ಹಾಸನ: ಸಿಎಂ ಕುರ್ಚಿ ಕದನದ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರು ಟೆಂಪಲ್ ರನ್ ಶುರುಮಾಡಿದ್ದು, ಬುಧವಾರ ಸಂಜೆ ದಿಢೀರ್ ನಾಗರನವಿಲೆಯ ನಾಗೇಶ್ವರ ದೇವಾಲಯಕ್ಕೆ (Nageshwara Temple) ಭೇಟಿ ನೀಡಿದ್ದಾರೆ.
ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗರನವಿಲೆ (Nagaranavile) ಗ್ರಾಮದಲ್ಲಿರುವ ನಾಗೇಶ್ವರ ದೇವಸ್ಥಾನಕ್ಕೆ ಡಿಕೆಶಿ ಭೇಟಿ ಕೊಟ್ಟಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ, ಡಿ.ಕೆ ಶಿವಕುಮಾರ್ ಅವರನ್ನು ದೇವಾಲಯಕ್ಕೆ ಕರೆದೊಯ್ದರು. ಇದನ್ನೂ ಓದಿ: ಇಂದು ಜಾಮೀನು ಭವಿಷ್ಯ; ಕೋರ್ಟ್ ತೀರ್ಪಿಗೂ ಮುನ್ನವೇ ರಾಯರ ಮೊರೆ ಹೋದ ಪವಿತ್ರಾಗೌಡ
ಬೆಂಗಾವಲು ವಾಹನವಿಲ್ಲದೆ ಡಿಕೆಶಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದೀಗ ಡಿ.ಕೆ.ಶಿವಕುಮಾರ್ ಅವರು ನಾಗರನವಿಲೆ ದೇವಸ್ಥಾನ ಭೇಟಿ ನೀಡಿರುವುದು ಎಲ್ಲರ ಕುತೂಹಲ ಕಾರಣವಾಗಿದೆ.