ಬೆಂಗಳೂರು: ನನ್ನ ಪ್ರಕಾರ ಇನ್ನೂ ಬೆಲೆ ಏರಿಕೆ ಜಾಸ್ತಿ ಮಾಡಬೇಕಿತ್ತು. ಯಾರು ಬೇಕಾದ್ರು ವಿವಾದ ಮಾಡಲಿ, ಯಾರು ಬೇಕಾದ್ರು ಬೈಯಲಿ. ವಿರೋಧ ಮಾಡೋರು ಮಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹಾಲಿನ ದರ (Milk Price Hike) ಏರಿಕೆಯನ್ನು ಮತ್ತೆ ಸಮರ್ಥನೆ ಮಾಡಿಕೊಂಡರು. ಇದೇ ವೇಳೆ ಹಾಲಿನ ದರ ಏರಿಕೆಗೆ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿರೋಧ ವ್ಯಕ್ತಪಡಿಸುವುದರಿಂದಲೇ ಬಿಜೆಪಿಯವರು ರೈತರ ವಿರೋಧಿಗಳು ಎಂಬುದು ಅರ್ಥ ಆಗುತ್ತದೆ. 2 ರೂ. ಜಾಸ್ತಿ ಅಗಿರೋದು ರೈತರಿಗೆ ತಲುಪುತ್ತದೆ. ರೈತರು ಎಷ್ಟು ಕಷ್ಟ, ಎಷ್ಟು ಸಂಕಷ್ಟದಲ್ಲಿ ಇದ್ದಾರೆ ಅಂತ ಬಿಜೆಪಿ ಅವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ರೈತರಿಗೆ ಹಣ ಹೋಗಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಯಾರು ಹೇಳಿದ್ದು ಕೆಎಂಎಫ್ ಅಂದರೆ ರೈತರ ಒಕ್ಕೂಟ. ಕೆಎಂಎಫ್ ಅಧ್ಯಕ್ಷರದ್ದು ಅಲ್ಲ. ಮೊದಲು ಏರಿಕೆ ಮಾಡಿದ ಹಣ ಮತ್ತು ಮಂಗಳವಾರ ಜಾಸ್ತಿ ಮಾಡಿರೋ ಹಣ ರೈತರಿಗೆ ಹೋಗುತ್ತದೆ. ಕೆಎಂಎಫ್ ಉಳಿಬೇಕು. ಕೆಎಂಎಫ್ ಅಂದರೆ ರೈತರ ಒಕ್ಕೂಟ. ರೈತರೇ ಅಲ್ಲಿ ಇರೋದು. ರೈತರು ಬಿಟ್ಟು ವರ್ತಕರು ಯಾರೂ ಇಲ್ಲ. ರೈತರಿಗೋಸ್ಕರ ಇವತ್ತು ಸಹಾಯ ಆಗ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಬಿಐನಿಂದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ
Advertisement
ನನ್ನ ಪ್ರಕಾರ ಇನ್ನು ಬೆಲೆ ಏರಿಕೆ ಜಾಸ್ತಿ ಮಾಡಬೇಕಿತ್ತು. ಯಾರು ಬೇಕಾದ್ರು ವಿವಾದ ಮಾಡಲಿ, ಯಾರು ಬೇಕಾದ್ರು ಬೈಯಲಿ. ವಿರೋಧ ಮಾಡೋರು ಮಾಡಲಿ. ರೈತರನ್ನು ಕೇಳಲಿ ರೈತರ ಪರಿಸ್ಥಿತಿ ಏನು ಅಂತ. ಅವರು ಸಾಕಲು ಆಗದೇ ಹಸುಗಳನ್ನು ಮಾರಿಕೊಳ್ಳುತ್ತಿದ್ದಾರೆ. ಬಿಜೆಪಿ ಅವರ ರೈತ ವಿರೋಧಿ ಧೋರಣೆ ಇದರಲ್ಲಿ ಎದ್ದು ಕಾಣ್ತಿದೆ. ಅವರೇ ಒತ್ತಾಯ ಮಾಡಬೇಕಿತ್ತು. ಅಮೂಲ್ ನಲ್ಲಿ ಎಷ್ಟು ಇದೆ?, ಮಹಾರಾಷ್ಟ್ರ ಬೇರೆ ರಾಜ್ಯದಲ್ಲಿ ಎಷ್ಟು ಇದೆ? ಅದನ್ನ ತಂದು ಮೊದಲು ನೋಡಲಿ. ಮೊದಲು ರೈತರನ್ನು ಬದುಕಿಸೋ ಕೆಲಸ ಬಿಜೆಪಿ ಅವರು ಮಾಡಲಿ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.