ಮಂಡ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಮಂಡ್ಯದವರು ಛತ್ರಿಗಳು ಎಂದು ಒಂದು ವಾರ ಕಳೆದಿದೆ. ಇನ್ನೊಂದೆಡೆ ಮಂಡ್ಯದವರು ಡಿಕೆಶಿಗೆ ಕ್ಷಮೆಯಾಚನೆ ಮಾಡಬೇಕೆಂದು ನೀಡಿದ್ದ ಡೆಡ್ ಲೈನ್ ಸಹ ಮುಗಿದಿದೆ. ಇಂದು ಕನಕಪುರ ಬಂಡೆಯ ವಿರುದ್ಧ ಸಕ್ಕರೆ ನಾಡಿನ ಅನ್ನದಾತರು ಬೀದಿಗಿಳಿದು ಛತ್ರಿ ಚಳುವಳಿ ನಡೆಸಲು ಮುಂದಾಗಿದ್ದಾರೆ.
ಮಂಡ್ಯ (Mandya) ಜನರು ಅತೀ ಹೆಚ್ಚು ರಾಜಕೀಯ ಕ್ಷೇತ್ರದ ಕಡೆ ಬಲವನ್ನು ಇಟ್ಟಿದ್ದಾರೆ. ಇದೇ ಕಾರಣಕ್ಕೆ ಚುನಾವಣೆಗಳು ಬಂದಾಗ ಇಡೀ ಇಂಡಿಯಾವೇ ಮಂಡ್ಯ ಕಡೆ ತಿರುಗಿ ನೋಡುತ್ತವೆ. ಇಂತಹ ಜಿಲ್ಲೆಯ ಹೆಸರನ್ನು ಬಳಸಿಕೊಂಡು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಛತ್ರಿಗಳು ಎಂಬ ಪದ ಬಳಕೆ ಮಾಡಿರುವುದು ಇದೀಗ ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಬಜೆಟ್ 5,259 ಕೋಟಿಗೆ ಹೆಚ್ಚಳ – ದೇವಾಲಯದಲ್ಲಿ ಅಡುಗೆ ಕೆಲಸಗಾರರ ವೇತನ ಹೆಚ್ಚಳಕ್ಕೆ ನಿರ್ಧಾರ
ಡಿಕೆಶಿ ಛತ್ರಿ ಹೇಳಿಕೆಗೆ ಮಂಡ್ಯ ಜನ ಸಿಡಿದೆದ್ದಿದ್ದರು. ವಿಪಕ್ಷಗಳು ಕೂಡ ಡಿಕೆಶಿ ವಿರುದ್ಧ ಕಿಡಿಕಾರಿ ಕ್ಷಮೆಗೆ ಪಟ್ಟು ಹಿಡಿದಿದ್ದರು. ಅಧಿಕಾರದ ಮದದಿಂದಲೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂದು ವಿಪಕ್ಷ ವಾಗ್ದಾಳಿ ನಡೆಸಿತು. ಈ ಬಗ್ಗೆ ಮಾತನಾಡಿದ್ದ ಡಿಕೆಶಿ, ಹೌದು ನನಗೆ ಮದ ಇದೆ, ಕಡಿಮೆ ಮಾಡಿ ಎಂದು ಮತ್ತೆ ಸಮರ್ಥನೆ ಮಾಡಿಕೊಂಡಿದ್ದರು. ಈ ಹೇಳಿಕೆ ಮಂಡ್ಯ ಜನರ ಕಣ್ಣನ್ನು ಮತ್ತಷ್ಟು ಕೆಂಪಾಗಿಸಿತ್ತು. ಇದನ್ನೂ ಓದಿ: ಹೊಸ ವಾಹನ ಖರೀದಿದಾರರಿಗೆ ಶಾಕ್ – ಏಪ್ರಿಲ್‌ನಿಂದ ಆಟೋ, ಕಾರು, ಬೈಕ್ ದರ ಏರಿಕೆ
ವಿಧಾನಸಭಾ ಚುನಾವಣೆ ವೇಳೆ ಡಿ.ಕೆ.ಶಿವಕುಮಾರ್, ನಾನು ಒಬ್ಬ ಒಕ್ಕಲಿಗ, ನಾನು ನಿಮ್ಮ ಮನೆಯ ಮಗ. ದೇವೇಗೌಡರಿಗೆ, ಎಸ್.ಎಂ.ಕೃಷ್ಣ ಅವರಿಗೆ, ಕುಮಾರಸ್ವಾಮಿಗೆ ಅಧಿಕಾರ ಕೊಟ್ಟಿದ್ದೀರಾ. ಈಗ ನಿಮ್ಮ ಮಗ ಕನಕಪುರದ ಡಿ.ಕೆ.ಶಿವಕುಮಾರ್‌ಗೂ ಒಂದು ಅವಕಾಶ ಕೊಡಿ. ನನಗೂ ಪೆನ್ನು ಪೇಪರ್ ಕೊಡಿ ಎಂದು ಮಂಡ್ಯ ಜನರಲ್ಲಿ ಡಿಕೆಶಿ ಕೇಳಿಕೊಂಡಿದ್ದರು. ಅದರಂತೆ ಮಂಡ್ಯ ಜನ ಕೂಡ ಕೈ ಹಿಡಿದಿದ್ದರು. ಸ್ವಾಭಿಮಾನಿ ಜನರಿಗೆ ಹೀಗೆ ಹೇಳೋದು ಎಷ್ಟು ಸರಿ ಎಂದು ಆಕ್ರೋಶ ಹೆಚ್ಚಾಗಿದೆ. ಇದನ್ನೂ ಓದಿ: ಬಾಗಲಕೋಟೆ | ಹಲವೆಡೆ ಬಿರುಗಾಳಿ ಸಹಿತ ಮಳೆ, ನೆಲಕ್ಕುರುಳಿದ ಬೆಳೆ
ಮನೆ-ಮನೆಯಿಂದ ಛತ್ರಿ ತಂದು ಪ್ರತಿಭಟನೆ:
ಡಿಕೆಶಿಗೆ ಇಷ್ಟೆಲ್ಲಾ ಮಾಡಿರುವ ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಹೇಳಿರೋದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರು, ರೈತ ಸಂಘಟನೆ, ಪ್ರಗತಿಪರ ಸಂಘಟನೆ, ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಡಿಕೆಶಿ ಮಂಡ್ಯ ಜನರನ್ನು ಛತ್ರಿಗಳು ಎಂದಿದ್ದಾರೆ. ನಿಜವಾಗಿ ಡಿ.ಕೆ.ಶಿವಕುಮಾರ್ ಅಂತರರಾಜ್ಯ ಛತ್ರಿ. ಮಂಡ್ಯ ಜನರ ಬಳಿ ಡಿಕೆಶಿ ಕ್ಷಮೆ ಕೇಳಬೇಕು. ಇದಕ್ಕೆ ಸೋಮವಾರ ಸಂಜೆಯವರೆಗೆ ಡೆಡ್‌ಲೈನ್ ನೀಡಿದ್ದರು. ಆದರೆ ಇಲ್ಲಿಯವರೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷಮೆಯಾಚಿಸಿಲ್ಲ. ಹೀಗಾಗಿ ಇಂದು ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಮನೆ ಮನೆಯಿಂದ ಛತ್ರಿ ತಂದು ಮಂಡ್ಯದ ಸಂಜಯ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ನಾಗ್ಪುರ ಕೋಮು ಗಲಭೆ – ಮಾಸ್ಟರ್‌ಮೈಂಡ್ ಮನೆ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗ!