ಬೆಂಗಳೂರು: ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 25ನೇ ವರ್ಷದ ಅವರೆಬೇಳೆ ಮೇಳಕ್ಕೆ (Avarebele Mela) ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರಿಂದು ಚಾಲನೆ ನೀಡಿದರು.
ಮೇಳವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಡಿಸಿಎಂ, ಅವರೆಬೇಳೆಯಿಂದ ತಯಾರಿಸಿದ ದೋಸೆ ಸವಿದರು. ಎರಡು ಸೇರು ಅವರೆಬೇಳೆ, ಅವರೆಬೇಳೆ ಅವಲಕ್ಕಿ, ಮಿಕ್ಷ್ಚರ್, ಅವರೆಬೇಳೆ ಖಾರ, ನಿಪ್ಪಟ್ಟು ಎಲ್ಲವನ್ನೂ ಖರದಿಸಿದ್ರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ್ಮೇಲೆ ಸರ್ಕಾರ ರಾಜ್ಯಕ್ಕೆ ಆತ್ಮಹತ್ಯೆ ಭಾಗ್ಯ ದಯಪಾಲಿಸಿದೆ – ವಿಜಯೇಂದ್ರ ಕಿಡಿ
Advertisement
Advertisement
ಅವರೆ ಬೇಳೆ ದೋಸೆ ಸವಿದು, ತುಂಬಾ ಚೆನ್ನಾಗಿ ಇತ್ತು. ಅವರೆಬೇಳೆ ದೋಸೆ ಮಾಡಲು ನನ್ನ ಪತ್ನಿಗೆ ಹೇಳುತ್ತೇನೆ. ಅವರೆಬೇಳೆ ರುಚಿ ಬಲ್ಲವನೇ ಬಲ್ಲ ಎಂದು ನುಡಿದರು. ಇದನ್ನೂ ಓದಿ: ಭವಿಷ್ಯದಲ್ಲಿ ಒಳ್ಳೆಯ ವಿಷ್ಣು ಸ್ಮಾರಕ ತಲೆ ಎತ್ತಲಿದೆ: ಭಾರತಿ ವಿಷ್ಣುವರ್ಧನ್
Advertisement
ಸ್ಪೆಷಲ್ ಫ್ಲೈಟ್‌ನಲ್ಲಿ ಅವರೆಬೇಳೆ ತಿಂದೆ:
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಎಲ್ಲರಿಗೂ ಹೊಸವರ್ಷದಲ್ಲಿ ಒಳ್ಳೆಯದಾಗಲಿ. ಈ ವರ್ಷದ ಕೊನೆಯ ಕಾರ್ಯಕ್ರಮ ಅವರೆಬೇಳೆ ಮೇಳ. ಖಾಸಗಿ ಕಾರ್ಯಕ್ರಮವಾದ್ದರಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಮಾಗಡಿ ಅವರೇಕಾಳು ಬಹಳ ಸೊಗಡು. ನಾವು ಸಹ ಅವರೇ ಬೆಳೆಯುತ್ತೇವೆ. ಎಲ್ಲಾ ಕಾಳುಗಳಿಗೆ ರಾಜ ಅವರೆಬೇಳೆ, ನಿನ್ನೆ ಸ್ಪೇಷಲ್ ಫ್ಲೈಟ್‌ನಲ್ಲಿ ಅವರೆಬೇಳೆ ತಿಂದುಕೊಂಡು ಬಂದೆ, ನಮ್ಮ ಮನೆಯಲ್ಲೂ ಅವರೆಬೇಳೆ ಮಾಡ್ತೇವೆ ಎಂದು ಹೇಳಿದರು.