ಶಿವಣ್ಣ (Shivarajkumar) ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಜ.26ರಂದು ಅಮೆರಿಕದಿಂದ ಬೆಂಗಳೂರಿಗೆ ಹಿಂದಿರುಗಿದ್ದು, ಸದ್ಯ ವಿಶ್ರಾಂತಿಯಲ್ಲಿರುವ ಶಿವಣ್ಣರನ್ನು ನೋಡಲು ಅವರ ನಿವಾಸಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ನೀಡಿದ ಡಾಲಿ
ಅಮೆರಿಕದಿಂದ ಶಿವಣ್ಣ ಬಂದ್ಮೇಲೆ ಸ್ಯಾಂಡಲ್‌ವುಡ್ ಡೈರೆಕ್ಟರ್ ಶ್ರೀನಿ, ಡಾಲಿ ಸೇರಿದಂತೆ ಅನೇಕರು ನಟನ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಈ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಶಿವಣ್ಣ ಮನೆಗೆ ತೆರಳಿ ನಟನ ಕ್ಷೇಮ ವಿಚಾರಿಸಿದ್ದಾರೆ. ಶಿವಣ್ಣ ದಂಪತಿ ಜೊತೆ ಅವರು ಕಾಲ ಕಳೆದಿದ್ದಾರೆ.
ಅಂದಹಾಗೆ, ಇತ್ತೀಚೆಗೆ ಶಿರಸಿ ಹಾಗೂ ಯಾಣಗೂ ಶಿವಣ್ಣ ಭೇಟಿ ನೀಡಿದ್ದಾರೆ. ವಿಶ್ರಾಂತಿ ಪಡೆಯುತ್ತಿರುವ ಶಿವಣ್ಣ ಸದ್ಯದಲ್ಲೇ ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್‌ನಲ್ಲಿ ಅವರು ಭಾಗಿಯಾಗಲಿದ್ದಾರೆ.