ಬೆಂಗಳೂರು: ಗ್ರಾಮಾಂತರದಲ್ಲಿ ಸೋಲಿನ ಸೇಡನ್ನ ಚನ್ನಪಟ್ಟಣದಲ್ಲಿ ತೀರಿಸಿಕೊಳ್ಳಲು ಡಿಕೆ ಶಿವಕುಮಾರ್ (DK Shivakumar) ತಯಾರಿ ನಡೆಸಿದ್ದಾರಾ ಎಂಬ ಕುತೂಹಲ ಮನೆ ಮಾಡಿದೆ.
ಚನ್ನಪಟ್ಟಣದಲ್ಲಿ ಡಿಕೆ ಸುರೇಶ್ (DK Suresh) ಸ್ಪರ್ಧೆ ಫಿಕ್ಸಾ? ಎಂಬ ಚರ್ಚೆ ಬೆನ್ನಲ್ಲೇ ಬುಧವಾರ ಇಡೀ ದಿನ ಡಿಕೆಶಿ ಚನ್ನಪಟ್ಟಣ ಪ್ರವಾಸದಲ್ಲಿ ಇರ್ತಾರೆ. ಚನ್ನಪಟ್ಟಣದ 12ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಭೇಟಿ ನೀಡಲಿರುವ ಡಿಕೆಶಿ, ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲೂ ಭಾಗವಹಿಸಲಿದ್ದಾರೆ.
ಜುಲೈ ಮೊದಲ ವಾರದಲ್ಲಿ ತೆರವಾಗಿರುವ ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ಘೋಷಣೆ ಸಾಧ್ಯತೆಯಿದ್ದು, ಡಿಕೆಶಿ ಅಖಾಡಕ್ಕಿಳಿಯುತ್ತಿರುವುದು ಕುತೂಹಲ ಮೂಡಿಸಿದೆ. ಅಂದಹಾಗೆ ಈ ಹಿಂದೆ ಡಿಕೆಸು ಚನ್ನಪಟ್ಟಣ ಸ್ಪರ್ಧೆ ಬಗ್ಗೆ ಮಾತನಾಡಿದ್ದ ಡಿಕೆಶಿ, ನಾನು ಸುಮ್ಮನೆ ಕೂರುವ ಮಗಾ ಅಲ್ಲ. ಡಿಕೆಸು ಸ್ಪರ್ಧೆ ಬಗ್ಗೆ ಕೇಳಿದಾಗ ಸೋತಿದ್ದೀವಿ, ಸ್ವಲ್ಪ ಸುಧಾರಿಸಿಕೊಳ್ಳಬೇಕಲ್ಲವಾ ಎಂದಿದ್ದರು.
ಅಲ್ಲದೆ ಸದಾಶಿವನಗರ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಡಿಕೆ ಸುರೇಶ್ ಚನ್ನಪಟ್ಟಣದಿಂದ ಸ್ಪರ್ಧಿಸುವಂತೆ ಒಕ್ಕಲಿಗ ಶಾಸಕರು, ಸಚಿವರು ಒತ್ತಡ ಹಾಕಿದ್ರು. ಆದರೆ ಡಿಕೆಸು ನಾನು ಸ್ಪರ್ಧೆ ಮಾಡಲ್ಲ ಎಂದಿದ್ದರು. ಆದ್ರೀಗ ಡಿಕೆಶಿ ನಡೆ ಬಗ್ಗೆ ಕುತೂಹಲವಿದ್ದು, ಚನ್ನಪಟ್ಟಣ ಕಬ್ಜ ಹೊಸ ಆಟದಲ್ಲಿ ಮತ್ತೊಂದು ರಣರೋಚಕ ಫೈಟ್ ಶುರುವಾಗುತ್ತಾ ಕಾದುನೋಡಬೇಕಿದೆ.