ಡಿಸಿಎಂ ಆಗಿದ್ರೂ ಪರಮೇಶ್ವರ್, ಎಚ್‍ಡಿಕೆ ಕೈಗೊಂಬೆ- ದೋಸ್ತಿ ಸರ್ಕಾರದಲ್ಲಿ `ಕೈ’ ಹಿತ ಕಾಯಲು ಅಸಮರ್ಥ

Public TV
1 Min Read
PARAM

ಬೆಂಗಳೂರು: ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ಬಳಿ ಇರುವ ಗೃಹ ಇಲಾಖೆಯನ್ನು ಕಾಂಗ್ರೆಸ್ ಹೈಕಮಾಂಡ್ ಕಿತ್ತುಕೊಂಡಿದೆ.

8 ವರ್ಷ ಪಕ್ಷ ಮುನ್ನಡೆಸಿದ್ದೇನೆ, ನನ್ನ ನೇತೃತ್ವದಲ್ಲಿ 2 ಬಾರಿ ಪಕ್ಷ ಅಧಿಕಾರಕ್ಕೆ ಬಂದಿದೆ. ದೆಹಲಿಯಲ್ಲಿ ತಮ್ಮೆಲ್ಲಾ ಪ್ರಭಾವ ಬಳಸಿ `ಗೃಹ’ ಉಳಿಸಿಕೊಳ್ಳಲು ಪರಮೇಶ್ವರ್ ಕಸರತ್ತು ನಡೆಸಿದ್ದರು. ಆದ್ರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ `ಗೃಹ’ಖಾತೆಯಲ್ಲೇ ಪರಮೇಶ್ವರ್ ಉಳಿಸಿಕೊಂಡರೇ ಆ ಗುರಿ ಮುಟ್ಟೋದು ಅಸಾಧ್ಯ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿ. ಪರಮೇಶ್ವರ್ ಅವರಿಗೆ ಗೃಹ ಖಾತೆ ಕೈ ತಪ್ಪಿದೆ. ಈ ಮೂಲಕ ಪರಮೇಶ್ವರ್ ನೆಪಮಾತ್ರಕ್ಕಷ್ಟೇ ಗೃಹ ಮಂತ್ರಿ, `ಅಣ್ತಮ್ಮ’ ಆಡಿದ್ದೇ ಆಟ ಎನ್ನುವಂತಾಗಿತ್ತು.

HDK Param

ಇನ್ಸ್ ಪೆಕ್ಟರ್ ವರ್ಗಾವಣೆಗೂ ಕುಮಾರಸ್ವಾಮಿ, ರೇವಣ್ಣ ಮಾತೇ ಫೈನಲ್ ಆಗಿತ್ತು. ಪರಮೇಶ್ವರ್, ಕುಮಾರಸ್ವಾಮಿ, ರೇವಣ್ಣ ಕೈಗೊಂಬೆ ಆಗಿದ್ರಿಂದ ಕಾಂಗ್ರೆಸ್‍ಗೆ ಹಾನಿ ಜಾಸ್ತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಭಾವಿ ಖಾತೆಗೆ ಸಮರ್ಥರನ್ನೇ ನೇಮಕ ಮಾಡಬೇಕೆಂಬ ಒತ್ತಡ ಹೇರಲಾಗಿತ್ತು. ಹೀಗಾಗಿ ಪರಮೇಶ್ವರ್‍ಗೆ `ಗೃಹ’ ಬಿಟ್ಟುಕೊಡುವಂತೆ ಹುಕುಂ, ಎಂ.ಬಿ ಪಾಟೀಲ್‍ಗೆ ಕಾಂಗ್ರೆಸ್ ಲಗಾಮು ಹಾಕಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಪರಮೇಶ್ವರ್ ಗೆ `ಗೃಹ’ಭಂಗವಾಗಿದ್ದು ಹೇಗೆ..?
ಆರೋಪ 1 – ಉಪಮುಖ್ಯಮಂತ್ರಿಯಾದ್ರೂ ಪರಮೇಶ್ವರ್ ಕುಮಾರಸ್ವಾಮಿ ಕೈಗೊಂಬೆ..!
ಆರೋಪ 2– ಡಿಸಿಎಂ ಹುದ್ದೆ ಸಿಕ್ಕರೂ ಸಮ್ಮಿಶ್ರ ಸರ್ಕಾರದಲ್ಲಿ `ಕೈ’ ಹಿತ ಕಾಯಲು ಅಸಮರ್ಥ
ಆರೋಪ 3– ಗೃಹ ಇಲಾಖೆ ಇದ್ರೂ ಸ್ವತಂತ್ರ ನಿರ್ಧಾರ ಕೈಗೊಳ್ಳದ ಪರಮೇಶ್ವರ್
ಆರೋಪ 4– ಸಣ್ಣದೊಂದು ನಿರ್ಧಾರಕ್ಕೂ ಕುಮಾರಸ್ವಾಮಿಯನ್ನೇ ಕೇಳ್ತಿದ್ದ ಡಿಸಿಎಂ..!

RAHUL
ಆರೋಪ 5– ಪರಮೇಶ್ವರ್ ಗೃಹಸಚಿವರಾದ್ರೂ ಪೊಲೀಸ್ ಇಲಾಖೆಯಲ್ಲಿ ರೇವಣ್ಣದ್ದೇ ಆಟ..!
ಆರೋಪ 6– ಕಾಂಗ್ರೆಸ್ ಕಾರ್ಯಕರ್ತರ ಬೇಡಿಕೆಗಳಿಗೂ ಪರಮೇಶ್ವರ್ ಅಸಡ್ಡೆ
ಆರೋಪ 7– ಪರಿಸ್ಥಿತಿ ಹೀಗೆ ಮುಂದುವರೆದ್ರೆ ಸರ್ಕಾರದಲ್ಲಿ `ಕೈ’ ಹಿಡಿತ ತಪ್ಪುತ್ತೆ

ಈ ಎಲ್ಲಾ ಆರೋಪಗಳಿಂದಾಗಿ ಪರಮೇಶ್ವರ್ ಅವರಿಗೆ ಗೃಹ ಇಲಾಖೆ ತಪ್ಪಿದೆ ಎನ್ನಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *