ಚಾಮರಾಜನಗರ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಭಾರತದಲ್ಲೇ ಮೊದಲ ಲಿಥಿಯಂ ಬ್ಯಾಟರಿ (Lithium Battery) ಘಟಕ ಸ್ಥಾಪನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Sivakumar) ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (Artificial Intelligence) ಸಂಯೋಜಿತ, ಪರಿಸರ ಸ್ನೇಹಿ ಸ್ಮಾರ್ಟ್ ಬ್ಯಾಟರಿ ಉತ್ಪಾದನಾ ಘಟಕ ತಲೆಎತ್ತಲು ಸಜ್ಜಾಗಿದ್ದು, ಡಿಕೆ ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ ಭೀತಿ – ಯೂನಿಫಾರಂ ಧರಿಸಿ ಫೋಟೊ, ವೀಡಿಯೋ ಅಪ್ಲೋಡ್ ಮಾಡದಂತೆ ಅರೆಸೇನಾ ಪಡೆಗಳಿಗೆ ಸೂಚನೆ
ತಲಾ 500 ಕೋಟಿ ರೂ. ವೆಚ್ಚದಲ್ಲಿ ಚಾಮರಾಜನಗರ ಸೇರಿದಂತೆ ರಾಜ್ಯದ 4 ಕಡೆ ಖಾಸಗಿ ವಲಯದಿಂದ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪಿಸಲು ಸಜ್ಜಾಗಿದ್ದು, ಮೊದಲ ಹಂತವಾಗಿ ಚಾಮರಾಜನಗರದಲ್ಲಿ ಸ್ಥಾಪಿಸಲಾಗುತ್ತಿದೆ. ಹಿಂದುಳಿದ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಭರವಸೆಯನ್ನ ಡಿ.ಕೆ ಶಿವಕುಮಾರ್ ಅವರು ನೀಡಿದ್ದಾರೆ. ಇದನ್ನೂ ಓದಿ: ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ: ಕಾಂಗ್ರೆಸ್ ಗೇಲಿಗೆ ಬಿಜೆಪಿ ತಿರುಗೇಟು
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಈಗಾಗಲೇ ಸೋಲಾರ್ ಪಾರ್ಕ್ ರಾಜ್ಯದ ಉದ್ದಗಲಕ್ಕೂ ಮಾಡಿ ವಿಶ್ವದ ಗಮನ ಸೆಳೆದಿದ್ದೇವೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದಾಗ ಸೋಲಾರ್ ಪಾರ್ಕ್ ಯೋಜನೆ ಒಪ್ಪಿ ಎಲ್ಲಾ ತಾಲೂಕುಗಳಲ್ಲಿಯೂ ಸ್ಥಾಪಿಸಲು ಯೋಜನೆ ತಂದಿದ್ದೆ. ಇದೀಗ ಸೌರ ವಿದ್ಯುತ್ ಸಂಗ್ರಹಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಅದಕ್ಕಾಗಿ ಖಾಸಗಿ ಕಂಪನಿಯವರು ೨ ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದ ೪ ಕಡೆ ಲಿಥಿಯಂ ಬ್ಯಾಟರಿ ಘಟಕ ಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಅವರಿಗೆ ಉತ್ತೇಜನ ಕೊಡುತ್ತೇವೆ ಎಂದು ಹೇಳಿದ್ದಾರೆ.
ಹೊರಗಿಂದ ಬಂದು ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸರ್ಕಾರದಿಂದಲೂ ಅಂತಹವರಿಗೆ ಎಲ್ಲಾ ರೀತಿಯ ಸಹಾಯ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಆಪರೇಷನ್ ಹಸ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮಗೆ ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ಅವರಾಗಿಯೇ ಬಂದರೆ ತಡೆಯಲು ಸಾಧ್ಯವಿಲ್ಲ. ಪಕ್ಷಕ್ಕೆ ಬಲ ತುಂಬುವ ಕಡೆ ಬಂದ್ರೆ ಸೇರಿಸಿಕೊಳ್ತೇವೆ ಎಂದಿದ್ದಾರೆ.
ಆರ್.ಅಶೋಕ್‌ಗೆ ಪ್ರೋಟೊಕಾಲ್ ವಿಚಾರ ಗೊತ್ತೇಯಿಲ್ಲ. ಅವರ ಕೈಯಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡೋಕ್ಕಾಗ್ತಿಲ್ಲ. ನಾವು ಕಾಂಗ್ರೆಸ್‌ನವರು ಎಲ್ಲಾ ರೀತಿಯ ಪ್ರೋಟೊಕಾಲ್ ಪಾಲಿಸುತ್ತೇವೆ. ಪ್ರಧಾನಿ ಕಚೇರಿಯಿಂದಲೇ ಸಿಎಂ, ಡಿಸಿಎಂ ಯಾರೂ ಬರೋದು ಬೇಡ ಅಂತಾ ನಮಗೆ ಸೂಚನೆ ಬಂದಿದೆ. ನಮಗೆ ಎಲ್ಲಾ ಪರಿಜ್ಞಾನ ಇದೆ. ಪ್ರಧಾನಿ ಮೋದಿಯವರು ಆಗಮಿಸಿದ್ದು ಆರ್.ಅಶೋಕ್ ಅವರಿಗೇ ಗೊತ್ತಿಲ್ಲ. ಏನೋ ಪ್ರಚಾರಕ್ಕೆ ಮಾತಾಡಬೇಕು ಅಂತಾ ಮಾತನಾಡಿದ್ದಾರೆ ಅಷ್ಟೇ ಎಂದು ಕುಟುಕಿದ್ದಾರೆ.
Web Stories