ಶ್ರೀರಾಮ ಅವರಪ್ಪನ ಮನೆ ಆಸ್ತಿನಾ? – ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಡಿಕೆಶಿ

Public TV
1 Min Read
DK Shivakumar

ಬೆಂಗಳೂರು: ಶ್ರೀರಾಮ ಬಿಜೆಪಿಯವರ (BJP) ಅಪ್ಪನ ಮನೆ ಆಸ್ತಿನಾ ಎಂದು ಹೇಳುವ ಮೂಲಕ ಕಮಲ ನಾಯಕರ ವಿರುದ್ಧ‌ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ, ಶಿವನ ಮಗ ಕುಮಾರನೂ ಇದ್ದಾನೆ. ಬಿಜೆಪಿಯವರಿಗೆ ಹೊಟ್ಟೆ ಉರಿ. ಏನಾದ್ರೂ ಮಾಡಿ ನಮ್ಮನ್ನ ಹಿಂದೂ ವಿರೋಧಿಗಳು ಅಂತಾ ಬಿಂಬಿಸಲು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆಗೆ ಆದೇಶ ಮಾಡಿಲ್ವಾ?. ರಾಮಲಿಂಗಾರೆಡ್ಡಿ (Ramalinga Reddy) ನೇತೃತ್ವದಲ್ಲಿ ಸಭೆ ಮಾಡಿ, ಪೂಜೆ ಮಾಡಲು ನಮ್ಮ ಸರ್ಕಾರ ಹೇಳಿದೆ. ರಘುಪತಿ ರಾಘವ ರಾಜಾರಾಮ್ ಪತೀತ ಪಾವನ ಸೀತಾರಾಮ್ ಅಂತಾ ಗಾಂಧೀಜಿ ಹೇಳಿಲ್ವಾ ಎಂದು ಪ್ರಶ್ನಿಸಿದ ಡಿಕೆಶಿ, ರಾಮನನ್ನೂ ಪೂಜಿಸ್ತೀವಿ, ಸೀತೆಯನ್ನೂ ಪೂಜಿಸ್ತೀವಿ ಎಂದರು. ಇದನ್ನೂ ಓದಿ: Bharat Jodo Nyay Yatra: ಅಸ್ಸಾಂನಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ – ಕೈ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ

Bharat Jodo Nyay Yatra 2

ರಾಹುಲ್ ಗಾಂಧಿ ಯಾತ್ರೆಗೆ ತಡೆ ಮಾಡ್ತಾ ಇದ್ದಾರೆ. ಇವತ್ತು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕಾರ್ಯಕರ್ತರು ಬಹಳ ಆಸಕ್ತಿಯಿಂದ ಅಭಿಮಾನದಿಂದ ಬಂದಿದ್ದಾರೆ. ರಾಹುಲ್ ಗಾಂಧಿ ನೇರವಾಗಿ ಮುನ್ನಡೆಯಬೇಕು. ಇವತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೀತಾ ಇದೆ. ಒಗ್ಗಟಿನಿಂದ ಮಾರ್ಗದರ್ಶನ ಆಗ್ತಾ ಇದೆ. ಯಾತ್ರೆಗೆ ಏನು ಷ್ಯಡ್ಯಂತ್ರ ನಡೀತಾ ಇದೆ ಅದು ಖಂಡನೀಯ. ನಾವು ಯಾವುದಕ್ಕೂ ಹೆದರುವುದಿಲ್ಲ. ಅವರ ಜೈಲು, ಬೇಲು, ಕೇಸು ಯಾವುದಕ್ಕೂ ಹೆದರಲ್ಲ. ಈ ದೇಶದ ಅಭಿವೃದ್ಧಿಗೆ ಐಕ್ಯತೆಗೆ ನಾವು ಒಮ್ಮತ ಮೂಡಿಸುತ್ತಿದ್ದೇವೆ ಎಂದಿದ್ದಾರೆ.

Share This Article