ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನಲು 500 ರೂ. ಕಂತೆಯನ್ನೇ ಹೊರತೆಗೆದ ಡಿಕೆಶಿ

Public TV
2 Min Read
DK Shivakumar

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಂದು ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದ್ದಾರೆ. ಯಶವಂತಪುರ ಕ್ಷೇತ್ರದ 3 ತ್ಯಾಜ್ಯ ವಿಲೇವಾರಿ ಘಟಕಗಳಿಗೆ (Waste Disposal Unit) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದಾಶಿವನಗರದಿಂದ ಹೊರಟ ಡಿಸಿಎಂ, ಮೊದಲು ಯಶವಂತಪುರ ಕ್ಷೇತ್ರದಲ್ಲಿರುವ ಕನ್ನಳ್ಳಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಚೊಕ್ಕಸಂದ್ರ ಇಂದಿರಾ ಕ್ಯಾಂಟಿನ್‌ಗೆ (Indira Canteen) ತಿಂಡಿ ತಿನ್ನಲು ತೆರಳಿದ್ದಾರೆ. ಸಿಬ್ಬಂದಿ ತಿಂಡಿ ಖಾಲಿಯಾಗಿದೆ ಎಂದೊಡನೆ ಅಲ್ಲಿಂದ ವಾಪಸ್ ಹೊರಟಿದ್ದಾರೆ. ಇದನ್ನೂ ಓದಿ: ಒಂದಲ್ಲ, ಎರಡಲ್ಲ ಬರೋಬ್ಬರಿ 15 ಮದುವೆ – ಖತರ್ನಾಕ್‌ ಕಿಲಾಡಿ ಅರೆಸ್ಟ್‌

ಬಳಿಕ ದಾಸರಹಳ್ಳಿ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಅವರು, ಉಪ್ಪಿಟ್ಟು-ಕೇಸರಿ ಬಾತ್ ಸೇವನೆ ಮಾಡಿದ್ದಾರೆ. ಈ ವೇಳೆ ಉಪ್ಪಿಟ್ಟು-ಕೇಸರಿ ಬಾತ್‌ಗೆ ಹಣ ಕೊಡಲು 500 ರೂ. ನೋಟಿನ ಕಂತೆಯನ್ನೇ ಹೊರತೆಗಿದ್ದಾರೆ. ಉಪ್ಪಿಟ್ಟು ಕೇಸರಿಬಾತ್ ಸವಿದ ನಂತರ, ಕ್ಯಾಂಟಿನ್‌ನಲ್ಲಿ ಮೆನು ಏನಿದೆ? ಬೆಳಗ್ಗೆ, ಮಧ್ಯಾಹ್ನ, ಸಂಜೆ ಏನ್ ಅಡುಗೆ ಮಾಡ್ತೀರಾ? ಎಂದು ವಿಚಾರಿಸಿದ್ದಾರೆ. ಇದೇ ವೇಳೆ ಗ್ರಾಹಕರೊಬ್ಬರಿಂದ 10 ರೂ. ಪಡೆದಿದ್ದನ್ನು ನೋಡಿ 5 ರೂಪಾಯಿ ಬೆಲೆಗೆ 10 ರೂಪಾಯಿ ಪಡೆಯುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದಾಗ ಸಿಬ್ಬಂದಿ, ಇಲ್ಲ ಸರ್.. ಅವರು ಎರಡು ಪ್ಲೇಟ್ ತಿಂಡಿ ತೆಗೆದುಕೊಂಡರು ಅಂತಾ ಹೇಳಿದ ಮೇಲೆ ಸುಮ್ಮನಾಗಿದ್ದಾರೆ.

DK Shivakumar 2

ನಂತರ ಸೀಗೆಹಳ್ಳಿ ಕಸ ಸಂಸ್ಕರಣ ಘಟಕ ಹಾಗೂ ಕನ್ನಹಳ್ಳಿ ಬಳಿಕ ತಿಪ್ಪೆಹಳ್ಳಿ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಂತರ ಮಾತನಾಡಿದ ಡಿಸಿಎಂ ಡಿಕೆಶಿ, ನಾನು ಯಾವ ಅಧಿಕಾರಿಗಳಿಗೂ ತಿಳಿಸದೇ ನಗರ ಪ್ರದಕ್ಷಿಣೆ ಮಾಡಿದ್ದೀನಿ. ಕಸ ಸಂಸ್ಕರಣಾ ಕೇಂದ್ರಕ್ಕೆ ಭೇಟಿ ಮಾಡಿದ್ದಿನಿ. ಬಿಬಿಎಂಪಿ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಪರಿಶೀಲನೆ ಮಾಡ್ತಿಲ್ಲ. ಕೆಲವರು ಫುಟ್‌ಪಾತ್‌ನಲ್ಲೇ ಕಸ ಸುರಿದು ಹೋಗ್ತಿದ್ದಾರೆ. ಅದೆಲ್ಲವನ್ನ ಆಯುಕ್ತರಿಗೆ ತೋರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

DK Shivakumar 3

ರಿಪೇರಿ ಮಾಡ್ತೀನಿ:
ತ್ಯಾಜ್ಯ ಘಟಕ ಪರಿಶೀಲನೆ ಮಾಡಿದ ಮೇಲೆ ಇಂದಿರಾ ಕ್ಯಾಂಟಿನ್‌ಗೆ ಹೋಗಿದ್ದೆ ಅಲ್ಲಿ ತಿಂಡಿ ಖಾಲಿ ಆಗಿತ್ತು. ಕೆಲವರು 5 ರೂ. ತಿಂಡಿಗೆ 10 ರೂ. ತೆಗೆದುಕೊಳ್ಳುತ್ತಿದ್ದಾರೆ. ಬಹಳ ವರ್ಷಗಳಿಂದ ಹೀಗೆ ನಡೆಯುತ್ತಿದೆ. ಎಲ್ಲವನ್ನೂ ರಿಪೇರಿ ಮಾಡ್ತಿನಿ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕರೆಂಟ್ ಶಾಕ್ ಕೊಟ್ಟು, ಕತ್ತು ಹಿಸುಕಿ ಜೈನಮುನಿ ಹತ್ಯೆ – ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

ಬೆಂಗ್ಳೂರು ಅಭಿವೃದ್ಧಿ ಖಚಿತ:
ಬಜೆಟ್‌ನಲ್ಲಿ ಬೆಂಗಳೂರಿಗೆ ನಿರೀಕ್ಷಿತ ಅನುದಾನ ಸಿಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಜೆಟ್‌ನಲ್ಲಿ ಎಷ್ಟಾದರೂ ಅನುದಾನ ನೀಡಲಿ. ನಾವು ರವಿನ್ಯೂ ಜೆನರೇಟ್ ಮಾಡ್ತೀವಿ. ಟ್ಯಾಕ್ಸ್ ಕದಿಯುತ್ತಿರುವವರಿಗೆ ಕಡಿವಾಣ ಹಾಕ್ತೀವಿ. ಬೆಂಗಳೂರು ಅಭಿವೃದ್ಧಿ ಮಾಡೇ ಮಾಡ್ತೀವಿ ಎಂದು ಹೇಳಿದ್ದಾರೆ.

Web Stories

Share This Article