ಹುಬ್ಬಳ್ಳಿ: ಎನ್‍ಐಎ ಅನೇಕ ವಿಚಾರಗಳನ್ನು ನಮಗೆ ಹೇಳಲ್ಲ. ಅಧಿಕಾರಿಗಳು ಬಂದು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೌದ್ಧ ಧರ್ಮಗುರು, ದಲೈಲಾಮಾ ಕೊಲೆಗೆ ಉಗ್ರರು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎನ್‍ಐಎ ಅವರು ಅನೇಕ ವಿಚಾರಗಳನ್ನು ನಮಗೆ ಹೇಳೋದೇ ಇಲ್ಲ. ಇಂತಹ ಸಂದರ್ಭಗಳಲ್ಲಿ ಅವರೇ ಬಂದು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ. ಅನೇಕ ಉದಾಹರಣೆಗಳು ಇವೆ. ಉಗ್ರ ಚಟುವಟಿಕೆಯಲ್ಲಿರುವಂತವರನ್ನು ಅವರೇ ಬಂದು ಬಂಧಿಸಿಕೊಂಡು ಹೋಗುತ್ತಾರೆ. ಮಾಹಿತಿ ಜಾಲ (information Network) ನಲ್ಲಿ ಅವರು ನಮಗೂ ಕೂಡ ಮಾಹಿತಿ ಕೊಡಬೇಕು. ಆದ್ರೆ ಕೊಡುತ್ತಿಲ್ಲ ಅಂದ್ರು.
Advertisement
Advertisement
Advertisement
ಇಂಟೆಲಿಜೆನ್ಸ್(ಗುಪ್ತಚರ ಇಲಾಖೆ) ಅವರು ಅವರಿಗಿರುವ ಇಂಟೆಲಿಜೆನ್ಸ್ ಮೂಲಕ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಕಳೆದ 3 ದಿನಗಳ ಹಿಂದೆ ದಕ್ಷಿಣ ರಾಜ್ಯದ ಡಿಜಿಗಳ ಕಾನ್ಫರೆನ್ಸ್ ಮಾಡಿದ್ದೆ. ಅದರಲ್ಲಿ ಒಂದು ವಿಷಯ ಇಂಟೆಲಿಜೆನ್ಸ್ ಶೇರಿಂಗ್ ಆಗಿದೆ. ಅವರಿಗೇನಾದ್ರೂ ಗೊತ್ತಾದ್ರೆ ಅವರು ನಮಗೆ ಹೇಳುತ್ತಾರೆ. ನಮಗೆ ಏನಾದ್ರೂ ಗೊತ್ತಾದ್ರೆ ಅವರಿಗೆ ಹೇಳುತ್ತೀವಿ. ಇದೊಂದು ಇಲಾಖೆಯ ಭಾಗವಾಗಿದೆ ಅಂದ್ರು.
Advertisement
ಈ ವೇಳೆ ರಾಜ್ಯದ ಗುಪ್ತಚರ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಬಂದಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಡಿಸಿಎಂ, ಈ ಬಗ್ಗೆ ನನಗೆ ಗೊತ್ತಿಲ್ಲ ಅಂತ ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=XBYQ_jQcHJ4