– ಯಾರೂ ಭವಿಷ್ಯ ನುಡಿಯೋದು ಬೇಡ – ವಿನಯ್ ಗುರೂಜಿಗೆ ಡಿಸಿಎಂ ವಿನಂತಿ
ಬೆಂಗಳೂರು: ಯಾವ ಪವರ್ ಇಲ್ಲ, ಯಾವ ಶೇರಿಂಗ್ ಇಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
Advertisement
ಜಾತಿ ಗಣತಿಗೆ ಪ್ರಬಲ ಸಮುದಾಯಗಳ ವಿರೋಧ ವಿಚಾರವಾಗಿ ಮಾತನಾಡಿ, ಯಾವ ಸಭೆಯೂ ಇಲ್ಲ, ನನಗೆ ತಿಳಿದಂತೆ ಯಾವ ಸಭೆಯೂ ಇಲ್ಲ. ಸಿಎಂ ಕ್ಯಾಬಿನೆಟ್ ಸಭೆಗೆ ತರ್ತೀನಿ ಅಂತ ಹೇಳಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಯಾಗಲಿದೆ ಎಂದರು.
Advertisement
ನಾನು, ಸಿಎಂ ಸಭೆ ಕರೆದಿದ್ದೇವೆ. ಎಲ್ಲಾ ಸಭೆ ರದ್ದು ಮಾಡಿ ಸಂಜೆ ಪದಾಧಿಕಾರಿಗಳ ಇತರೆ ಸಭೆ ಇದೆ. ಸುರ್ಜೇವಾಲ ಬರ್ತಾರೆ, ಸಂಜೆ ಶಾಸಕಾಂಗ ಪಕ್ಷದ ಸಭೆ ಇದೆ. ಎಂಎಲ್‌ಎ, ಮಂತ್ರಿಗಳಿಗೆ ಜವಾಬ್ದಾರಿ ಕೊಡಬೇಕಿದೆ. ನಾಳೆ ಸಿಎಂ, ನಾನು ದೆಹಲಿಗೆ ಹೋಗ್ತಿದ್ದೇವೆ. ದೆಹಲಿಯಲ್ಲಿ ಹೊಸ ಕಟ್ಟಡ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದೇವೆ ಎಂದರು.
Advertisement
ಎಲ್ಲಾ ಇಲಾಖೆಯಲ್ಲಿ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ದಾರೆ ಅಂತ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಹೌದಾ.? ಅವರ ರೇಟ್ ಕಾರ್ಡಾ? ಅವರ ಕಾರ್ಡ್ ಫಿಕ್ಸ್ ಇರಬೇಕು. ಅವರ ಅನುಭವ ಮಾತಾಡ್ತಿದ್ದಾರೆ, ನನಗೆ ಗೊತ್ತಿಲ್ಲ. ಅದ್ಯಾವ್ದೋ ಪೂಜೆದೆಲ್ಲಾ ಹೇಳಿದ್ದಾರೆ ಅಲ್ವಾ? ಅದು ಅವರ ಅನುಭವ. ಅವರು ಕದ್ದು ಮಾಡ್ತಾರೆ, ನಾನು ಓಪನ್ ಆಗಿ ಮಾಡ್ತೀನಿ. ಅವರು ಕದ್ದು ಪೂಜೆ ಮಾಡ್ತಾರೆ. ನಾನು ಓಪನ್ ಆಗಿ ದಿನಾ ಬೆಳಗ್ಗೆ ಪೂಜೆ ಮಾಡ್ತೀನಿ. ನಾನು ಹಿಂದೆ ಮುಂದೆ ಮಾಡಲ್ಲ. ನಿಮ್ಮಂತವರು ತೊಂದರೆ ಕೊಡ್ತಾರೆ. ರಕ್ಷಣೆ ಕೊಡಪ್ಪಾ ಅಂತ ಮನವಿ ಮಾಡ್ತೀನಿ ಎಂದು ಟಾಂಗ್ ಕೊಟ್ಟರು.
Advertisement
ಯಾರೂ ಸಭೆ ತಡೆಯೋಕೆ ಆಗಲ್ಲ ಅಂತ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಯಾರ ಸಭೆಯನ್ನೂ ತಡೆಯೋಕೆ ಹೋಗಿಲ್ಲ, ತಡೆಯೋದೂ ಇಲ್ಲ. ದೊಡ್ಡವರ ಬಗ್ಗೆ ಮಾತಾಡೋದು ಬೇಡ ಎಂದರು.
ವಿನಯ್ ಗುರೂಜಿ ಭವಿಷ್ಯ ಬಗ್ಗೆ ಮಾತನಾಡಿ, ನಾನು ಎಲ್ಲಾ ಸ್ವಾಮೀಜಿ, ಗುರೂಜಿಗಳಿಗೆ ವಿನಂತಿ ಮಾಡ್ತೀನಿ. ನಮ್ಮ ಸರ್ಕಾರದ ವಿಚಾರದಲ್ಲಿ ತಮ್ಮ ಯಾವ ಹೇಳಿಕೆ ಬೇಡ. ನಮ್ಮ ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ಕೆಲಸ ಮಾಡ್ತಿದ್ದಾರೆ. ಅವರ ನೇತೃತ್ವದಲ್ಲಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡ್ತಿದ್ದೇವೆ. ಯಾರೂ ಭವಿಷ್ಯ ನುಡಿಯೋದು ಬೇಕಿಲ್ಲ ಎಂದು ಮನವಿ ಮಾಡಿದರು.