ಬೆಂಗಳೂರು: ಖಾಲಿ ರೋಡ್ ಝೀರೋ ಟ್ರಾಫಿಕ್ನಲ್ಲಿ ರಾಜನಂತೆ ಹೋಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಉಪಮುಖ್ಯಮಂತ್ರಿ ಪರಮೇಶ್ವರ್ ಇದೀಗ ಮತ್ತೆ ತಮ್ಮ ಸರ್ವಾಧಿಕಾರಿ ಧೋರಣೆ ತೋರುವ ಮೂಲಕ ಚರ್ಚೆಗೀಡಾಗಿದ್ದಾರೆ.
ಹೌದು. ಡಿಸಿಎಂ ಅವರಿಗೆ ಜನರನ್ನು ಕಂಡರೆ ಕಿರಿಕಿರಿ ಆಗುತ್ತಂತೆ. ಆಲಿ ಆಸ್ಕರ್ ರಸ್ತೆಯಲ್ಲಿರುವ ಬಿಎಂಆರ್ ಡಿಎ ಕಚೇರಿಗೆ ಡಿಸಿಎಂ ಇರುವಷ್ಟು ಹೊತ್ತು ಜನರು ಬರುವಂತಿಲ್ಲವೆಂಬ ಮಾಹಿತಿಯೊಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ನಕ್ಷೆ ಮಂಜೂರಾತಿ, ಭೂ ಸರ್ವೆ ಸೇರಿದಂತೆ ಸಾಕಷ್ಟು ಸಮಸ್ಯೆಗಾಗಿ ಜನ ಈ ಕಚೇರಿಗೆ ಬರುತ್ತಾರೆ. ಆದರೆ ಡಿಸಿಎಂ ಪರಮೇಶ್ವರ್ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಕಚೇರಿಯಲ್ಲಿ ಇರುವಷ್ಟು ಹೊತ್ತು ಜನ ಬರುವಂತಿಲ್ಲ. ಒಂದು ವೇಳೆ ಜನ ಬಂದರೆ ಡಿಸಿಎಂ ಅವರಿಗೆ ಸಿಕ್ಕಾಪಟ್ಟೆ ಕಿರಿಕ್ ಆಗುತ್ತಂತೆ. ನಗರಾಭಿವೃದ್ಧಿ ಸಚಿವರಾದವರು ಈ ಪ್ರಾಧಿಕಾರಕ್ಕೆ ಉಪಾಧ್ಯಕ್ಷರು ಆಗಿರುತ್ತಾರೆ. ಆದ್ದರಿಂದ ಪರಮೇಶ್ವರ್ ಪದೇ ಪದೇ ಸಭೆ ಕರೆಯುತ್ತಾರೆ.
Advertisement
ಪರಮೇಶ್ವರ್ ಅವರ ಸಭೆಗೆ ಜನರ ಪ್ರವೇಶ ನಿಷಿದ್ಧ ಮಾಡಿರುವುದು ಯಾಕೆ? ದಿನದಿಂದ ದಿನಕ್ಕೆ ಡಿಸಿಎಂ ಸಾಹೇಬರ ಸರ್ವಾಧಿಕಾರಿ ಧೋರಣೆ ರೇಜಿಗೆ ಹುಟ್ಟಿಸುವಂತಿದೆ.
Advertisement
ಉಪಮುಖ್ಯಮಂತ್ರಿಯವರ ಈ ನಡೆಗೆ ನಿಮ್ಮ ಅಭಿಪ್ರಾಯವೇನು..? ಕಮೆಂಟ್ ಮಾಡಿ..
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews