– ಆದಿಚುಂಚನಗಿರಿ ಶ್ರೀಗಳನ್ನು ರಾಜಕೀಯಕ್ಕೆ ಎಳೆದು ತರಲ್ಲ, ಅವರ ಬಗ್ಗೆ ಗೌರವವಿದೆ
ಬೆಂಗಳೂರು: ಪಾಪ ಕುಮಾರಸ್ವಾಮಿಯವರು (H.D Kumaraswamy) ಸ್ವಾಮೀಜಿಯವರ (Adichunchanagiri Sri) ಕಾರ್ಯಕ್ರಮಕ್ಕೆ ಹೋಗಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಆಪರೇಷನ್ ಮುಗಿದು ಹೋಗಿತ್ತು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.
Advertisement
ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಯವರಿಗೂ ಒಕ್ಕಲಿಗ ಒಬ್ಬ ಸಿಎಂ ಆಗಿದ್ದಾನೆ ಎಂದು ಅಭಿಮಾನ ಇತ್ತು. ನಮಗೂ ಅಭಿಮಾನ, ನಿಮಗೂ ಅಭಿಮಾನ ಅಲ್ವಾ? ಅದಕ್ಕೆ ಯಾರು ಸರ್ಕಾರ ತೆಗೆದರೋ ಅವರನ್ನೇ ಜೊತೆಗೆ ಹಾಕಿಕೊಂಡು ಓಡಾಡಿದ್ರೆ ಹೇಗೆ ಎಂದು ಹೆಚ್‍ಡಿಕೆಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ 2024- ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ನಾಳೆ ನಾಮಪತ್ರ ಸಲ್ಲಿಕೆ
Advertisement
ಚೆಲುವರಾಯಸ್ವಾಮಿ ಹಾಗೂ ಕೃಷ್ಣ ಭೈರೇಗೌಡರು ಸಹ ಸ್ವಾಮೀಜಿ ಬಳಿ ಹೋಗಿ ಆಶೀರ್ವಾದ ಪಡೆದುಕೊಂಡರು. ಹಿರಿಯರ ಆಶೀರ್ವಾದ ಬೇಕಲ್ಲ, ಅದರಲ್ಲಿ ತಪ್ಪೇನಿಲ್ಲ. ಕುಮಾರಸ್ವಾಮಿ ಆಶೀರ್ವಾದ ಕೇಳಿದ್ರಲ್ಲಿ ತಪ್ಪಿಲ್ಲ. ಮಂಜುನಾಥ್ ಆಶೀರ್ವಾದ ಕೇಳಿದರೂ ತಪ್ಪು ಎಂದು ನಾನು ಹೇಳಲ್ಲ. ಬೆನ್ನಿಗೆ ಚೂರಿ ಹಾಕಿದ್ರಲ್ಲ ಅವರನ್ನು ಕರೆದುಕೊಂಡು ಹೋದ್ರೆ, ಯಾರು ಸರ್ಕಾರ ತೆಗೆದ್ರಲ್ಲ ಅವರನ್ನೆಲ್ಲ ಕರೆದುಕೊಂಡು ಹೋದ್ರೆ, ಸಮಾಜಕ್ಕೆ ಏನೆಂದು ಉತ್ತರ ಕೊಡ್ತಾರೆ ಎಂದು ಕುಟುಕಿದ್ದಾರೆ.
Advertisement
ಎಸ್.ಟಿ ಸೋಮಶೇಖರ್ ಸ್ಥಳೀಯ ವಿಚಾರಗಳ ಮೇಲೆ ನಿಂತಿದ್ದಾರೆ. ಅವರನ್ನು ನಾನು ಇದುವರೆಗೆ ಕಾಂಗ್ರೆಸ್‍ಗೆ ಸೇರಿಸಿಕೊಂಡಿಲ್ಲ. ಯಾರು ಸರ್ಕಾರ ಬೀಳಿಸುವಾಗ ಕಾಂಗ್ರೆಸ್‍ನಿಂದ ಶಾಸಕರನ್ನು ಕಳಿಸಿದ್ದು ಎಂದು ಅಶ್ವತ್ಥ ನಾರಾಯಣ ಅವರೇ ಹೇಳಲಿ. ಇಲ್ಲಿ ನಾನು ಸ್ವಾಮೀಜಿಗಳನ್ನು ಎಳೆದು ತರುತ್ತಿಲ್ಲ. ಆದಿಚುಂಚನಗಿರಿ ಶ್ರೀಗಳ ಬಗ್ಗೆ ನನಗೆ ಗೌರವವಿದೆ. ನಾನು ಸ್ವಾಮೀಜಿಗಳನ್ನು ರಾಜಕೀಯಕ್ಕೆ ಎಳೆದು ತರುತ್ತಿಲ್ಲ. ಅವರು ಉತ್ತರ ಕೊಡಲಿ ಎಂದು ಕೇಳುತ್ತಿಲ್ಲ. ಒಕ್ಕಲಿಗರ ಸರ್ಕಾರ ಎಂದು ಅಭಿಮಾನ ಇದ್ದೇ ಇರುತ್ತದೆ. ಅವರವರ ಜಾತಿ ಅವರವರ ಧರ್ಮ ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ.
Advertisement
ಹುಟ್ಟುವಾಗ ಜಾತಿ ಇರದೇ ಇರಬಹುದು, ಸಾಯುವಾಗ ಜಾತಿ ಬಂದೇ ಬರುತ್ತದೆ. ನಾವ್ಯಾರೂ ಜಾತಿ ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ನಮ್ಮ ಅಪ್ಪ-ಅಮ್ಮ, ಧರ್ಮ ಜಾತಿ ಬಂದೇ ಬರುತ್ತದೆ. ನಾಮಕರಣ ಮಾಡುವುದೂ ಒಂದು ಧರ್ಮವೇ, ಕಿವಿ ಚುಚ್ಚುವುದೂ ಒಂದು ಧರ್ಮವೇ, ಮೂಗು ಚುಚ್ಚುವುದೂ ಒಂದು ಧರ್ಮವೇ. ಒಕ್ಕಲಿಗರು ಯಾರೂ ದಡ್ಡರಲ್ಲ, ಯಾವ ಜಾತಿಯವರೂ ದಡ್ಡರಲ್ಲ. ವೀರಶೈವ ಇರಬಹುದು, ಎಸ್.ಸಿ, ಎಸ್.ಟಿ ಇರಬಹುದು ಯಾವುದೇ ಜಾತಿಯವರೂ ದಡ್ಡರಲ್ಲ. ಅವರವರ ಲಾಭ ಏನೂ ಎಂದು ನೋಡ್ತಾರೆ. ದೇಶಕ್ಕೆ ರಾಜ್ಯಕ್ಕೆ ನನಗೆ ಏನು ಒಳ್ಳೆಯದಾಗುತ್ತದೆ ಎಂದು ನೋಡ್ತಾರೆ. ಭಾವನೆ ನೋಡುವುದಿಲ್ಲ, ಬದುಕು ಕಟ್ಟಿಕೊಳ್ಳುವವರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಹೆಸರಲ್ಲಿ ಕಾಂಗ್ರೆಸ್‍ನವರು ಮತ ಕೇಳ್ತಿಲ್ಲ ಎಂಬ ಬಿಎಸ್‍ವೈ ಹೇಳಿಕೆ ವಿಚಾರಕ್ಕೆ, ಮೋದಿನೇ ಅವರ ಹೆಸರಲ್ಲಿ ಮತ ಕೇಳಿಲ್ಲ, ಶಿವಮೊಗ್ಗಕ್ಕೆ ಬಂದಾಗ ರಾಘವೇಂದ್ರ ಯಡಿಯೂರಪ್ಪ ಹೆಸರಲ್ಲಿ ಮತ ಕೇಳಿದ್ದು, ಅಲ್ಲಿನ ಎಂಪಿ ಮೋದಿ ಹೆಸರಲ್ಲಿ ಮತ ಕೇಳ್ತಿದ್ದಾರೆ. ಮೋದಿ ಅಲೆ ಹೊರಟೋಗಿದೆ. ಗಾಳಿ ಎಲ್ಲಾದ್ರು ಇದೆಯಾ ನೋಡಿ. ಜೆಡಿಎಸ್ ಪಕ್ಷವನ್ನು ಬಿಜೆಪಿಯವರು ಮುಗಿಸ್ತಿದ್ದಾರೆ. ಜೆಡಿಎಸ್ ಈಗ ಎಲ್ಲಿದೆ? ಜೆಡಿಎಸ್‍ಗೆ ಮುಕ್ತಿ ಕೊಟ್ಟಿದ್ದಾರೆ. ಪಕ್ಷ ವಿಸರ್ಜನೆ ಮಾಡುವ ಹಂತದಲ್ಲಿದ್ದಾರೆ. ಆ ಪಕ್ಷ ಇರಬೇಕು ಎಂಬುದ ನನ್ನ ಅಭಿಪ್ರಾಯ ಎಂದಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಹಿಂದೆಯೇ ಎಫ್‌ಸಿ ಮುಗಿದಿದ್ದ ಶಾಲಾ ಬಸ್ ಪಲ್ಟಿ – 6 ಮಕ್ಕಳ ದಾರುಣ ಸಾವು!