ರಾಮನಗರ: ರಾಜಕೀಯಕ್ಕೆ ಮಣಿದು ಲಾರಿ ಮಾಲೀಕರು ಮುಷ್ಕರ ಮಾಡೋದು ಸರಿಯಲ್ಲ. ಮುಷ್ಕರ ಮಾಡಿದ್ರೆ ನಿಮಗೆ ನಷ್ಟ ಆಗುತ್ತೆ. ಹಾಗಾಗಿ ಯಾವುದೇ ಮುಷ್ಕರ ಮಾಡಬೇಡಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಲಾರಿ ಮಾಲೀಕರಿಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಡಿಸೇಲ್ ದರ ಏರಿಕೆ (Diesel Price Hike) ಖಂಡಿಸಿ ಲಾರಿ ಮಾಲೀಕರು ಮುಷ್ಕರಕ್ಕೆ ಕರೆ ನೀಡಿರುವ ವಿಚಾರ ಕುರಿತು ಕನಕಪುರದಲ್ಲಿ ಡಿಸಿಎಂ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ನಾಳೆಯಿಂದ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ – ಮೈಸೂರಿನಲ್ಲಿ ಜೋಶಿ ಚಾಲನೆ; ಸರ್ಕಾರದ ವೈಫಲ್ಯ ವಿರುದ್ಧ ಕಹಳೆ
ಲಾರಿ ಮಾಲೀಕರು ಮುಷ್ಕರ (Lorry Owners Strike) ಕರೆದಿರೋ ಬಗ್ಗೆ ಮಾಹಿತಿ ಇಲ್ಲ. ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಆದಾಗ ಯಾಕೆ ಇವರು ಮುಷ್ಕರ ಮಾಡಲಿಲ್ಲ? ಆವತ್ತು ಕೂಡ ಮುಷ್ಕರ ಮಾಡಬಹುದಿತ್ತಲ್ಲ. ಈಗ ರಾಜಕೀಯ ಕಾರಣಕ್ಕಾಗಿ ಮುಷ್ಕರ ಮಾಡ್ತಿದ್ದಾರೆ. ಈಗಲೂ ಎಲ್ಲಾ ಲಾರಿ ಮಾಲೀಕರಿಗೆ ಮನವಿ ಮಾಡ್ತೀನಿ. ಸುಮ್ಮನೆ ರಾಜಕೀಯಕ್ಕೆ ಒಳಗಾಗಬೇಡಿ. ರಾಜಕೀಯಕ್ಕೆ ಮಣಿದು ಮುಷ್ಕರ ಮಾಡೋದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಈ ಸರ್ಕಾರ ಪೋಸ್ಟ್ ಮಾರ್ಟಂಗೂ ದರ ವಿಧಿಸಿಬಿಟ್ರೆ ಸಾಯೋದಕ್ಕೂ ಜನ ಹಿಂಜರೀತಾರೆ – ಸಿ.ಟಿ ರವಿ ಲೇವಡಿ
ಮುಷ್ಕರ ಮಾಡಿದ್ರೆ ನಿಮಗೆ ನಷ್ಟ ಆಗುತ್ತೆ. ನೀವು ಸರ್ಕಾರದ ಜೊತೆ ಇರಬೇಕು. ನಿಮ್ಮ ಬದುಕು ನೋಡಿ, ಒಂದು ದಿನ ಮುಷ್ಕರ ಮಾಡಿದ್ರೆ ಆ ನಷ್ಟ ಭರಿಸಲು ನಿಮ್ಮ ಕೈಯಲ್ಲಿ ಆಗಲ್ಲ. ಲಾರಿ ಇಎಂಐ, ಬಡ್ಡಿ, ಡ್ರೈವರ್ ಸಂಬಳ ಇದೆಲ್ಲ ಹೊರೆ ಆಗುತ್ತೆ. ದಯಮಾಡಿ ಯಾವುದೇ ಮುಷ್ಕರ ಮಾಡಬೇಡಿ ಎಂದು ಲಾರಿ ಮಾಲೀಕರಿಗೆ ಮನವಿ ಮಾಡಿದರು. ಇದನ್ನೂ ಓದಿ: ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್ ಸಿಬಿಐಗೆ ವಹಿಸುವ ಅಗತ್ಯ ಇಲ್ಲ: ಪರಮೇಶ್ವರ್