Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನೀವು ರೈತರ ಮಗ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ: ಹೆಚ್‍ಡಿಕೆಗೆ ಡಿಕೆಶಿ ವ್ಯಂಗ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ನೀವು ರೈತರ ಮಗ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ: ಹೆಚ್‍ಡಿಕೆಗೆ ಡಿಕೆಶಿ ವ್ಯಂಗ್ಯ

Districts

ನೀವು ರೈತರ ಮಗ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ: ಹೆಚ್‍ಡಿಕೆಗೆ ಡಿಕೆಶಿ ವ್ಯಂಗ್ಯ

Public TV
Last updated: August 4, 2024 4:02 pm
Public TV
Share
3 Min Read
DKShivakumar 2
SHARE

– ನಾನು ಫೇಸ್ ಟು ಫೇಸ್ ಫೈಟರ್, ಬೇಕಿದ್ರೆ ಫೈಟ್ ಮಾಡೋಣ ಬಾ ಎಂದು ಹೆಚ್‍ಡಿಕೆಗೆ ಸವಾಲು
– ಬಿಜೆಪಿ-ಜೆಡಿಎಸ್ ಕುಟುಂಬದವರ ಪಾಪದ ಕೊಡ ತುಂಬಿ ತುಳುಕುತ್ತಿದೆ

ರಾಮನಗರ: ಬಿಜೆಪಿ-ಜೆಡಿಎಸ್ (BJP-JDS) ಮಾಡುತ್ತಿರುವುದು ಪಾದಯಾತ್ರೆಯಲ್ಲ, ಇದು ಪಾಪ ವಿಮೋಚನಾ ಪಾದಯಾತ್ರೆ. ಅವರ ಎಲ್ಲಾ ಪಾಪ ವಿಮೋಚನೆ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ವಿಚಾರವಾಗಿ, ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕುಟುಂಬದವರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅವರ ಪಾಪಗಳನ್ನ ಜನರಿಗೆ ತಿಳಿಸಲು ಪಾದಯಾತ್ರೆ ಮಾಡ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

DKShivakumar

ಬಿಜೆಪಿಯಯವರು ಕುಮಾರಸ್ವಾಮಿಗೆ (H.D Kumaraswamy )ಹಿಂದೆ ಯಾವ ಪ್ರಶ್ನೆ ಕೇಳಿದ್ದರೋ, ಅದಕ್ಕೆ ಮೊದಲು ಉತ್ತರ ಕೊಡಬೇಕು. ಶಾಸಕ ಯತ್ನಾಳ್, ಮಾಜಿ ಸಿಎಂ ಬಿಎಸ್‍ವೈ ಹಾಗೂ ಅವರ ಮಗ ವಿಜಯೆಂದ್ರಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮ್ಮ ಪಾಪ ವಿಮೋಚನೆ ಪಾದಯಾತ್ರೆಯಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಈ ಭಾಗದಲ್ಲಿ ಹೆಚ್‍ಡಿಕೆ ಆಯ್ಕೆ ಆಗಿ, ಇಲ್ಲಿ 6 ವರ್ಷ ಅಧಿಕಾರ ನಡೆಸಿದ್ದೀರಿ. ನೀವು ರೈತನ ಮಗ ಪಾಪ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ. ನಮ್ಮ ಕಡೆ ಒಂದು ಗಾದೆ ಇದೆ. ಹುಟ್ಟಿದ ಕರು ಎಲ್ಲಾ ಗೂಳಿ ಆಗಲು ಸಾಧ್ಯವಿಲ್ಲ. ಹಾಗೆ ಎಲ್ಲರೂ ರೈತರಾಗಲು ಸಾಧ್ಯವಿಲ್ಲ. ಕುಮಾರಣ್ಣ ನಿನ್ನ ಕೈಯಲ್ಲಿ ಬಡವರಿಗೆ ಜಮೀನು ಕೊಡಲು ಆಗಲಿಲ್ಲ. ಒಂದು ಸೈಟ್ ಹಂಚಿಕೆ ಮಾಡಿಲ್ಲ.
ನಾನು ಈ ಕ್ಷೇತ್ರದಲ್ಲಿ ಬಂದು ಜನಸಂದರ್ಶನ ಸಭೆ ಮಾಡಿದ್ದೆ. 22 ಸಾವಿರ ಜನ ಬಂದು ಅರ್ಜಿ ಕೊಟ್ಟಿದ್ದಾರೆ. ಇಷ್ಟು ದಿನ ನೀವು ಇಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

DKShivakumar 1

ಬಾಲಕೃಷ್ಣ ನಿನ್ನ ಸಹೋದರ ಅಲ್ವಾ? ನಿನ್ನ ತಂದೆ, ಪತ್ನಿ, ಕುಟುಂಬ, ಸಹೋದರರು ಎಷ್ಟು ಆಸ್ತಿ ಮಾಡ್ತಿದ್ದಾರೆ. ಒಬ್ಬ ಸರ್ಕಾರಿ ನೌಕರ ಎಷ್ಟು ಆಸ್ತಿ ಮಾಡಲು ಸಾಧ್ಯ? ನಾನು ಹುಟ್ಟಿನಿಂದ ರೈತ, ನೀವು ಎಷ್ಟು ಬೆಳೆ ಬೆಳೆದಿದ್ದೀರಿ ಹೇಳಿ? ನನ್ನನ್ನ ಕಲ್ಲು ಕಳ್ಳ, ಕಲ್ಲು ಲೂಟಿ ಮಾಡಿದ್ದಾನೆ ಎಂದಿದ್ದೀರಿ. ನನ್ನ ಮೇಲೆ, ನನ್ನ ತಮ್ಮನ ಮೇಲೆ ಮತ್ತು ನನ್ನ ಪತ್ನಿ ಮೇಲೆ ಕೇಸ್ ಹಾಕಿ, ನನ್ನನ್ನ ಜೈಲಿಗೆ ಹಾಕಿದ್ದಾಗ ಬಂದು ನೀನು ನೋಡಿದ್ದೆ. ಆಗ ನನ್ನ ಆತ್ಮಸ್ಥೈರ್ಯ ಹೇಗಿತ್ತು ನೋಡಿದ್ದೆ ಅಲ್ವಾ? ನನ್ನ ಹಾಗೂ ನನ್ನ ಕುಟುಂಬ ಮೇಲೆ ಹಾಕಿದ್ದ ಕೇಸ್ ವಜಾ ಆಗಿದೆ ಗೊತ್ತಾ? ಹಾಗೆ ನಿನ್ನ ಅಕ್ರಮವನ್ನೂ ಪಟ್ಟಿ ಮಾಡಿಸುತ್ತಿದ್ದೇನೆ. ಅದರ ಬಗ್ಗೆಯೂ ತನಿಖೆ ಆಗಲಿದೆ ಎಂದು ಎಚ್ಚರಿಸಿದ್ದಾರೆ.

ಹಿಟ್ ಅಂಡ್ ರನ್ ಕುಮಾರಸ್ವಾಮಿ ನೀನು. ನೀನು ಎಲ್ಲರನ್ನೂ ಹೆದರಿಸಿದ ಹಾಗೆ ಬಿಜೆಪಿಯವ್ರನ್ನೂ ಹೆದರಿಸಲು ಹೋದೆ. ಪಾದಯಾತ್ರೆ ಬಗ್ಗೆ ನೀನೊಂದು ಮಾತು, ನಿನ್ನ ಮಗ ಒಂದು ಮಾತು, ಜಿಟಿಡಿ ಒಂದು ಮಾತು ಆಡಿದ್ದೀರಿ. ಈಗ ಪಾದಯಾತ್ರೆಗೆ ಬಂದು ಹೆಜ್ಜೆ ಹಾಕ್ತಿದ್ದೀಯಾ? ನಿನಗೆ ನೈತಿಕತೆ ಇದ್ಯಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದ ಉಪಚುನಾವಣೆ ವಿಚಾರವಾಗಿ, ಇಲ್ಲಿ ಹಸ್ತದ ಚಿಹ್ನೆಯೇ ಅಭ್ಯರ್ಥಿ. ಕುಮಾರಸ್ವಾಮಿ ನಾನು ಐದೇ ನಿಮಿಷದಲ್ಲಿ ಮೇಕೆದಾಟಿಗೆ ಅನುಮತಿ ಕೊಡಿಸ್ತೀನಿ ಎಂದಿದ್ದಾರೆ. ನಾನು ಮಂಡ್ಯದಲ್ಲಿ ಅದನ್ನ ರಿವೀಲ್ ಮಾಡ್ತೀನಿ. ಮಂಡ್ಯದ ನಾಯಕರಿಗೆ ನಾನು ಹೇಳ್ತೇನೆ. ಕುಮಾರಸ್ವಾಮಿ, ಯಡಿಯೂರಪ್ಪ ಏನು ಹೇಳಿದ್ರು ಅದನ್ನ ಡಿಸ್ಪ್ಲೈ ಮಾಡಿ. ಚುನಾವಣೆ ವೇಳೆ ಏನು ಮಾತನಾಡಿದ್ರೂ ಅದನ್ನ ಸ್ಕ್ರೀನ್ ಮೇಲೆ ತೋರಿಸಿ. ಅವರ ನವರಂಗಿ ಬಣ್ಣ ಬಯಲು ಮಾಡೋಣ ಎಂದು ಬೆಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇವರಾಜು ಟ್ರಕ್ ಟರ್ಮಿನಲ್ ಹಗರಣದಲ್ಲಿ ಯಾಕೆ ನಿಮ್ಮ ಸಿಎಂ, ಮಂತ್ರಿಗಳು ರಾಜೀನಾಮೆ ಕೊಟ್ಟಿಲ್ಲ. ನಿಮ್ಮ ಪಕ್ಷದವರೇ ಏನು ಹೇಳಿದ್ರು ಅಂತಾ ಗೊತ್ತಿಲ್ವ ಎಂಬ ಪತ್ರಕರ್ತರ ಪ್ರಶ್ನೆಗೆ, ಅಮಿತ್ ಶಾ, ಮೋದಿ ಬಗ್ಗೆ ಕುಮಾರಸ್ವಾಮಿ ಏನು ಮಾತಾಡಿದ್ರು ಅನ್ನೋದು ತೋರಿಸಬೇಕಾ? ಅಪ್ಪ ಮಗನ ನಂಬಬೇಡಾ ಹುಷಾರ್ ಅಂತಾ ಯಡಿಯೂರಪ್ಪ ನನಗೆ ಹೇಳಿದ್ರು. ಅಲ್ಲದೇ ಇವಾಗ ಏನು ಇಬ್ರೂ ತಬ್ಬಾಡ್ತ ಇದ್ದೀರಿ. ಪಾಪ ನಿಮ್ಮ ಕುಟುಂಬ ಬೇರೆ ರೇವಣ್ಣ ಕುಟುಂಬ ಬೇರೆ ಅಂತೀರಿ. ಭಾಗ ಆಗಿಬಿಟ್ಟಿದ್ದೀವಿ ಅಂತೀರಿ. ಇನ್ನೂ ನಾನು ಪೆನ್‍ಡ್ರೈವ್ ಹಂಚಿದ್ದೀನಿ ಎಂದು ಹೇಳಿದ್ದೆ. ನಾನು ಫೇಸ್ ಟು ಫೇಸ್ ಫೈಟರ್. ನನ್ನ ಮೇಲೆ ಒಂದು ಸಲ ಸೋತಿದ್ದಿ, ಮತ್ತೊಮ್ಮೆ ಬೇಕಿದ್ರೆ ಫೈಟ್ ಮಾಡೋಣ ಬಾ ಎಂದು ಹೆಚ್‍ಡಿಕೆಗೆ ಬಹಿರಂಗ ಸವಾಲು ಹಾಕಿದ್ದಾರೆ.

TAGGED:bjpcongressd k shivakumarh d kumaraswamyjds
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories
Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories

You Might Also Like

Chandru Lamani
Bengaluru City

ಲಂಚ ಪಡೆಯುವಾಗ ಸಿಕ್ಕಿಬಿದ್ದ ಚಂದ್ರು ಲಮಾಣಿ – ಶಾಸಕರ ಉಚ್ಚಾಟನೆಗೆ ಬಿಜೆಪಿ ಚಿಂತನೆ

Public TV
By Public TV
4 minutes ago
Iqbal Hussain
Districts

ಸಚಿವರ ಬದಲಾವಣೆಗಾಗಿ ಹೈಕಮಾಂಡ್‌ಗೆ ಪತ್ರ ಬರೆದಿರೋದು ನಿಜ: ಇಕ್ಬಾಲ್ ಹುಸೇನ್

Public TV
By Public TV
21 minutes ago
Margaret Alva
Bengaluru City

ಶಿಸ್ತು, ಜವಾಬ್ದಾರಿ ಇರಬೇಕು – ಅರೆ ಬೆತ್ತಲೆ ಪ್ರತಿಭಟನೆಯನ್ನು ಖಂಡಿಸಿದ ಕೈ ನಾಯಕಿ ಮಾರ್ಗರೇಟ್‌ ಆಳ್ವ

Public TV
By Public TV
21 minutes ago
Shoaib Jamai
Cricket

ಮುಸ್ಲಿಂ ಆಟಗಾರರಿಲ್ಲದ್ದಕ್ಕೆ ಟೀಂ ಇಂಡಿಯಾ ಸೋತಿದೆ – ಧರ್ಮದ ಲೇಪನ ಹಚ್ಚಿದ ಓವೈಸಿ ಪಕ್ಷದ ನಾಯಕ

Public TV
By Public TV
30 minutes ago
kea
Bengaluru City

ಎಂ.ಫಾರ್ಮಾ ಅಂತಿಮ ಸುತ್ತಿನ ಸೀಟು ಹಂಚಿಕೆ: ಕೆಇಎ

Public TV
By Public TV
43 minutes ago
31 Karnataka Congress MLAs Write To High Command Demanding Cabinet Expansion Letter Goes Viral
Bengaluru City

ಕುರ್ಚಿ ಕದನದ ಮಧ್ಯೆ ಹೊಸಬರಿಗೆ ಮಂತ್ರಿ ಸ್ಥಾನಕ್ಕೆ ಬೇಡಿಕೆ – ಪತ್ರ ಬರೆದ 31 ಶಾಸಕರು ಯಾರು?

Public TV
By Public TV
57 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?