-ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡ ನಾಯಕರ ಬಗ್ಗೆ ಪರಂ ಹೇಳಿದ್ದು ಹೀಗೆ
ಬೆಂಗಳೂರು: ಕೂಡಲೇ ಬಾಕಿ ಉಳಿಸಿಕೊಂಡಿರುವ ತೆರಿಗೆ ವಸೂಲಿ ಮಾಡುವಂತೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಪಬ್ಲಿಕ್ ಟಿವಿಯಲ್ಲಿ ದೊಡ್ಡವರ ದೋಖಾ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಡಿಸಿಎಂ, ಯಾವ ಒತ್ತಡಕ್ಕೂ ಮಣಿಯದೆ ಈ ವರ್ಷದ ಅಂತ್ಯದ ವೇಳೆಗೆ ಬಾಕಿ ಉಳಿದಿರುವ ತೆರಿಗೆಯನ್ನು ವಸೂಲಿ ಮಾಡುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
Advertisement
Advertisement
ಒಟ್ಟು 2 ಸಾವಿರ ಕೋಟಿ ಬಾಕಿ ಅಸ್ತಿ ತೆರಿಗೆ ಇರುವ ಹಿನ್ನೆಲೆಯಲ್ಲಿ ಕೂಡಲೇ ವಸೂಲಿ ಮಾಡಿ ವರದಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡೋದಾಗಿ ಪಬ್ಲಿಕ್ ಟಿವಿಗೆ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
Advertisement
ಈ ವರ್ಷಕ್ಕೆ 3 ಸಾವಿರ ಕೋಟಿ ಆಸ್ತಿ ತೆರಿಗೆಯನ್ನು ಅಂದಾಜು ಮಾಡಿದ್ದೇವೆ. ಅದರಲ್ಲಿ ಸುಮಾರು 2 ಸಾವಿರದ 31 ಕೋಟಿ ರೂ. ಸಂಗ್ರಹಿಸಿದ್ದೇವೆ. ಇನ್ನು ಮಾರ್ಚ್ ತಿಂಗಳೊಳಗೆ 3 ಸಾವಿರ ಕೋಟಿ ರೂ. ಹಣವನ್ನು ಸಂಗ್ರಹಿಸುತ್ತೇವೆ. ಕಳೆದ ವರ್ಷ ಆಸ್ತಿ ತೆರಿಗೆ ಸಂಗ್ರಹಿಸುವ ಕೆಲಸ ಬಹಳಷ್ಟು ಬಾಕಿ ಉಳಿದಿದೆ. ಸುಮಾರು 2 ಸಾವಿರ ಕೋಟಿ ರೂ ಬಾಕಿ ಉಳಿದಿದೆ ಅಂತ ಅಂದಾಜಿಸಲಾಗಿದೆ. ಹೀಗಾಗಿ ಈ ಕುರಿತು ಪ್ರತ್ಯೇಕ ಸಭೆ ಕರೆದು ಹಣಕಾಸಿನ ವ್ಯವಹಾರ ನೋಡಿಕೊಳ್ಳುವ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಅಂದ್ರು.
Advertisement
ಇಂತಿಷ್ಟು ದಿವಸದೊಳಗೆ ತೆರಿಗೆ ಹಣ ಸಂಗ್ರಹಿಸಬೇಕು ಅಂತ ತಿಳಿಸಿದ್ದೇನೆ. ಕಳೆದ ಒಂದೂವರೆ ತಿಂಗಳಲ್ಲೇ 350 ಕೋಟಿ ರೂ. ಸಂಗ್ರಹಿಸಿದ್ದಾರೆ. ಆದುದರಿಂದ ಸಂಗ್ರಹಿಸುವ ಪ್ರಕ್ರಿಯೆ ನಡೀತಾ ಇದೆ. ಒಟ್ಟಿನಲ್ಲಿ ಮಾರ್ಚ್ ಒಳಗಾಗಿ ಎಲ್ಲಾ ತೆರಿಗೆ ಹಣವನ್ನು ಸಂಗ್ರಹಿಸಲಾಗುವುದು ಅಂತ ಅವರು ತಿಳಿಸಿದ್ರು.
ಇದೇ ಸಂದರ್ಭದಲ್ಲಿ ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಇವತ್ತಿನ ರೈತ ಮುಖಂಡರೊಂದಿಗೆ ಸಭೆಯಲ್ಲಿ ಪರಿಹಾರ ಸಿಗುವ ವಿಶ್ವಾಸವಿದೆ. ರೈತರ ಹಿತ ನಮ್ಮ ಸರ್ಕಾರಕ್ಕೆ ಬಹಳ ಮುಖ್ಯವಾದದ್ದಾಗಿದೆ. ಬಿಜೆಪಿಯಿಂದ ರೈತರ ಬಗ್ಗೆ ಪಾಠ ಕಲಿಯಬೇಕಿಲ್ಲ. ಹಸಿರು ಕ್ರಾಂತಿ ನೀತಿ ಮಾಡಿದ್ದೇ ಕಾಂಗ್ರೆಸ್. ಯಾರೇ ಬಾಕಿ ಉಳಿಸಿಕೊಂಡಿದ್ದರೂ ರೈತರಿಗೆ ನೀಡಬೇಕಾದ ಹಣ ನೀಡಬೇಕು. ಇಲ್ಲಿ ಶಾಸಕರು ಅಂತ ನೋಡಲ್ಲ ಅವರನ್ನ ಕಾರ್ಖಾನೆಯ ಮಾಲೀಕರು ಅಂತ ನೋಡೋದು. ಬಾಕಿ ಪಾವತಿಸುವ ಬಗ್ಗೆ ಗಡುವ ನೀಡುತ್ತೇವೆ ಅದು ಅವರಿಗೂ ಅನ್ವಹಿಸುತ್ತದೆ ಅಂತ ಅವರು ನುಡಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews