ಬೆಂಗಳೂರು: ಹನಿಟ್ರ್ಯಾಪ್ (Honey Trap) ಬಗ್ಗೆ ರಾಜಣ್ಣ ನನ್ನ ಬಳಿಯೂ ಕೆಲವೊಂದು ವಿಚಾರ ಹೇಳಿಕೊಂಡಿದ್ದಾರೆ. ಎಲ್ಲವನ್ನೂ ನಿಮ್ಮ ಬಳಿ ಬಿಚ್ಚಿಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ರಾಜಣ್ಣ (KN Rajanna) ನನ್ನನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಕೆಲವೊಂದು ವಿಚಾರವನ್ನು ನನ್ನ ಬಳಿಯೂ ಹೇಳಿದರು. ನಾನು ದೂರು ಕೊಡಲು ಹೇಳಿದೆ, ಅವರು ಏನು ಮಾತನಾಡಿದರು ಎಂಬುದನ್ನ ಎಲ್ಲವನ್ನೂ ನಿಮ್ಮ ಬಳಿ ಬಿಚ್ಚಿ ಇಡೋಕೆ ಆಗಲ್ಲ ಎಂದರು. ಇದನ್ನೂ ಓದಿ: ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಪತ್ತೆ ಹಚ್ಚಿದ ಶ್ವಾನ
ಇದೇ ವೇಳೆ ರಾಜೇಂದ್ರ ರಾಜಣ್ಣ ಸಿಎಂ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನತ್ರ ಯಾರ ಬಗ್ಗೆಯೂ ಕೇಳಬೇಡಿ. ನನ್ನ ಇಲಾಖೆಯದ್ದು ಇದ್ರೆ ಕೇಳಿ. ಸಿಎಂ ಅಂದಾಗ ಎಲ್ಲರೂ ಭೇಟಿ ಮಾಡ್ತಾರೆ. ಸದನದಲ್ಲಿ ಗರಂ ಆದ್ರೆ ಅದನ್ನ ನಿಮ್ಮಬಳಿ ಇಟ್ಟುಕೊಳ್ಳಿ, ಎಲ್ಲಾ ವಿಚಾರ ಬೋಗಸ್. ಸುಮ್ಮನೆ ಸೃಷ್ಟಿ ಮಾಡ್ತಿದ್ದಾರೆ ಇದೆಲ್ಲಾ ಅನಗತ್ಯ ವಿಚಾರ ಎಂದಿದ್ದಾರೆ. ಇದನ್ನೂ ಓದಿ: ಪೈಲಟ್‌ಗಳಿಲ್ಲದ ವಿಮಾನಕ್ಕೆ ಏಕೆ ಹತ್ತಿಸುತ್ತೀರಿ – ಏರ್ ಇಂಡಿಯಾ ವಿರುದ್ಧ ಡೇವಿಡ್ ವಾರ್ನರ್ ಗರಂ!
ರಾಜೇಂದ್ರ, ರಾಜಣ್ಣ ದೂರು ಕೊಡದ ಬಗ್ಗೆ ಮಾತನಾಡಿದ ಡಿಸಿಎಂ, ಸಿಎಂ ಅವರನ್ನೇ ಕೇಳಿ, ಅವರೇ ಹೇಳ್ತಾರೆ. ನಾನು ಕೆಪಿಸಿಸಿ ಅಧ್ಯಕ್ಷ ಆಗಿ ಅವರನ್ನ ಕೇಳಿದೆ. ನನ್ನ ಬಳಿ ಏನೂ ಇಲ್ಲ ಅಂತ ಹೇಳಿದ್ದಾರೆ. ನಮ್ಮಿಬ್ಬರ ನಡುವಿನ ಚರ್ಚೆ ಬಿಚ್ಚಿ ಹೇಳಲು ಆಗಲ್ಲ. ಅವರದ್ದೇನೋ ಇದರ ಮೇಲೆ ಹೇಳಿದ್ದಾರೆ. ಏನಾದ್ರೂ ಇದ್ರೆ ಕಂಪ್ಲೆಂಟ್ ಕೊಡಪ್ಪ ಅಂತ ಹೇಳಿದ್ದೇನೆ. ನಿನ್ನೆ ಮಾಧ್ಯಮದಲ್ಲಿ ಏನೋ ಹೇಳಿದ್ದಾರೆ. ಇದರ ಮೇಲೆ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ನುಡಿದಿದ್ದಾರೆ. ಇದನ್ನೂ ಓದಿ: ತಮನ್ನಾ ಜೊತೆ ವಸಿಷ್ಠ ಸಿಂಹ ಸಿನಿಮಾ- ‘ಒಡೆಲಾ 2’ ಬಗ್ಗೆ ಹೊರಬಿತ್ತು ಬಿಗ್ ಅಪ್‌ಡೇಟ್
ಸಚಿವ ರಾಜಣ್ಣ ಪುತ್ರ ಹೇಳಿದ್ದೇನು?
ಇನ್ನೂ ಹನಿಟ್ರ್ಯಾಪ್ ವಿಚಾರವಾಗಿ `ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ ಎಂಎಲ್‌ಸಿ ರಾಜೇಂದ್ರ ರಾಜಣ್ಣ, ಈ ಬಗ್ಗೆ ಹೈಕಮಾಂಡ್‌ಗೆ ದೂರು ಕೊಡುತ್ತೇನೆ. 3-4 ದಿನ ಬಿಟ್ಟು ದೆಹಲಿಗೆ ಹೋಗಿ ಹೈಕಮಾಂಡ್‌ಗೆ ಹೇಳುತ್ತೇವೆ. ನನಗೂ ಫೋನ್ ಕಾಲ್ ಹಾಗೂ ವೀಡಿಯೋ ಕಾಲ್ ಮೂಲಕ ಟ್ರ‍್ಯಾಪ್ ಮಾಡಲು ಪ್ರಯತ್ನ ಮಾಡಿದ್ದರು. ಆ ಎಲ್ಲಾ ನಂಬರ್ ಹಾಗೂ ಕಾಲ್ ಡೀಟೆಲ್ಸ್ ನನ್ನ ಬಳಿ ಇದೆ. ಡಿಜಿಗೆ ಈ ಮೂಲಕ ದೂರು ಕೊಡುತ್ತೇನೆ. ಜೊತೆಗೆ ರಾಜಣ್ಣರಿಗೆ ಲೇಡಿ ಸಹಿತ ಮೂರ್ನಾಲ್ಕು ಜನ ಬಂದು ಬಲೆಗೆ ಬೀಳಿಸಲು ಪ್ರಯತ್ನ ಮಾಡಿದ್ದಾರೆ ಎಂದು ಬಾಂಬ್ ಸಿಡಿಸಿದ್ರು.