ಅರಣ್ಯ ಸಚಿವರ ಮೇಲೆ ಆರೋಪ ಇವೆ, ಕೇಸ್ ಇಲ್ಲ: ಲಕ್ಷ್ಮಣ ಸವದಿ

Public TV
1 Min Read
DWD 5

ಧಾರವಾಡ/ಹುಬ್ಬಳ್ಳಿ: ಅರಣ್ಯ ಸಚಿವ ಆನಂದ್ ಸಿಂಗ್ ಮೇಲೆ ಕೇಸ್ ಇರುವ ಆರೋಪ ಇವೆ, ಆದರೆ ಅರಣ್ಯಕ್ಕೆ ಸಂಬಂಧಿಸಿ ಕೇಸ್ ಇಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಕೂಡ ಅವರ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.

DWD 1 1

ಸಚಿವ ಆರ್ ಅಶೋಕ ಮಗನ ಕಾರು ಅಪಘಾತ ಪ್ರಕರಣ ನಂಗೆ ಗೊತ್ತಿಲ್ಲ. ಪೊಲೀಸ್ ಅಧಿಕಾರಿಗಳು ಆ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆರ್ ಅಶೋಕ್ ಅವರು ಹೇಳಿಕೆ ನೀಡಿದ್ದಾರೆ. ಅವರು ಮಾಹಿತಿ ಇಲ್ಲದೆ ನಾನು ಮಾತನಾಡಲ್ಲ. ಕಾನೂನು ಎಲ್ಲರಿಗೂ ಒಂದೇ, ಯಾರು ತಪ್ಪು ಮಾಡಿರುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ತಾರೆ ಎಂದರು. ಇದನ್ನೂ ಓದಿ: ಖಾತೆ ವಾಪಸ್ ಪಡೆಯೋ ಭೀತಿ- ಸಿಎಂ ಭೇಟಿ ಮಾಡಿದ ಅನಂದ್ ಸಿಂಗ್

ಉಮೇಶ್ ಕತ್ತಿ ಕೆಲವೇ ದಿನಗಳಲ್ಲಿ ಸಚಿವರಾಗುತ್ತಾರೆ. ಉನ್ನತ ಖಾತೆ ಪಡೆಯುತ್ತಾರೆ. ನಾವು ಎಲ್ಲರೂ ಸೇರಿ ಉತ್ತರ ಕರ್ನಾಟಕದ ಬಗ್ಗೆ ಚಿಂತನೆ ಮಾಡುತ್ತೇವೆ ಎಂದ ಸವದಿ, ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದರು. ಇದನ್ನೂ ಓದಿ: ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿದ್ದು ಕಳ್ಳನ ಕೈಗೆ ಕೀ ಕೊಟ್ಟಂತಾಗಿದೆ: ಹೆಚ್.ಎಂ ರೇವಣ್ಣ

Umesh Katti

ಅರಣ್ಯ ಕಾಯ್ದೆಯಡಿ ಹಲವು ಕೇಸ್ ಎದುರಿಸುತ್ತಿರುವ ಆನಂದ್ ಸಿಂಗ್‍ರನ್ನು ಅದೇ ಇಲಾಖೆಯ ಸಚಿವರನ್ನಾಗಿ ಮಾಡಿರುವ ಸಂಬಂಧ ಆಕ್ರೋಶ ಮುಂದುವರಿದಿದೆ. ತೀವ್ರ ಟೀಕೆಗಳ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಕೂಡ ವರದಿ ಕೇಳಿದೆ. ಆನಂದ್ ಸಿಂಗ್‍ರನ್ನು ಸಚಿವರನ್ನಾಗಿ ಮಾಡಿರೋದು ಸರಿಯಲ್ಲ. ಇದರ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಹೋರಾಟ ಮಾಡಲಿದೆ ಎಂದು ಕಾಂಗ್ರೆಸ್ ಮುಖಂಡ ಕೆಸಿ ಕೊಂಡಯ್ಯ ಹೇಳಿದ್ದಾರೆ. ಇತ್ತ ಆನಂದ್ ಸಿಂಗ್ ಮಾತ್ರ, ನಾನು ಯಾವುದನ್ನು ಕತ್ತಲಲ್ಲಿ ಇಡೋಕೆ ಹೋಗಿಲ್ಲ. ಒಂದು ವೇಳೆ ಸಿಎಂ ಖಾತೆ ಬದಲಿಸಿದ್ರೂ ಅದನ್ನು ಒಪ್ಪಿಕೊಳ್ಳುತ್ತೇನೆ. ಒಬ್ಬರ ವಿರುದ್ಧ ಆರೋಪ ಕೇಳಿ ಬಂದ್ರೆ ಅವರು ಹಾಗೇ ಇರ್ಬೇಕಾ..? ತಪ್ಪು ತಿದ್ದಿಕೊಳ್ಳಲು ಅವಕಾಶನೇ ಇಲ್ವಾ..? ಕೊನೆಯವರೆಗೂ ಆರೋಪಿಯಾಗೇ ಇರಬೇಕಾ ಎನ್ನುತ್ತಾ ವಾಲ್ಮೀಕಿ ಮಹರ್ಷಿಯ ಉದಾರಣೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *