– ಹೈವೇಯ ಎರಡು ರಸ್ತೆಯ ವಾಹನ ನಿಲ್ಲಿಸಿ ಒನ್‍ವೇ ನಲ್ಲಿ ಸಂಚಾರ
ಬೆಂಗಳೂರು: ಡಿಸಿಎಂ ಪರಮೇಶ್ವರ್ ಮತ್ತೆ ಟ್ರಾಫಿಕ್ ದರ್ಬಾರ್ ಮಾಡಿದ್ದಾರೆ. ಬೆಂಗಳೂರು-ಮೈಸೂರು ಹೈವೇಯಲ್ಲಿ ಡಿಸಿಎಂ ಪರಮೇಶ್ವರ್ ಒನ್ ವೇ ದರ್ಬಾರ್ ನಡೆಸಿದ್ದಾರೆ.
ರಾಮನಗರ ತಾಲೂಕಿನ ರಾಮನಹಳ್ಳಿ ಬಳಿ ಬೆಳಗ್ಗೆ 8 ಗಂಟೆಗೆ ಹೈವೇಯ ಎರಡು ರಸ್ತೆಯ ವಾಹನ ನಿಲ್ಲಿಸಿ ಡಿಸಿಎಂ ಪರಮೇಶ್ವರ್ ಒನ್ ವೇ ನಲ್ಲಿ 2 ಕಿ.ಮೀ. ಸಂಚರಿಸಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಹೈವೇಯ ಎರಡು ಬದಿಯಲ್ಲಿ 5 ನಿಮಿಷಕ್ಕೂ ಹೆಚ್ಚು ಕಾಲ ಪೊಲೀಸರು ವಾಹನ ತಡೆದು ನಿಲ್ಲಿಸಿದ್ದರು. ಇದನ್ನೂ ಓದಿ: ಡಿಸಿಎಂ ಪರಮೇಶ್ವರ್ ದಾದಾಗಿರಿ – ಮಳೆಯ ನಡುವೆಯೂ ಝಿರೋ ಟ್ರಾಫಿಕ್‍ನಲ್ಲಿ ಸಂಚಾರ!
Advertisement
Advertisement
ಮಾಮೂಲಿ ರಸ್ತೆಯಲ್ಲಿ ವಾಹನ ದಟ್ಟಣೆ ಎಂಬ ಕಾರಣಕ್ಕೆ ರಾಮನಹಳ್ಳಿ ಬಳಿ 5 ನಿಮಿಷ ಕಾಲ ಪೊಲೀಸರು ಎರಡು ಬದಿಯ ರಸ್ತೆ ಸಂಚಾರ ತಡೆದಿದ್ದರು. ಆಗ ಡಿಸಿಎಂ ಪರಮೇಶ್ವರ್ ಒನ್ ವೇನಲ್ಲಿ 2 ಕಿ.ಮೀ ಬಂದು ಬೆಂಗಳೂರಿನತ್ತ ಸಂಚರಿಸಿದರು. ಇದನ್ನೂ ಓದಿ: ಇರುವ ಅವಕಾಶ ಬಳಸಿಕೊಳ್ತಿದ್ದೇನೆ, ನಿಮಗೆ ಹೊಟ್ಟೆ ಉರಿ: ಝಿರೋ ಟ್ರಾಫಿಕ್‍ಗೆ ಡಿಸಿಎಂ ಸಮರ್ಥನೆ
Advertisement
ಈ ಹಿಂದೆ ಮೂರು ಬಾರಿ ಬೆಂಗಳೂರಿನಲ್ಲಿ ಪರಮೇಶ್ವರ್ ಅವರು ಜನರಿಗೆ ಸಮಸ್ಯೆ ನೀಡಿ ಝೀರೋ ಟ್ರಾಫಿಕ್ ಬಳಸಿ ಸಂಚರಿಸಿದ್ದರು. ಆಗ ಝೀರೋ ಟ್ರಾಫಿಕ್ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿ ಮುಖ್ಯಮಂತ್ರಿಗಳು, ಗಣ್ಯವ್ಯಕ್ತಿ, ರಾಜ್ಯಪಾಲರು ಹಾಗೂ ಗೃಹ ಸಚಿವರಿಗೂ ಸಹ ಝೀರೋ ಟ್ರಾಫಿಕ್ ಅವಕಾಶ ನೀಡಲಾಗಿದೆ. ಹೀಗಾಗಿ ಇದನ್ನು ನಾನು ಬಳಸಿಕೊಳ್ಳುತ್ತಿದ್ದೇನೆ. ಝೀರೋ ಟ್ರಾಫಿಕ್ ಅಗತ್ಯ ಇದೆ ಎನ್ನುವುದರಿಂದ ಅವಕಾಶ ನೀಡಲಾಗಿದೆ. ಈ ಹಿಂದಿನ ಗೃಹ ಸಚಿವರು ಬೇಡ ಎಂದಿದ್ದರು. ಹಾಗಂತ ನಾನು ಸಹ ಬೇಡ ಎನ್ನಬೇಕಿಲ್ಲ. ನನಗೆ ಇರುವ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ನಾನು ಝೀರೋ ಟ್ರಾಫಿಕ್ ತೆಗೆದುಕೊಳ್ಳುವುದು ಮಾಧ್ಯಮಗಳಿಗೆ ಹೊಟ್ಟೆ ಉರಿ ಎನ್ನುವ ಮೂಲಕ ತಮ್ಮ ಅಧಿಕಾರದ ದರ್ಪ ತೋರಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv