– ʻಕೈʼ ನಾಯಕರ ಭೇಟಿ ಬಗ್ಗೆ ಡಿಕೆಶಿ ಫಸ್ಟ್ ರಿಯಾಕ್ಷನ್
– ಖರ್ಗೆ ಮನೆಯ ಬಾಗಿಲಲ್ಲೇ ಡಿಕೆಶಿ ಬಣದ ಶಾಸಕರು 10 ನಿಮಿಷ ಚರ್ಚೆ
ಬೆಂಗಳೂರು: ನನಗೆ ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಗೊತ್ತಿಲ್ಲ, ನನಗೆ ಆರೋಗ್ಯ ಸರಿಯಿಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಕೆಲ ಶಾಸಕರು ದೆಹಲಿಗೆ ಭೇಟಿ ನೀಡಿರುವ ವಿಚಾರವಾಗಿ ಮಾತನಾಡಿದ್ದಾರೆ. ನನಗೆ ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಗೊತ್ತಿಲ್ಲ. ನನ್ನ ಆರೋಗ್ಯವೂ ಸರಿಯಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಿಎಂ ಆಗೋದನ್ನೇ ಕಾಯ್ತಿದ್ದೀನಿ – ಆಪ್ತ ಶಾಸಕ ಶಿವಗಂಗಾ ಬಸವರಾಜ್; ದಿಲ್ಲಿ ಭೇಟಿ ಬಗ್ಗೆ ʻಕೈʼ ನಾಯಕರು ಏನಂತಾರೆ?
ಅಲ್ಲದೇ ಮೈಸೂರಿನಲ್ಲಿ ನಾನೇ 5 ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಹಳ ಸಂತೋಷ. ಯಾರು ಇಲ್ಲ ಅಂತ ಹೇಳಿದವರು? ಅವರು ಸಿಎಂ ಆಗಿರಲ್ಲ ಅಂತ ಯಾರೂ ಪ್ರಶ್ನಿಸಿಲ್ಲ. ನಮ್ಮ ಪಕ್ಷ ಅವರಿಗೆ ಸಿಎಂ ಆಗಿ ಜವಬ್ದಾರಿ ಕೊಟ್ಟಿದೆ. ನಾವೆಲ್ಲ ಒಟ್ಟಾಗಿ ಕೆಲಸ ಮಾಡ್ತೇವೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ʻಕೈʼ ಸರ್ಕಾರಕ್ಕೆ ಎರಡೂವರೆ ವರ್ಷ ಹೊತ್ತಲ್ಲೇ ನವೆಂಬರ್ ಕ್ರಾಂತಿನಾ? – ಡಿಕೆ ಆಪ್ತೇಷ್ಠ ಶಾಸಕರ ದೆಹಲಿ ಪರೇಡ್
ಖರ್ಗೆ ಮನೆಯ ಬಾಗಿಲಲ್ಲೇ 10 ನಿಮಿಷ ಚರ್ಚೆ
ಇನ್ನೂ ಡಿಕೆಶಿ ಬೆಂಬಲಿತ ಕೆಲ ಶಾಸಕರು ದೆಹಲಿಗೆ ತೆರಳುವ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿ 10 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಖರ್ಗೆ ಅವರ ಮನೆಯ ಒಳಗೂ ಹೋಗದೇ ಬಾಗಿಲಲ್ಲೇ ನಿಂತು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಶಾಸಕರು ತೆರಳಿದ್ದಾರೆ.

