ಮಂಗಳೂರು: ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ರಾಜ್ಯದ ಒಂದಿಲ್ಲೊಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಲೇ ಇರುತ್ತಾರೆ. ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವರಲ್ಲಿ ಪ್ರಾರ್ಥಿಸುತ್ತಾರೆ.
ಕಳೆದ ವಾರವಷ್ಟೇ ಘಾಟಿ ಸುಬ್ರಮಣ್ಯ ಸ್ವಾಮಿ ದರ್ಶನ ಪಡೆದಿದ್ದ ಡಿಸಿಎಂ ಇಂದು ಬೆಳ್ಳಂಬೆಳಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಧರ್ಮಸ್ಥಳದಲ್ಲಿ (Dharmasthala) ಒಂದು ಸುತ್ತು ದೇವಸ್ಥಾನ ಪ್ರದಕ್ಷಿಣೆ ಹಾಕಿ, ಮಂಜುನಾಥಸ್ವಾಮಿಯ ದರ್ಶನ ಪಡೆದು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಹುಂಡಿಗೆ ಕಾಣಿಕೆಯನ್ನೂ ಅರ್ಪಿಸಿದ್ದಾರೆ. ಇದನ್ನೂ ಓದಿ: ನನ್ನ ಪ್ರಾರ್ಥನೆಗೆ ಫಲ ಸಿಕ್ಕಿದ್ದಕ್ಕೆ ಘಾಟಿ ಸುಬ್ರಮಣ್ಯ ಸ್ವಾಮಿ ದರ್ಶನ: ಡಿ.ಕೆ ಶಿವಕುಮಾರ್
ಮಂಜುನಾಥನ ದರ್ಶನದ ಬಳಿಕ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ (Veerendra Heggade) ಅವರನ್ನ ಭೇಟಿಯಾಗಿದ್ದಾರೆ. ಕಾಲಿಗೆ ಬಿದ್ದು ಆಶೀರ್ವಾದ ಸಹ ಪಡೆದಿದ್ದಾರೆ. ಬಳಿಕ ಕೆಲ ಕಾಲ ಗೌಪ್ಯ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಹಿಂದೂಗಳು ಮತಾಂತರ ಮಾಡುವಂತೆ ಬಹಿರಂಗವಾಗಿ ಕರೆ ಕೊಟ್ಟ ಚಕ್ರವರ್ತಿ ಸೂಲಿಬೆಲೆ