ತುಮಕೂರು: ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಂತ ಹೇಳಿಲ್ಲ. ನನ್ನ ಬಾಯಲ್ಲಿ ಯಾಕೆ ಹೇಳಿಸ್ತೀರಿ. ಮುಖ್ಯಮಂತ್ರಿಗಳು ಇದ್ದಾರೆ. ಹೀಗಾಗಿ ಅದರ ವಿಚಾರವನ್ನೇ ಮಾತನಾಡಬಾರದು ಅಂತ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮುಖ್ಯಮಂತ್ರಿಗಳು ಇದ್ದಾರೆ. ಸರ್ಕಾರ ಇದೆ. ಮತ್ತೆ ಯಾಕೆ ಈಗ ಮುಖ್ಯಮಂತ್ರಿಗಳ ವಿಚಾರ ಮಾತನಾಡುತ್ತಿದ್ದೀರಿ ಅಂತ ಪ್ರಶ್ನಿಸಿದ್ರು.
Advertisement
Advertisement
ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿಯೇ ಸರ್ಕಾರ ರಚನೆ ಮಾಡಿದ್ದೇವೆ. ಸುಮ್ನೆ ಬಾಯಿ ಚಪಲಕ್ಕೆ ಈ ರೀತಿ ಎಲ್ಲ ಮಾತನಾಡುತ್ತಾರೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರಶ್ನೆಯೇ ಇಲ್ಲ. ಅವರ್ಯಾರು ಬೆಳಗಾವಿಯಲ್ಲಿ ನಿಮಗೆ ಸಿಎಂ ಆಗೋ ಸಾಮಥ್ರ್ಯ ಇದೆ ಅಂತ ಹೇಳಿದ್ರು. ಅದಕ್ಕೆ ನಾನು ಹೌದಪ್ಪ ಆ ಸಾಮಥ್ರ್ಯ ನನಗೆ ಇದೆ ಅಂತ ಹೇಳಿದ್ದೆ. ಅದರಲ್ಲೇನೂ ತಪ್ಪಿಲ್ಲ. ಸಿಎಂ ಸ್ಥಾನ ಕೊಟ್ಟರೆ ಆಮೇಲೆ ನೋಡೋಣ ಅಂತ ಹೇಳಿದ್ರು.
Advertisement
Advertisement
ಇದೇ ವೇಳೆ ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರದ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ಟನ್ ಗೆ ನಿಗದಿ ಪಡಿಸುವ ಎಫ್.ಆರ್.ಪಿ(ನ್ಯಾಯ ಹಾಗೂ ಲಾಭದಾಯಕ) ಬೆಲೆ ಏರುಪೇರಾಗುತ್ತದೆ. ಅದರ ಮೇಲೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ಬೆಲೆ ನಿಗದಿಪಡಿಸುತ್ತಾರೆ. ಕೆಲವು ಸಂದರ್ಭ ಎಫ್.ಆರ್.ಪಿ ಬೆಲೆಗಿಂತ ಹೆಚ್ಚು ಸಿಗುತ್ತೆ, ಕಡಿಮೆಯೂ ಸಿಗುತ್ತದೆ. ಕಾರ್ಖಾನೆಗಳು ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳಂತೆ ನಡೆದುಕೊಳೋದಿಲ್ಲ. ರೈತರಿಗೆ ಸಹಾಯ ಮಾಡೋಕೆ ಅಂತಾ ಕಾರ್ಖಾನೆಗಳಿಗೆ ಸರ್ಕಾರ ಹಣ ನೀಡಿದೆ. ಕಳೆದ ಬಾರಿ ಸಿದ್ದರಾಮಯ್ಯ ಅವರು 450 ರೂಪಾಯಿ ಬೆಂಬಲ ನೀಡಿದ್ದಾರೆ ಅಂತ ಹೇಳಿದ್ರು.
2017-18 ನಡೆದ ಒಪ್ಪಂದದ ಹಣ ಕೊಟಿಲ್ಲ ಅಂತಾ ರೈತರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಈಗಾಗಲೇ ರೈತರೊಂದಿಗೆ, ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಂತಿಮವಾಗಿ ತೀರ್ಮಾನಿಸಲಾಗುವುದು. ಕೇಂದ್ರ ಸರ್ಕಾರ ದರ ನಿಗದಿಪಡಿಸುವುದರಿಂದ ಅವರು ಸ್ಪಂದಿಸಬೇಕಿದೆ. ಬಿಜೆಪಿಗೆ ರೈತರ ಬಗ್ಗೆ ಮಾತನಾಡೋ ಯಾವುದೇ ನೈತಿಕತೆ ಇಲ್ಲ. ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕೋದು ಬೇಡ. ರಾಜ್ಯದ ರೈತರ ಸಮಸ್ಯೆ ಅಂತಾ ಕೇಂದ್ರಕ್ಕೆ ಹೋದಾಗ ಯಾವುದೇ ರೀತಿ ಸ್ಪಂದಿಸಿಲ್ಲ. ರಾಜಕೀಯಕ್ಕಾಗಿ ರೈತರ ಪರವಾಗಿ ಮಾತಾಡ್ತಾರೆ ಅಂತ ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv