ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆ ಮಾಡದಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಸೂಚನೆ ನೀಡಿದ್ದು, ನಾನು ಅವರ ಮಾತಿಗೆ ಬದ್ಧನಾಗಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Sivakumar) ತಿಳಿಸಿದರು.
ಡಿಕೆ ಶಿವಕುಮಾರ್ ಸಿಎಂ ಆಗೋದನ್ನ ತಡೆಯೋಕೆ ಯಾರಿಂದಕೂ ಸಾಧ್ಯವಿಲ್ಲ ಎಂಬ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಹೇಳಿಕೆಗೆ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಕರ್ನಾಟಕ ಎಲ್ಲಿದೆ ಗೊತ್ತಿಲ್ಲ ಅಂದಿದ್ರು – ಶಾಸಕ ರವಿ ಗಣಿಗ ನಿಗಿನಿಗಿ ಕೆಂಡ
Advertisement
Advertisement
ವೀರಪ್ಪ ಮೊಯ್ಲಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ನಾನು ಕಾರ್ಯಕರ್ತರ ಸಭೆ ಮಾಡಲು ಹೋಗಿದ್ದೆ. ಮೊಯ್ಲಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಮಾತಾಡಬಾರದು ಅಂತ ಹೇಳಿದ್ದಾರೆ. ನಾನು ಅದಕ್ಕೆ ಬದ್ದವಾಗಿದ್ದೇನೆ ಅಂತ ತಿಳಿಸಿದರು. ಇದನ್ನೂ ಓದಿ: ನನ್ನ ಮಾತು ಕೇಳ್ದಿದ್ರೆ ಕಂಪ್ಲೇಂಟ್ ಕೊಡ್ತೀನಿ – ಕಲಬುರಗಿಯಲ್ಲಿ ಪತ್ನಿ ಕಿರುಕುಳಕ್ಕೆ ನವವಿವಾಹಿತ ಬಲಿ