ಬೆಂಗಳೂರು: ನನ್ನ ಮುಂದೆ ಕನಕಪುರದಲ್ಲಿ ಡಿಚ್ಚಿ ಹೊಡಿತಿನಿ ಅಂತ ಬಂದು ನಿಂತ್ಯಲ್ಲ ಡೆಪಾಸಿಟ್ ಬಂತಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರನ್ನು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.
ವಿಕಾಸ ಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಾನು ಒಕ್ಕಲಿಗ ನಾಯಕ ಎಂದು ಎಲ್ಲಿ ಹೇಳಿದ್ದೇನೆ. ಎನಪ್ಪ ಅಶೋಕ, ಅಲ್ಲಲ್ಲ ಅಶೋಕ್ ಅಣ್ಣ. ನನಗಿಂತ ದೊಡ್ಡವನ ಚಿಕ್ಕವನ ಗೊತ್ತಿಲ್ಲ, ಅಶೋಕಣ್ಣ. ಹೌದಪ್ಪ ನನ್ನ ತಮ್ಮ ಸೋತಿದ್ದಾನೆ. ಆದರೆ ಸೋಲಿಸಿದ ಕೊಂಡಿಗಳು ಒಂದೊಂದೆ ಕಳಚಿಕೊಂಡವಲ್ಲ. ರಾಜರಾಜೇಶ್ವರಿ ನಗರದಲ್ಲಿ ಏನಾಯ್ತು? ಚನ್ನಪಟ್ಟಣದಲ್ಲಿ ಏನಾಯ್ತು? ರೆವಿನ್ಯೂ ಮಿನಿಸ್ಟರ್ ಆಗಿ ನನ್ನ ಮುಂದೆ ಕನಕಪುರಕ್ಕೆ ಬಂದು ನಿಂತ್ಯಲ್ಲ ಏನಾಯ್ತು? ಎಂದು ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ಬಿಜೆಪಿ (BJP) ಅವಧಿಯಲ್ಲಿ ರೈತರಿಗೆ ವಕ್ಫ್‍ನಿಂದ ಹೆಚ್ಚು ನೋಟಿಸ್ ಹೋಗಿದೆ ಎಂಬ ವಿಚಾರವಾಗಿ, ಬಿಜೆಪಿ ನಾಯಕರಿಗೆ ಬೇಕಿದ್ದು ಪ್ರಚಾರ. ಅವರ ಮುಖಗಳನ್ನು ಕನ್ನಡಿಯಲ್ಲಿ ನೋಡಿ ಎಂದು ಹೇಳಿದ್ದೇನೆ. ಇನ್ನೂ ಚನ್ನಪಟ್ಟಣ ಚುನಾವಣೆ ಸಂದರ್ಭದಲ್ಲಿ ಕೆಲವು ಹುಡುಗರು ರೈತರ ಪಹಣಿ ಸಂಗ್ರಹ ಮಾಡಿದ್ದಾರೆ. ಅದು ನನ್ನ ಹಳೆಯ ಕ್ಷೇತ್ರ. 2020 ರಲ್ಲಿ ಅಲ್ಲಿ ತಿದ್ದುಪಡಿ ಆಗಿದೆ. ಈಗ ಅದನ್ನು ಮನೆ ಮನೆಗೆ ಹೋಗಿ ಸಂಗ್ರಹ ಮಾಡ್ತಿದ್ದಾರೆ. ಆಂತರಿಕ ಸಮಸ್ಯೆ ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ನಾವು ಸತ್ಯಾಂಶವನ್ನು ಬಿಚ್ಚಿಡುತ್ತೇವೆ. ಅವರೆಲ್ಲ ಗೋಮುಖ ವ್ಯಾಘ್ರರು ಎಂದು ತಿರುಗೇಟು ಕೊಟ್ಟಿದ್ದಾರೆ.
Advertisement
ಮುಸ್ಲಿಂ ಮತಗಳು ಕೈ ಕೊಟ್ಟ ಕಾರಣ ಚನ್ನಪಟ್ಟಣದಲ್ಲಿ ಸೋಲು ಎಂಬ ನಿಖಿಲ್ ಹೇಳಿಕೆ ವಿಚಾರವಾಗಿ, ಕುಮಾರಸ್ವಾಮಿಗೆ ಪಾಪ ಆ ಜನ ಮತ ಹಾಕಿದ್ದರು. ಇವಾಗ ಬಿಜೆಪಿ ಜೊತೆಗೆ ಹೋಗಿರುವಾಗ ಯಾಕೆ ಮತ ಹಾಕ್ತಾರೆ? ಅವರು ಮುಸ್ಲಿಮರನ್ನು ನಂಬಿಲ್ಲ. ಅವರಿಗೆ ಸೀಟ್ ಕೊಟ್ರಾ? ಮಂತ್ರಿ ಮಾಡಿದ್ರಾ? 4% ಮೀಸಲಾತಿ ಕಿತ್ತು ಹಾಕಿದ್ದಾರೆ. ಅವರ ಬಳಿ ಮತ ಕೇಳುವ ಹಕ್ಕು ಅವರಿಗೆ ಇಲ್ಲ. ಈ ಬಗ್ಗೆ ನಿಖಿಲ್ ಅಲ್ಲ, ಇದರ ಬಗ್ಗೆ ದೇವೇಗೌಡರು ಮಾತನಾಡಬೇಕು ಎಂದಿದ್ದಾರೆ.
Advertisement
ನಾನು ಹೋದರೂ ಕಾಂಗ್ರೆಸ್ ಹೋಗಲ್ಲ, ಯಾರು ಹೋದರು ಕಾಂಗ್ರೆಸ್ ಹೋಗಲ್ಲ. ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡಲು ಬಿಡಲ್ಲ. ಇನ್ನೂ ಜೆಡಿಎಸ್ (JDS) ಇಬ್ಭಾಗದ ಕುರಿತು ಸಿ.ಪಿ ಯೋಗೇಶ್ವರ್ ಹೇಳಿಕೆ ವಿಚಾರವಾಗಿ, ನನಗೆ ಅದು ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಲ್ಲ. ಜಿ.ಟಿ ದೇವೇಗೌಡರು ಹಿರಿಯ ನಾಯಕರು. ಅವರು ಆ ಪಕ್ಷಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ನಾವು ಈ ಹಿಂದೆ ಆಫರ್ ಮಾಡಿದ್ದೆವು. ಆದರೆ ದಳದಲ್ಲಿ ಇರುತ್ತೇನೆ ಎಂದಿದ್ದರು. ಆದರೆ ಇವಾಗ ಅವರಿಗೆ ಅಸಮಾಧಾನ ಆಗಿದೆ. ಆದರೆ ನನ್ನ ಬಳಿ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಡಾ ವಿಚಾರದಲ್ಲಿ ಐಎಎಸ್ ಅಧಿಕಾರಿಯೊಬ್ಬರು 144 ಫೈಲ್ ತಗೆದುಕೊಂಡು ಹೋಗಿದಾರೆ ಎಂಬ ವಿಚಾರವಾಗಿ, ಅದು ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ತಗೆದುಕೊಂಡು ಹೋಗ್ತಾರೆ? ಸರ್ಕಾರಿ ದಾಖಲೆ ಅದು, ಅದೆಲ್ಲಾ ಹೇಗೆ ತಗೆದುಕೊಂಡು ಹೋಗೋಕೆ ಸಾಧ್ಯ? ಲೋಕಾಯುಕ್ತ ವರದಿ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.