ಮಂಡ್ಯ: ಕೆಆರ್‌ಎಸ್ ಜಲಾಶಯಕ್ಕೆ (KRS Dam) ಭೇಟಿಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು, ವಾರಣಾಸಿಯ ಗಂಗಾರತಿ (Ganga Aarti) ಮಾದರಿಯಲ್ಲೇ ಕಾವೇರಿ ಆರತಿ (Kaveri Arti) ಮಾಡಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಒಂದು ತಿಂಗಳ ಒಳಗೆ ಹೇಗೆ ಕಾರ್ಯಕ್ರಮ ಮಾಡಬೇಕು ಎಂದು ವರದಿ ಸಲ್ಲಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಕಾವೇರಿ ಆರತಿಗೆ ಹೊಸ ಯೋಜನೆ ರೂಪಿಸಿದ್ದೇವೆ. ಧಾರ್ಮಿಕ ದತ್ತಿ, ನೀರಾವರಿ ಇಲಾಖೆಯಿಂದ ಕಾವೇರಿ ಆರತಿ ಮಾಡಲು ನಿರ್ಧರಿಸಿದ್ದೇವೆ. ಬೃಂದಾವನಕ್ಕೆ ಹೊಸ ರೂಪ ಕೊಡಲು ಸರ್ಕಾರಕ್ಕೆ ಮನವಿ ಬಂದಿದೆ. ಸಂಪುಟದಲ್ಲಿಯೂ ಇದಕ್ಕೆ ಅನುಮತಿ ಸಿಗಲಿದೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬೃಂದಾವನ ಅಭಿವೃದ್ದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಕಾವೇರಿ ಮಾತೆಗೆ ಸಿಎಂ ಬಾಗಿನ ಅರ್ಪಣೆ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದರು. ಬಳಿಕ 40 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಿತ್ತು. ಈಗ 30 ಟಿಎಂಸಿ ನೀರು ಹರಿದು ಹೋಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement
Advertisement
ಬೆಂಗಳೂರು ಸೇರಿದಂತೆ 6 ಜಿಲ್ಲೆಗಳ ಜೀವನದಿಯಾಗಿರುವ ಕಾವೇರಿ ನದಿ, ಮಳೆಯ ಅಬ್ಬರದಿಂದ ತುಂಬಿ ಹರಿಯುತ್ತಿದೆ. ಇದರಿಂದಾಗಿ ಕೆಆರ್‍ಎಸ್ ಡ್ಯಾಂ ಭರ್ತಿ ಹಂತಕ್ಕೆ ತಲುಪಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಮ್‍ನಲ್ಲಿ 123.200 ಅಡಿ ನೀರು ಭರ್ತಿಯಾಗಿದೆ. ಡ್ಯಾಮ್‍ಗೆ 60,016 ಕ್ಯುಸೆಕ್ ಒಳಹರಿವಿದೆ. 52,020 ಕ್ಯುಸೆಕ್ ಹೊರ ಹರಿವಿದೆ. ಡ್ಯಾಮ್‍ನ ಕೆಳಭಾಗದ ನದಿ ಪಾತ್ರದಲ್ಲಿ ನೆರೆ ಭೀತಿ ಉಂಟಾಗಿದ್ದು, ರಂಗನತಿಟ್ಟು ಪಕ್ಷಿಧಾಮಕ್ಕೂ ಜಲಾವೃತವಾಗುವ ಆತಂಕ ಎದುರಾಗಿದೆ. ಮುಂಜಾಗ್ರತೆ ಕ್ರಮವಾಗಿ ಪ್ರವಾಸಿಗರನ್ನು ನಿಷೇಧಿಸಲಾಗಿದೆ.