ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಉತ್ತರ ಕುಮಾರ ಎಂದು ಜೆಡಿಎಸ್ (JDS) ಕೋರ್ ಕಮಿಟಿ ಅಧ್ಯಕ್ಷ, ಮಾಜಿ ಸಚಿವ ಜಿಟಿ ದೇವೇಗೌಡ (GT Deve Gowda) ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಡಿಕೆ ಶಿವಕುಮಾರ್ ಉತ್ತರ ಕುಮಾರ. ಹೈಕಮಾಂಡ್ ನನ್ನ ಜೊತೆ ಇದೆ ಎಂದು ಹೇಳಿದ್ದರು. ಒಕ್ಕಲಿಗರು ನನಗೆ ಒಂದು ಅವಕಾಶ ಕೊಡಿ ನಾನೇ ಸಿಎಂ ಆಗ್ತೀನಿ ಎಂದಿದ್ದರು. ಈಗ ಸಿಎಂ ಆಗಿಲ್ಲ. ಡಿಸಿಎಂ ಆಗಿದ್ದೀರಾ. ಈಗ ಡಿಸಿಎಂಗೆ ರಾಜಣ್ಣ 3 ಡಿಸಿಎಂ ಅಂತ ಅಂದ್ರು. ರಾಯರೆಡ್ಡಿ 6 ಡಿಸಿಎಂ ಬೇಕು ಅಂದ್ರು. ಶಾಮನೂರು ನಾವೇ ಸಿಎಂ ಎನ್ನುತ್ತಿದ್ದಾರೆ. ಡಿಕೆ ಶಿವಕುಮಾರ್ ನಾನು ಎರಡೂವರೆ ವರ್ಷ ಸಿಎಂ ಅಂತ ಹೇಳೋ ತಾಕತ್ ಇದೆಯಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ – ನ.7 ಕ್ಕೆ ಮೊದಲ, ನ.30 ರಂದು ಕೊನೆ ಚುನಾವಣೆ
ಸಿದ್ದರಾಮಯ್ಯ ಎಲ್ಲಾ ಕಡೆ ನಾನೇ 5 ವರ್ಷ ಸಿಎಂ ಅಂತ ಹೇಳುತ್ತಿದ್ದಾರೆ. ಸಿದ್ದರಾಮಯ್ಯಗೆ ಇರೋ ಎದೆಗಾರಿಕೆ ಡಿಕೆಶಿವಕುಮಾರ್‌ಗೆ ಇಲ್ಲ. ಸಿದ್ದರಾಮಯ್ಯ (Siddaramaiah) 5 ವರ್ಷ ನಾನೇ ಸಿಎಂ ಅಂತ ಹೇಳೋಕೆ ಜಗಮೆಚ್ವಿದ ಮಗ ಆಗಿದ್ದಾರೆ. ಡಿಕೆ ಶಿವಕುಮಾರ್ ಉತ್ತರ ಕುಮಾರ ಆಗಿದ್ದಾರೆ ಅಂತ ಲೇವಡಿ ಮಾಡಿದರು. ಇದನ್ನೂ ಓದಿ: ದೇವೇಗೌಡರ ಮೈತ್ರಿ ನಿರ್ಧಾರಕ್ಕೆ ನನ್ನ ಒಪ್ಪಿಗೆ ಇದೆ: ಜಫ್ರುಲ್ಲಾ ಖಾನ್
Web Stories