– ಬೆಂಗಾವಲು ಪಡೆಯಿಲ್ಲದೇ ಖಾಸಗಿ ಕಾರಲ್ಲಿ ಸಂಚಾರ
ತುಮಕೂರು: ಸಿಎಂ ಕನಸು ಹೊತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ಅವರು ತಿಪಟೂರು ತಾಲೂಕಿನ ನೊಣವಿನಕೆರೆ (Nonavinakere) ಕಾಡಸಿದ್ದೇಶ್ವರ ಮಠ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಶ್ರೀ ಗುರುಗಿರಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಪಕ್ಷಕ್ಕೆ (Congress) ಯಾವುದೇ ಮಾಹಿತಿ ನೀಡದೇ ಬುಧವಾರ ಖಾಸಗಿ ಕಾರಿನಲ್ಲಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಹೋಮ, ಸಂಕಲ್ಪ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪದವಿ ಕಾರ್ಯಕ್ರಮದಲ್ಲಿ Free Palestine ಘೋಷಣೆ – ಯುಎಇಯಿಂದ ವಿದ್ಯಾರ್ಥಿ ಗಡೀಪಾರು
- Advertisement
- Advertisement
ಕಾಡಸಿದ್ದೇಶ್ವರ ಮಠ ಗುರುಭವನಕ್ಕೆ ತೆರಳಿ ಪೀಠಾಧ್ಯಕ್ಷ ಡಾ.ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆರ್ಶೀವಾದ ಪಡೆದ ಅವರು, ಕಾಡಸಿದ್ದೇಶ್ವರ ಗದ್ದಿಗೆಗೆ ತೆರಳಿ ಸಂಕಲ್ಪ, ಮಹಾಮಂಗಳಾರತಿ ಪಡೆದರು. ಬಳಿಕ ಶ್ರೀ ವೀರಗಂಗಾಧರ ಅಜ್ಜಯ್ಯನಿಗೆ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೊಣವಿನಕೆರೆ ಮಠಕ್ಕೆ ಬರುವುದರಲ್ಲಿ ವಿಶೇಷವೆನಿಲ್ಲ. ಅದು ನಂಬಿಕೆ ವಿಚಾರ, ಹಂದನಕೆರೆ ಮಠಕ್ಕೆ ಹೋಗಿದ್ದೆ ಅಲ್ಲಿ ಒಂದು ರಸ್ತೆ ಮಾಡಿಸಿದ್ದೆ. ಅದು ವ್ಯಾಜ್ಯದಲ್ಲಿತ್ತು, ಅರಣ್ಯ ಇಲಾಖೆ ತಕರಾರು ಇತ್ತು. ನಾನೇ ಹೋಗಿ ಪರಿಶೀಲನೆ ನಡೆಸಿ ಸರಿಪಡಿಸಿ ಬಂದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಚಾರ್ಮಾಡಿಯಲ್ಲಿ ಪ್ರವಾಸಿಗರ ಹುಚ್ಚಾಟ – ಬುದ್ಧಿ ಕಲಿಸಲು ಬಟ್ಟೆ ಹೊತ್ತೊಯ್ದ ಪೊಲೀಸರು