ತುಮಕೂರು/ಬೆಂಗಳೂರು: ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿಗೆ ಪಡೆದುಕೊಳ್ಳಲಿ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ. ಇತ್ತ ತನ್ನ ತಪ್ಪೊಪ್ಪಿಕೊಂಡ ಬಿಎಸ್‍ವೈ ಅವರನ್ನು ಸಚಿವ ಡಿಕೆ ಶಿವಕುಮಾರ್ ಅಭಿನಂದಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಡಿಸಿಎಂ, ಆಡಿಯೋ ಸಾಬೀತಾದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸೋದಾಗಿ ಹೇಳಿದ್ದರು. ಈಗ ಅವರೇ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಬಿಎಸ್‍ವೈ ಕೂಡಲೇ ನಿವೃತ್ತಿಯಾಗಲಿ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ ಸ್ಪೀಕರ್ ಅವರು ಕೂಡ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡೋದಾಗಿ ಅವರು ಹೇಳಿದ್ರು.
Advertisement
Advertisement
ಈ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮದ ಮೂಲಕ ತಿಳಿಯಿತು. ಆದ್ರೆ ಅವರು ಏನ್ ಹೇಳಿಕೆ ನೀಡಿದ್ದರು ಎಂದು ನನಗೆ ಗೊತ್ತಿಲ್ಲ. ತಾವು ಮಾಡಿದ ತಪ್ಪು ಒಪ್ಪಿಕೊಂಡಿದ್ದಾರೆ ಅಂದ್ರೆ ಅಲ್ಲಿ ಮಿಮಿಕ್ರಿ ಪ್ರಶ್ನೆ ಬರೋದಿಲ್ಲ ಅಂದ್ರು. ಇದನ್ನೂ ಓದಿ: ನಾನು ಹಿಟ್ಲರ್ ಅಲ್ಲ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ: ರಮೇಶ್‍ಕುಮಾರ್
Advertisement
Advertisement
ರಾಜಕೀಯದಲ್ಲಿ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದ ಡಿಕೆಶಿ ತಪ್ಪೊಪ್ಪಿಕೊಂಡಿರುವ ಬಿಎಸ್‍ವೈ ಅವರ ಆತ್ಮಸಾಕ್ಷಿಗೆ ಇದೇ ವೇಳೆ ಅಭಿನಂದನೆ ಸಲ್ಲಿಸಿದ್ರು. ಈ ಮೂಲಕ ವಿಪಕ್ಷಗಳ ಟೀಕೆಗೆ ಸಚಿವರು ತಿರುಗೇಟು ನೀಡಿದ್ರು. ಆತ್ಮಸಾಕ್ಷಿಯಿಂದಲೇ ನಾನು ನಡೆಯಬೇಕು. ಉಳಿದ ವಿಚಾರವನ್ನು ಸ್ಪೀಕರ್ ಗೆ ಬಿಡೋಣ. ನಾಳೆ ಅವರು ಏನ್ ಹೇಳ್ತಾರೋ, ಪ್ರಕರಣ ಯಾವ ದೃಷ್ಟಿಯಲ್ಲಿ ಹೋಗುತ್ತದೆ ಎಂಬುದನ್ನು ಕಾದುನೋಡೋಣ ಎಂದು ಅವರು ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv