ಹೌದು ನಾವು ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ ಕೊಟ್ಟಿದ್ದೇವೆ, ತಪ್ಪೇನಿದೆ?: ಡಿಕೆಶಿ ಸಮರ್ಥನೆ

Public TV
2 Min Read
DK Shivakumar 5

ವಿಜಯಪುರ: ಹೌದು, ನಾವು ನ್ಯಾಷನಲ್ ಹೆರಾಲ್ಡ್‌ಗೆ (National Herald) ದೇಣಿಗೆ ಕೊಟ್ಟಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ಸಮರ್ಥಿಸಿಕೊಂಡರು.

ಹೆರಾಲ್ಡ್ ಕೇಸಲ್ಲಿ ಡಿಕೆ ಬ್ರದರ್ಸ್‌ ಹೆಸರು ವಿಚಾರಕ್ಕೆ ವಿಜಯಪುರದ ಕೊಲ್ಹಾರ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೌದು, ನ್ಯಾಷನಲ್‌ ಹೆರಾಲ್ಡ್‌ಗೆ ನಾನು 25 ಲಕ್ಷ, ನನ್ನ ತಮ್ಮ ಡಿ.ಕೆ.ಸುರೇಶ್‌ 25 ಲಕ್ಷ ಕೊಟ್ಟಿದ್ದೇವೆ. ಅದು ನಮ್ಮ ಪತ್ರಿಕೆ. ಕೊಟ್ಟರೆ ಅದರಲ್ಲಿ ತಪ್ಪೇನಿದೆ? ನಾವು ಕೊಟ್ಟಿಲ್ಲ ಅಂತಾ ಹೇಳ್ತಿಲ್ಲ ಅಲ್ವಾ ಎಂದು ತಿಳಿಸಿದರು. ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

DK Shivakumar and dk Suresh

ರನ್ಯಾ ರಾವ್‌ ಚಿನ್ನದ ವಿಚಾರ ಹೇಳಿದ್ದು ಕಾಂಗ್ರೆಸ್ ನಾಯಕ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮೆಂಟ್ಲು. ಪಾಪ ಮೆಂಟ್ಲು ಹೆಚ್ಚು ಕಡಿಮೆ ಆಗಿರಬೇಕು. ಕುಮಾರಸ್ವಾಮಿಗೆ ತಲೆ ಸರಿ ಇಲ್ಲ. ಸುಳ್ಳಿಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ ಎಂದು ಹೆಚ್ಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ವಿಚಾರದ ಬಗ್ಗೆ ಮಾತನಾಡಿ, ಅದು ಬೆಂಗಳೂರು ಜಿಲ್ಲೆ. ರಾಮನಗರ ಚೇಂಜ್ ಮಾಡ್ತಿಲ್ಲ. ರಾಮನಗರ ರಾಮನಗರವಾಗಿಯೇ ಇರುತ್ತೆ.‌ ಇವರ‍್ಯಾಕೆ ಹಾಸನದಿಂದ ಬಂದ್ರು? ಹಾಸನದಿಂದಲೇ ರಾಜಕಾರಣ ಮಾಡಬೇಕಿತ್ತಲ್ಲ. ಇವರ ಹೆಸರನ್ನು ಮೊದಲು ಚೇಂಜ್ ಮಾಡಿಕೊಳ್ಳಲಿ.‌ ಹೆಚ್‌.ಡಿ.ಕುಮಾರಸ್ವಾಮಿ ಎನ್ನುವ ಹೆಸರನ್ನು ಬದಲಾಯಿಸಿಕೊಳ್ಳಲಿ. ಅವರ ತಂದೆ ಹಸರು, ಅವರ ಊರ ಹೆಸರನ್ನು ಯಾಕೆ ಇಟ್ಕೊಂಡಿದ್ದಾರೆ? ನಾವು ಬೆಂಗಳೂರು ರೀ. ನಾವು ನಮ್ಮ ಬೆಂಗಳೂರು ಜಿಲ್ಲೆಯವರು. ನಮಗೆ ನಮ್ಮದೇ ಆದ ಆಸೆ ಎಲ್ಲಾ ಇರುತ್ತೆ. ಮದ್ರಾಸ್‌ನ ಚೆನ್ನೈ ಯಾಕ್ ಮಾಡಿದ್ರು? ಗುಲಬರ್ಗಾ ಕಲಬುರಗಿ ಯಾಕ್ ಮಾಡಿದ್ರು? ಬೆಂಗಳೂರು ಜಿಲ್ಲೆ ಅಂತಾ ಮಾಡಿದ್ರೆ ಅವರಿಗೇನು ತೊಂದರೆ. ಮುಂದೆ ಏನ್ ಮಾಡ್ತೀವಿ ಎಂದು ನೋಡಲಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ – ತಮ್ಮ ಭೂಮಿಗಳ ಬೆಲೆ ಹೆಚ್ಚಿಸುವ ಷಡ್ಯಂತ್ರದ ಭಾಗ: ಹೆಚ್‌ಡಿಕೆ ಕೆಂಡ

ರಿಯಲ್ ಎಸ್ಟೇಟ್ ಡೆವೆಲಪ್ಮೆಂಟ್‌ಗಾಗಿ ಮಾಡಿದ್ದು ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ಹೌದ್ರಿ ಅದಕ್ಕಾಗಿಯೇ ಮಾಡಿದ್ದು. ನಮ್ಮ ಬೆಂಗಳೂರು, ನಮ್ಮ ಹಳ್ಳಿಯವರು ಅಭಿವೃದ್ಧಿ ಆಗಬೇಕು. ಎಲ್ಲರ ಆಸ್ತಿಗಳ ಬೆಲೆ ಹೆಚ್ಚಾಗಬೇಕು. ರೈತರ ಬದುಕು ಒಳ್ಳೆಯದಾಗಬೇಕು, ಉದ್ಯೋಗ ಸಿಗಬೇಕು. ಹೊರ ದೇಶದಿಂದ ಬಂದು ಬಂಡವಾಳ ಹಾಕಬೇಕು ಎಂದು ಹೆಚ್‌ಡಿಕೆಗೆ ಟಾಂಗ್‌ ಕೊಟ್ಟರು.

Share This Article