನದಲ್ಲಿರವ ಅವರು ತಮ್ಮ ಯೋಗ್ಯತೆಗೆ ತಕ್ಕಂತೆ ನಡೆದುಕೊಂಡು, ಎಲ್ಲರಿಗೂ ಮಾದರಿಯಾಗಬೇಕು ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಕೇವಲ ಕೆಸರು ನೀರು ಸಿಡಿದ್ದಿದ್ದಕ್ಕೆ ಚಡಪಡಿಸಿದ ಅವರು, ಜನಸಾಮಾನ್ಯರು ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮೊದಲು ಗಮನಹರಿಸಬೇಕು. ಪ್ರಮುಖ ಹಾಗೂ ಗೌರವಾನ್ವಿತ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಅವರು, ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಡಿಸಿಎಂ ನಡೆಗೆ ಅಸಮಧಾನವನ್ನು ಹೊರಹಾಕಿದ್ದಾರೆ.
ಇದಾದ ನಂತರ ಹಲಸೂರಿನ ಬಿಡಿಎ ಸಮುಚ್ಚಯಕ್ಕೆ ಭೇಟಿ ನೀಡಿದರು. ಈ ವೇಳೆ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಸಚಿವರ ಬಳಿ ಹೇಳಿಕೊಂಡು, ಸಮುಚ್ಚಯದಲ್ಲಿ ಒಳಚರಂಡಿ ಹಾಗೂ ನೀರಿನ ಸಮಸ್ಯೆ ತುಂಬಾ ಹೆಚ್ಚಿದೆ. ಕಟ್ಟಡ ಈಗಾಗಲೇ ಶಿಥಿಲಾವಸ್ಥೆ ತಲುಪಿದೆ. ಯಾವಾಗ ಕಟ್ಟಡ ಬೀಳುತ್ತದೋ ಎಂಬ ಭಯದ ನಡೆವೆಯೇ ವಾಸಿಸುತ್ತಿದ್ದೇವೆ. ಹೀಗಾಗಿ ನಮಗೆ ಹೊಸದಾಗಿ ಕಟ್ಟಡ ನಿರ್ಮಿಸಿಕೊಡುವಂತೆ ಮನವಿ ಮಾಡಿಕೊಂಡರು. ಡಿಸಿಎಂ ಪ್ರದಕ್ಷಿಣೆಗೆ ವೇಳೆ ಶಿವಾಜಿನಗರ ಶಾಸಕ ರೋಷನ್ ಬೇಗ್, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳ ಸಾಥ್ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=FiT_gomhI6Q