ಹುಬ್ಬಳ್ಳಿ: ಬಿಜೆಪಿಯವರಿಗೆ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡುವ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿಗೆ ರಾಜಕೀಯ ಬಟ್ಟರೆ ಬೇರೇನು ಬೇಕಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಅವರಲ್ಲಿ ಒಗ್ಗಟ್ಟು ಇಲ್ಲ, ಅದಕ್ಕೆ ಏನೇನೋ ಮಾಡುತ್ತಿದ್ದಾರೆ. ಅವರೇನೇ ಚರ್ಚೆ ಮಾಡಿದರೂ ನಾವು ಎಲ್ಲದಕ್ಕೂ ರೆಡಿ ಇದ್ದೇವೆ. ಮಹದಾಯಿ ವಿಚಾರವಾಗಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೇನೆ. ಜೋಶಿ ಅವರನ್ನು ಸಹ ಭೇಟಿ ಮಾಡಿದ್ದೇನೆ. ಅವರು ಯಾವಾಗ ಅನುಮತಿ ಕೊಡುತ್ತಾರೆ ಅಂತಾ ಕಾಯುತ್ತಿದ್ದೇವೆ. ಎಲ್ಲಾ ಪ್ಲ್ಯಾನ್ ಸಿದ್ಧವಿದೆ ಎಂದು ತಿಳಿಸಿದರು.
Advertisement
ಕೆಲಸ ಪ್ರಾರಂಭ ಮಾಡುತ್ತೀವಿ. ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿ ಇಬ್ಬರು ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾಕೆಂದರೆ ಮಹದಾಯಿ ಸಂಭ್ರಮಾಚರಣೆ ಮಾಡಿದ್ದು ಅವರು. ಆದರೆ, ಕೆಲಸ ಮಾಡೋರು ನಾವು. ಅವರಿಂದ ಸಣ್ಣ ಅರಣ್ಯ ಅನುಮತಿ ಸಿಗುವ ಭರವಸೆ ಇದೆ ಎಂದರು.
Advertisement
ಕೋವಿಡ್ ಹಗರಣ ಎಫ್ಐಆರ್ ವಿಚಾರವಾಗಿ ಮಾತನಾಡಿ, ಕುನ್ಹಾ ವರದಿ ಕೊಟ್ಟಿದ್ದಾರೆ. ಅದರ ಮೇಲೆ ಎಫ್ಐಆರ್ ಮಾಡಲಾಗಿದೆ. ನಾವೇನು ಅದನ್ನು ಮಾಡಬೇಕಿಲ್ಲ. ನೋಡೋಣ ಅವರನೇನು ಮಾಡುತ್ತಾರೆ ಎಂದು ಹೇಳಿದರು.