ಬೆಂಗಳೂರು: ಮೈಕ್ರೋ ಫೈನಾನ್ಸ್ (Microfinance) ಕಂಪನಿಗಳು ಕುರುಕುಳ ನೀಡದಂತೆ ಸಿಎಂ ಹಾಗೂ ಸಹಕಾರ ಸಚಿವರು ಈಗಾಗಲೇ ಆದೇಶ ಮಾಡಿದ್ದಾರೆ. ಆದ್ರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸ್ತಾರೆ, ಹಣ ವಸೂಲಿ ಮಾಡ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಜಾರಿಯಾಗುತ್ತೆ ಸುಗ್ರೀವಾಜ್ಞೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದರು.
ಮೈಕ್ರೋ ಫೈನಾನ್ಸ್ ಮಸೂದೆ ಜಾರಿ ಬಗ್ಗೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಡಿಸಿಎಂ, ನಾವು ಬಿಲ್ ತರ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ಆರೋಗ್ಯ ಸರಿಯಿಲ್ಲ. ಒಂದೆರಡು ದಿನ ವಿರಾಮದ ನಂತರ ಬರ್ತಾರೆ. ಆಮೇಲೆ ಸುಗ್ರೀವಾಜ್ಞೆ ಬಗ್ಗೆ ಕ್ರಮ ಜರುಗಿಸ್ತಾರೆ ಎಂದರು.
Advertisement
Advertisement
ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ಎಲ್ಲೆಡೆ ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಗಳು ಬೆಳಕಿಗೆ ಬರ್ತಿದೆ. ಈಗಾಗಲೇ ಸಿಎಂ, ಸಹಕಾರ ಸಚಿವರು ಕಿರುಕುಳ ನೀಡದಂತೆ ಆದೇಶ ಮಾಡಿದ್ದಾರೆ. ಬಡವರನ್ನ ನಾವು ರಕ್ಷಣೆ ಮಾಡಬೇಕು. ಆದ್ರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸ್ತಾರೆ. ಎಲ್ಲ ಪಕ್ಷದ ಕಾರ್ಯಕರ್ತರಿಗೆ ಹೇಳ್ತೇನೆ. ಕಿರುಕುಳ ಗಮನಕ್ಕೆ ತರುವಂತೆ ಮನವಿ ಮಾಡುತ್ತೇನೆ. ಪ್ರತಿ ಜಿಲ್ಲಾ ಕಚೇರಿಗಳಿಗೂ ಈ ಬಗ್ಗೆ ಹೇಳಿದ್ದೇವೆ. ಎಸ್ಪಿಗಳೊಂದಿಗೂ ಸಭೆ ಮಾಡ್ತೇವೆ. ಸುಗ್ರೀವಾಜ್ಞೆ ಆದಷ್ಟು ಬೇಗ ಜಾರಿಯಾಗುತ್ತೆ ಎಂದು ನುಡಿದರು.
Advertisement
Advertisement
ಇನ್ನೂ ಜೆಡಿಎಸ್ ಶಾಸಕರ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಯಾರ ಜೊತೆಯೂ ಮಾತನಾಡಿಲ್ಲ. ಜೆಡಿಎಸ್ ಶಾಸಕರ ಜೊತೆ ಮಾತನಾಡಿಲ್ಲ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿಗೆ ನೋವಿದೆ. ಅವರು ಎಷ್ಟು ದಿನ ಅಂತ ಕಾಯ್ತಾರೆ. ನಾನು ಯಾರ ಹೆಸರನ್ನೂ ಹೇಳಲ್ಲ. ಅವರಿಗೆ ನ್ಯಾಷನಲ್ ಪಾರ್ಟಿ ಸೇರಬೇಕೆಂಬ ಆಸೆ ಇದೆ. ಅದಕ್ಕೆ ಬನ್ನಿ ಸೇರಿಕೊಳ್ಳಿ ಅಂದಿದ್ದೇನೆ. ನನ್ನ ಜೊತೆ ಯಾರು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನವೆಂಬರ್ 15-16ರಂದು ಸಿಎಂ ಬದಲಾವಣೆ ಬಗ್ಗೆ ಅಶೋಕ್ ಭವಿಷ್ಯ ನುಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೂ ಶಾಸ್ತ್ರದ ಬಗ್ಗೆ ಗೊತ್ತಿದೆ. ಅವರು ಬೋರ್ಡ್ ಯಾವಾಗ ಹಾಕಿಕೊಂಡ್ರೋ ಗೊತ್ತಿಲ್ಲ. ನಾನು ಶೀಘ್ರದಲ್ಲೇ ಅವರಿಂದ ಜ್ಯೋತಿಷ್ಯ ಕೇಳ್ತೇನೆ ಎಂದು ವ್ಯಂಗ್ಯವಾಡಿದರು.
ಇನ್ನೂ ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ, ಪ್ರಧಾನಿಯವರು ಗ್ಯಾರೆಂಟಿ ಬಗ್ಗೆ ಏನು ಹೇಳಿದ್ರು…? 5 ಗ್ಯಾರಂಟಿ ಕೊಟ್ಟಾಗ ದಿವಾಳಿ ಅಂದಿದ್ರು. ಬೆಲೆ ಏರಿಕೆಯಿಂದ ಹೆಣ್ಣುಮಕ್ಕಳು ತತ್ತರಿಸಿದ್ದಾರೆ. ಬೆಲೆ ಹೆಚ್ಚಾಗಿದೆ ಬದುಕೋಕೆ ಆಗಲ್ಲ ಅಂತಿದ್ದರು. ಅದಕ್ಕೆ ನಾವು ಗ್ಯಾರೆಂಟಿ ತಂದಿದ್ದು. ಈಗ ಅವರೇ ಎಲ್ಲಾ ಕಡೆ ಶುರು ಮಾಡಿದ್ದಾರೆ. ನಮ್ಮದು ದಿವಾಳಿ ಆಗಿದ್ಯಾ ಅನ್ನೋದನ್ನ ಅವರೇ ಹೇಳಲಿ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ ಮಾಡಿದ್ದರು. ಈವರೆಗೆ ಒಂದು ರೂಪಾಯಿ ಕೂಡ ಬಂದಿಲ್ಲ. ಅವರು ಮೊದಲು ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ಕುಟುಕಿದರು.