ಬೆಂಗಳೂರು: ಜಯನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದ ವಿಚಾರವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ ವಿಚಾರದಲ್ಲಿ ಬಿಜೆಪಿಯಿಂದ (BJP) ವಿರೋಧ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ವಿರೋಧ ಮಾಡಲಿ ಅಂತಾನೇ ಸುಮ್ಮನೆ ಇರೋದು. ನಾನು ಎಲ್ಲರಿಗೂ ಅನುದಾನ ಕೊಟ್ಟಿದ್ದೇನೆ. ಡಿಸಿಎಂ ನಿಧಿಯ ಹಣ ಕೊಟ್ಟಿರೋದು. ಸಮಸ್ಯೆ ಇದೆ ಎಂದು 10 ಕೋಟಿ ರೂ. ಎಮರ್ಜೆನ್ಸಿ ರಿಲೀಸ್ ಮಾಡಿದ್ದೇನೆ. ಜಯನಗರ ಬಹಳ ಚಿಕ್ಕ ಕ್ಷೇತ್ರ. ಅಲ್ಲಿ ದೊಡ್ಡ ಸಮಸ್ಯೆ ಇಲ್ಲ. ಆದರೂ ನನಗೆ ಅನುದಾನ ಕೊಡಬೇಕು ಎಂದು ಅರಿವಿದೆ. ಆದರೆ, ಅವರು ಬಹಳ ದೊಡ್ಡ ಆರೋಪಗಳನ್ನು ಮಾಡಿದ್ದರು. ಸ್ವಲ್ಪ ಆರೋಪಗಳನ್ನ ನೋಡಬೇಕು. ಜಾಸ್ತಿ ಬೇಕೋ, ಕಡಿಮೆ ಬೇಕೋ ಅಂತ ನೋಡಬೇಕಲ್ಲವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಉಪಚುನಾವಣೆಗೆ ಸಮಸ್ಯೆ ಮಾಡೋಕೆ ಬಿಜೆಪಿಯಿಂದ ಪ್ರತಿಭಟನೆ: ಸಿಎಂ
Advertisement
Advertisement
ಈಗಾಗಲೇ ಜಯನಗರಕ್ಕೆ 40 ಕೋಟಿ ರೂ. ಕೊಟ್ಟಿದ್ದೇವೆ. ಎಲ್ಲಾ ಕ್ಷೇತ್ರಕ್ಕೆ 600 ಕೋಟಿ ರೂ. ಪ್ರಾಜೆಕ್ಟ್ ಕೊಡುತ್ತಿದ್ದೇವೆ. ಆ ಕ್ಷೇತ್ರ ಒಂದಕ್ಕೆ 40 ಕೋಟಿ ರೂ. ಸೇರಿದೆ. ಆದರೆ ರಾಮಲಿಂಗಾರೆಡ್ಡಿ ಕ್ಷೇತ್ರಕ್ಕೆ ಇಲ್ಲವೇ ಇಲ್ಲ. ಕಣ್ಣಲ್ಲಿ ಬಂದು ನೋಡಬೇಕು ಎಂದು ಶಾಸಕರು ಕೇಳಿದ್ದಾರೆ. ಕ್ಷೇತ್ರಕ್ಕೆ ಹೋಗಿ ನೋಡುತ್ತೇನೆ. ಟೀಕೆ ಮಾಡುವವರು ಮಾಡಲಿ. ಟೀಕೆ ಮಾಡುವವರನ್ನು ಬೇಡ ಅನ್ನುವುದಕ್ಕೆ ಆಗುವುದಿಲ್ಲ. ಮೊಟ್ಟೆಯಾದರು ಹೊಡೆಯಲಿ, ಕಲ್ಲಾದರೂ ಹೊಡೆಯಲಿ, ಕಪ್ಪು ಬಾವುಟವಾದರು ತೋರಿಸಲಿ ಎಂದು ಹೇಳಿದರು. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್
Advertisement