– ಕನ್ನಡಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ
ಬೆಂಗಳೂರು: ಕಾನೂನನ್ನ ಕೈಗೆತ್ತಿಕೊಳ್ಳುವುದಕ್ಕೆ ನಾವು ಬಿಡುವುದಿಲ್ಲ. ಎಲ್ಲದಕ್ಕೂ ಇತಿ ಮಿತಿ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಕರವೇ ಪ್ರತಿಭಟನೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಪರ ಹೋರಾಟಕ್ಕೆ (Karnataka Rakshana Vedike Activists protest) ನಮ್ಮ ಬೆಂಬಲವಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿಗಳನ್ನ ಹಾಳು ಮಾಡೋದು ತಪ್ಪು. ಯಾರ ಆಸ್ತಿನೂ ನಾಶ ಮಾಡಬಾರದು ಎಂದು ಹೇಳಿದರು.
Advertisement
Advertisement
ನಾವು ಕನ್ನಡಿಗರೇ ಪ್ರತಿಭಟನೆ ಮಾಡಿ ಅಂತ ನಾನೇ ಹೇಳ್ತೀನಿ. ಪ್ರಜಾಪ್ರಭುತ್ವದಲ್ಲಿ ಅವರು ಏನು ಬೇಕಾದರೂ ಮಾಡಲಿ. ಬೇರೆ ಕಡೆಯಿಂದ ಬಂದು ಇಲ್ಲಿ ಬದುಕುತ್ತಿದ್ದಾರೆ. ಅವರಿಗೆ ತಿಳಿ ಹೇಳೋಣ, ಆದರೆ ಅವರನ್ನ ಬೆದರಿಸಿ ಮಾಡುವುದಲ್ಲ ಎಂದು ಡಿಕೆಶಿ ತಿಳಿಸಿದರು. ಇದನ್ನೂ ಓದಿ: ರಾತ್ರೋರಾತ್ರಿ ನಾರಾಯಣಗೌಡ ಅರೆಸ್ಟ್, 14 ದಿನ ನ್ಯಾಯಾಂಗ ಬಂಧನ- ಇಂದೂ ಪ್ರತಿಭಟನೆಗೆ ಕರೆ
Advertisement
ನಾರಾಯಣ ಗೌಡ ಅವರು ಬೇಕಿದ್ದರೆ ಬಂದು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲಿ. ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ಸಿಎಂ ಕೂಡ ಸಚಿವರಿಗೆ ಕನ್ನಡದಲ್ಲಿಯೇ ಟಿಪ್ಪಣಿ ಬರಿಯೋದಕ್ಕೆ ಹೇಳಿದ್ದಾರೆ. ನಾವು ಕನ್ನಡಿಗರೇ, ಅವರ ಬೇಡಿಕೆ ಅನುಷ್ಠಾನಕ್ಕೆ ತರಲು ಸಮಯ ಬೇಕು ಎಂದರು.
Advertisement
ಲೋಕಸಭಾ ಚುನಾವಣಾಯಲ್ಲಿ ತಕ್ಕ ಪಾಠ ಕಳಿಸೊ ವಿಚಾರದ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಡಿಕೆಶಿ, ನಾವೂ ತಪ್ಪು ಮಾಡಲು ಬಿಡಲ್ಲ. ಅವರು ಕಾನೂನಿನ ಅಡಿಯಲ್ಲಿ ಹೋರಾಟ ಮಾಡಬೇಕು.