– ವಿದೇಶದಿಂದ ಆಗಮಿಸಿ ಕಲಬುರಗಿಗೆ ತೆರಳಿದ ಡಿ.ಕೆ ಶಿವಕುಮಾರ್
– ಮುನಿರತ್ನ ಬಂಧನದ ಬಗ್ಗೆ ಬಿಜೆಪಿಗರು ಮಾತಾಡಲಿ
ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ನಮ್ಮ ಲೀಡರ್, ನಮ್ಮ ಪಾರ್ಟಿ ನನ್ನಿಷ್ಟ, ಭೇಟಿ ಮಾಡೋಕೆ ಯಾರ ಅನುಮತಿ ಕೇಳಬೇಕು? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಪ್ರಶ್ನಿಸಿದ್ದಾರೆ.
Advertisement
ವಿದೇಶದಿಂದ ವಾಪಸ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ವೇಳೆ ನಾನು ಯಾರ ಬಳಿ ಮಾತಾಡಬೇಕು? ಏನು ಮಾಡಬೇಕು? ಎಲ್ಲವನ್ನೂ ನಿಮ್ಮ ಬಳಿ ಹೇಳ್ಕೋಬೇಕಾ? ನನ್ನ ತಮ್ಮ, ತಂಗಿ, ಕುಟುಂಬದ ಜೊತೆ ಏನು ಮಾತಾಡ್ತೇನೆ ಎಲ್ಲಾ ಹೇಳಬೇಕಾ ಎಂದು ಪ್ರಶ್ನಿಸಿದ್ದಾರೆ.
Advertisement
ಶಾಸಕ ಮುನಿರತ್ನ (Muniratna) ಅವರ ಬಂಧನದ ವಿಚಾರವಾಗಿ, ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಈ ಬಗ್ಗೆ ಬಿಜೆಪಿಯ (BJP) ಆರ್.ಆಶೋಕ್, ವಿಜಯೇಂದ್ರ, ಇನ್ನೂ ದೊಡ್ಡ ದೊಡ್ಡ ನಾಯಕರು ಇದ್ದಾರೆ. ಅಲ್ಲದೇ ಆ ಸಮುದಾಯದ ಮುಖ್ಯಸ್ಥರು, ಸ್ವಾಮಿಗಳು ಅವರೆಲ್ಲ ಮಾತಾಡಬೇಕು. ಸರಿ ಇದ್ದರೆ ಸರಿ, ತಪ್ಪಿದ್ದರೆ ತಪ್ಪು ಎಂದು ಹೇಳಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡು ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ.
Advertisement
Advertisement
ಇನ್ನೂ ನಾಗಮಂಗಲ ಗಣೇಶ ಮೆರವಣಿಗೆ ವೇಳೆ ಗಲಭೆ ವಿಚಾರವಾಗಿ, ಸರ್ಕಾರ ಇದನ್ನು ನಿಭಾಯಿಸುತ್ತದೆ ಎಂದಿದ್ದಾರೆ. ಬಳಿಕ ಗುಲ್ಬರ್ಗ ವಿಮೋಚನಾ ದಿನಾ ಆಚರಣೆ ಇದ್ದು, ಅಲ್ಲಿ ಕ್ಯಾಬಿನೆಟ್ ಇದೆ ಎಂದು ತೆರಳಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ವಿದೇಶಿ ಪ್ರವಾಸ ಮುಗಿಸಿ ನಗರಕ್ಕೆ ವಾಪಸ್ ಆಗಿದ್ದು, ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಕಲಬುರಗಿಗೆ ಪ್ರಯಾಣ ಬೆಳೆಸಿದ್ದಾರೆ.