ಬೆಂಗಳೂರು: ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವಿಪಕ್ಷಗಳ ನವೆಂಬರ್ ಕ್ರಾಂತಿ ಚರ್ಚೆ ವಿಚಾರಕ್ಕೆ ಬ್ರೇಕ್ ಹಾಕುವ ಯತ್ನ ಮಾಡಿದ್ದಾರೆ.
ಲಾಲ್ ಬಾಗ್‌ನಲ್ಲಿ ಬೆಂಗಳೂರು (Bengaluru) ನಡಿಗೆ ಹೆಸರಿನಲ್ಲಿ ನಡೆಸಿದ ಸಾರ್ವಜನಿಕರ ಭೇಟಿ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನವೆಂಬರ್ ಕ್ರಾಂತಿ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ. ಯಾರೋ ಪಬ್ಲಿಕ್ ನೀವು ಸಿಎಂ ಆಗೋ ಟೈಂ ಹತ್ತಿರ ಬರಲಿ ಅಂದ್ರು. ನಾನು ಅದಕ್ಕೆ ಪ್ರತಿಕ್ರಿಯಿಸಿಲ್ಲ. ನನ್ನ ಹೇಳಿಕೆಯನ್ನ ತಿರುಚುವ ಕೆಲಸ ಆಗ್ತಿದೆ ಎಂದಿದ್ದಾರೆ. ಇದನ್ನೂ ಓದಿ: 30*40 ಮನೆ ವಿದ್ಯುತ್ ಸಂಪರ್ಕದ ಓಸಿಗೆ ಅಸ್ತು – ಲಕ್ಷಾಂತರ ಜನಕ್ಕೆ ಗುಡ್‌ನ್ಯೂಸ್ ಕೊಟ್ಟ ಡಿಕೆಶಿ
ಇದೇ ವೇಳೆ ಮಾಧ್ಯಮಗಳಿಗೆ ಸಲಹೆ ನೀಡಿದ ಅವರು, ಯಾರೋ ನಾಗರಿಕರು ಮುಖ್ಯಮಂತ್ರಿ ಆಗುವ ಸಮಯ ಹತ್ತಿರ ಬಂತಾ ಅಂತ ಕೇಳಿದ್ರು, ಅದಕ್ಕೆ ನಾನು ಉತ್ತರಿಸಿಲ್ಲ. ನನ್ನ ಮಾತು ಹತ್ರ ಬರ್ತಿದೆ ಅಂತ ತಿರುಚಿ ತೋರಿಸಬೇಡಿ. ಸುಳ್ಳು ನ್ಯೂಸ್ ಕ್ರಿಯೇಟ್ ಮಾಡ್ತಿರಾ? ಮೀಡಿಯಾದವರು ರಾಜಕಾರಣ ಮಾಡಬೇಡಿ ಎಂದು ಹೇಳಿದ್ದಾರೆ.
ನಾನು ಮುಖ್ಯಮಂತ್ರಿ ಆಗೋ ಟೈಂ ಹತ್ತಿರ ಬಂದಿದೆ ಅಂತ ಹೇಳಿಲ್ಲ. ನನ್ನ ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡಲು ಹೊರಟಿದ್ದೇನೆ. ಸುಳ್ಳು ಸುದ್ದಿ ಹಾಕಿದ್ರೆ ಮಾನನಷ್ಟ ಕೇಸ್ ಹಾಕ್ತೀನಿ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಜೊತೆಗಿನ ಫೋಟೊ ಶೇರ್ – ರಾಜಕೀಯ ಎಂಟ್ರಿಗೆ ಸಿದ್ದರಾಮಯ್ಯ ಮೊಮ್ಮಗ ಸಿದ್ಧತೆ?