ನವದೆಹಲಿ: ಸುಪ್ರೀಂಕೋರ್ಟ್ (Supreme Court) ಹಿರಿಯ ವಕೀಲ, ಮಾಜಿ ಅಟಾರ್ನಿ ಜನರಲ್ (Attorney General) ಮುಕುಲ್ ರೋಹಟಿಗೆ (Mukul Rohatgi) ಅವರನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನವದೆಹಲಿಯಲ್ಲಿ (New Delhi) ಭೇಟಿಯಾಗಿದ್ದು, ಕೆಲಹೊತ್ತು ಚರ್ಚಿಸಿದ್ದಾರೆ.
ಮುಕುಲ್ ರೋಹಟಗಿ ಈ ಹಿಂದೆ ಇಡಿ, ಸಿಬಿಐ ಕೇಸ್‌ಗಳಿಗೆ ಸಂಬಂಧಪಟ್ಟಂತೆ ಡಿಕೆ ಶಿವಕುಮಾರ್ ಪರವಾಗಿ ವಾದಿಸಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅವರ ವಿರುದ್ಧ ನಡೆಯುತ್ತಿರುವ ಪ್ರಕರಣಗಳ ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಟೋದಲ್ಲಿ ಬಂದಿದ್ದಕ್ಕೆ ಬಿರಿಯಾನಿ ವಾಪಸ್ – ಬೆಂಜ್ ಕಾರ್‌ಗೆ ಶಿಫ್ಟ್ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಿದ ಜಮೀರ್
Advertisement
Advertisement
ಬುಧವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭ ಪರಿಷತ್ ಸದಸ್ಯರ ಆಯ್ಕೆ, ನಿಗಮ ಮಂಡಳಿ ನೇಮಕ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮೇಕೆದಾಟು ಸಂಬಂಧ ಟ್ರಿಬ್ಯುನಲ್ ರಚಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆ 2.O ಆರಂಭಿಸಿದ್ರಾ ರಾಹುಲ್ ಗಾಂಧಿ?
Advertisement
Web Stories