– ಸಿಟಿ ರವಿಗೆ ಮೆಂಟಲ್ ಟ್ರೀಟ್ಮೆಂಟ್ ಕೊಡೋಣ
ಬೆಂಗಳೂರು: ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಕೆಂಡಾಮಂಡಲರಾಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆಶಿ ಬೆಂಗಳೂರು ಅಭಿವೃದ್ಧಿ ಸಚಿವ ಅಲ್ಲ, ಬೆಂಗಳೂರು ನಿರ್ನಾಮ ಸಚಿವ ಎಂದು ಆರೋಪ ಮಾಡಿರುವ ಅಶ್ವಥ್ ನಾರಾಯಣ್ ವಿರುದ್ಧ ಕಿಡಿಕಾರಿದರು. ಅವನು ಅಶ್ವಥ್ ನಾರಾಯಣ್ (Ashwath Narayan) ಅಲ್ಲ ಅವರು, ನವರಂಗಿ ನಾರಾಯಣ. ರಾಮನಗರಕ್ಕೆ ಬಂದು ಕ್ಲೀನ್ ಮಾಡ್ತೀನಿ ಎಂದೇಳಿ ಅವರ ಪಾರ್ಟಿ ಕ್ಲೀನ್ ಮಾಡಿ ಹೋದರು. ಅವರ ಇಲಾಖೆಯಲ್ಲಿ, ಬೆಂಗಳೂರು ನಗರದಲ್ಲಿ ಏನು ಮಾಡಿದ್ದಾರೆ ಎಂದು ನಾವು ಇನ್ನೂ ಬಿಚ್ಚಿಲ್ಲ. ಏನೇನು ಆಟ ಆಡ್ತಿದ್ದಾರೆ, ಯಾರನ್ನ ಎತ್ತಿ ಕಟ್ಟುತ್ತಿದ್ದಾರೆ ಎಲ್ಲ ಗೊತ್ತಿದೆ, ಎಲ್ಲಿಗೆ ಬೇಕಾದರೂ ಹೋಗ್ಲಿ. ಸ್ವಾತಂತ್ರ್ಯ ದಿನಾಚರಣೆ ಆಗಲಿ ನಂತರ ಮಾತಾಡುವೆ ಎಂದರು.
ಕಳ್ಳರನ್ನ ರಕ್ಷಣೆ ಮಾಡೋದ್ರಲ್ಲಿ ಅಶ್ವಥ್ ನಾರಾಯಣ್ ಅವರಿಗೆ ಡಾಕ್ಟರೇಟ್ ಕೊಡಬೇಕು. ಆ ಮೆಂಟಲ್ ಟೆನ್ಷನ್‍ನಲ್ಲಿ ಇದ್ದಾರೆ. ಬೆಂಗಳೂರು ನಗರದಲ್ಲಿ, ಅವರ ಇಲಾಖೆಯಲ್ಲಿ ಏನು ಮಾಡಿದ್ರು ಅಂತ ಇನ್ನೂ ತೆಗೆದಿಲ್ಲ. ಟೈಮ್ ಬರುತ್ತೆ ಆಗ ಎಲ್ಲವೂ ಗೊತ್ತಾಗಲಿದೆ. ಕಂಪ್ಲೀಟ್ ಏನು ಮಾಡಿದ್ರು, ಹೇಗೆ ಎತ್ತಿ ಕಟ್ಟಿದ್ರು ಗೊತ್ತಾಗ್ತಿದೆ. ಕೆಲಸ ಯಾರು ಮಾಡಿದ್ದಾರೆ, ಯಾರು ನಿಜವಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ತನಿಖೆ ಮಾಡುವ ಕೆಲಸ ಮಾಡುತ್ತಿದೆ. ಇದಕ್ಕೆ ಏನೆಲ್ಲಾ ಆಟ ಆಡ್ತಿದ್ದಾರೆ, ಏನ್ ಗೇಮ್ ಮಾಡ್ತಿದ್ದಾರೆ ಮಾಡಲಿ. ಮೊನ್ನೆಯೇ ಈ ಬಗ್ಗೆ ಮಾತನಾಡಬೇಕಿತ್ತು. ಆದರೆ ಬಿಬಿಎಂಪಿಯಲ್ಲಿ ಒಂದು ಆಕ್ಸಿಡೆಂಟ್ ಆಯ್ತು. ಇಂದೂ ಬೇಡ ಪಾರ್ಟಿ ಕೆಲಸ ಇದೆ. ಇಂಡಿಪೆಂಡೆನ್ಸ್ ಡೇ ಮುಗೀಲಿ ಮಾತಾಡ್ತೀನಿ ಎಂದು ಹೇಳಿದರು. ಇದನ್ನೂ ಓದಿ: ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ ಅಂತಾ ಡಿಕೆಶಿ ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡಲಿ: ಸಿ.ಟಿ ರವಿ
ಇದೇ ವೇಳೆ ಪ್ರಾಮಾಣಿಕರಾಗಿದ್ದರೆ ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂದಿದ್ದ ಸಿಟಿ ರವಿ (C.T Ravi) ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ಸಿ.ಟಿ.ರವಿಗೂ ಟ್ರೀಟ್ ಮೆಂಟ್ ಬೇಕಾಗಿದೆ. ಟ್ರೀಟ್‍ಮೆಂಟ್ ಕೊಡೋಣ ಎಂದು ತಿಳಿಸಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]