ಬೆಂಗಳೂರು: ಇಂದು ಬೆಳಗ್ಗೆ ಜಲ ಸಂಪನ್ಮೂಲ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕಾರು ಹತ್ತುವಾಗ ಮನೆಯ ಗೇಟ್ ಬಳಿ ಎಡವಿದ್ದಾರೆ.
ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಕಾರಿನತ್ತ ತೆರಳುತ್ತಿದ್ದರು. ಈ ವೇಳೆ ಡಿಕೆಶಿ ನೆಲಕ್ಕೆ ಹಾಕಿದ್ದ ಸ್ಲ್ಯಾಬ್ ಮೇಲೆ ಕಾಲಿಟ್ಟಾಗ ಎಡವಿದ್ದಾರೆ. ಕೂಡಲೇ ಅಲ್ಲಿದ್ದ ಸಿಬ್ಬಂದಿ ಡಿಕೆಶಿ ಕೈ ಹಿಡಿದಿದ್ದಾರೆ.
Advertisement
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ರಾಜಸ್ಥಾನದಲ್ಲಿ (Rajasthan) ಅಖಿಲ ಭಾರತ ಮಟ್ಟದ ನೀರಾವರಿ ಮಂತ್ರಿಗಳ ಸಭೆಗೆ ಹೋಗುತ್ತಿದ್ದೇನೆ. ನಮ್ಮ ರಾಜ್ಯಕ್ಕೆ ನೀರಾವರಿ ವಿಚಾರಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಬೇಕಿದೆ. ಹಲವು ಯೋಜನೆಗಳನ್ನು ತಯಾರು ಮಾಡಿ ಕಳಿಸಿಕೊಟ್ಟಿದೆ. ಈಗಾಗಲೇ ನಮ್ಮ ಆಂಧ್ರ, ತೆಲಂಗಾಣ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸಿಎಂಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟಿಗಾ? – ಡಿಕೆಶಿ ಫುಲ್ ಗರಂ
Advertisement
ಮೇಕೆದಾಟು,ಮಹದಾಯಿ ಯೋಜನೆಗಳಿಗೆ ಕೇಂದ್ರದಿಂದ ಹಣ ಸಿಕ್ಕಿಲ್ಲ. ಎಲ್ಲಾ ಡ್ಯಾಂಗಳನ್ನು ದುರಸ್ಥಿ ಮಾಡಬೇಕಿದೆ. ನವಿಲೆಯಿಂದ 25 ರಿಂದ 30 ಟಿಎಂಸಿ ನೀರು ವ್ಯರ್ಥವಾಗುತ್ತಿದೆ ಎಂದರು.
Advertisement
ವಿಶೇಷ ವಿಮಾನದ ಮೂಲಕ ಹೆಚ್‌ಎಎಲ್‌ನಿಂದ ತೆಲಂಗಾಣದ ಬೇಗಂಪೇಟ್‌ಗೆ ಡಿಕೆಶಿ ತೆರಳಿದ್ದಾರೆ. ಬಳಿಕ ಹೈದರಾಬಾದ್‌ನಿಂದ ರಾಜಸ್ಥಾನಕ್ಕೆ ಹೋಗಲಿದ್ದಾರೆ.
Advertisement