– ನಾನು ಯಾವ ದೇವಸ್ಥಾನಕ್ಕೆ ಹೋದರೂ ಸಂಚಲನವಾಗುತ್ತೆ ಎಂದ ಡಿಸಿಎಂ
ಉಡುಪಿ: ಕುಂಭಮೇಳದಲ್ಲಿ (Maha Kumbh) ನಾನು ಭಾಗಿಯಾದರೆ ತಪ್ಪೇನಿದೆ ಎಂದು ಸ್ವಪಕ್ಷದ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಟಾಂಗ್ ಕೊಟ್ಟರು.
ಉಡುಪಿಯಲ್ಲಿ (Udupi) ಮಾತನಾಡಿದ ಅವರು, ನಾನು ಕುಂಭಮೇಳಕ್ಕೆ ಹೋಗಿದ್ದೆ. ಅಲ್ಲಿ ನೀರಿಗೆ ಏನಾದರೂ ಜಾತಿ, ಧರ್ಮ ಇದೆಯಾ? ನೀರಿಗೆ ಏನಾದರೂ ಪಾರ್ಟಿ ಇದೆಯಾ? ತಿ.ನರಸೀಪುರದ ಕುಂಭಮೇಳದಲ್ಲೂ ನಾನು ಭಾಗಿಯಾಗಿದ್ದೇನೆ. ಕುಂಭಮೇಳದಲ್ಲಿ ಭಾಗಿ ಆದರೆ ತಪ್ಪೇನಿದೆ? ಯಾರು ಯಾವ ಲೆಕ್ಕಚಾರ ಬೇಕಾದರೂ ಹಾಕಿಕೊಳ್ಳಲಿ, ಅವಶ್ಯಕತೆ ಇಲ್ಲ. ಯಾವ ಲೆಕ್ಕಾಚಾರನೂ ಅವಶ್ಯಕತೆ ಇಲ್ಲ ಎಂದು ಕುಂಭಮೇಳ ವಿರೋಧಿಗಳಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಉಡುಪಿಯ ಕಾಪು ಹೊಸ ಮಾರಿಗುಡಿಗೆ ಡಿಕೆಶಿ ಭೇಟಿ, ಪೂಜೆ ಸಲ್ಲಿಕೆ
ನಾನು ಯಾವ ದೇವಸ್ಥಾನಕ್ಕೆ ಹೋದರೂ, ಯಾವ ಧಾರ್ಮಿಕ ವಿಚಾರ ಮಾತನಾಡಿದರೂ ಸಂಚಲನವಾಗುತ್ತದೆ. ನಿಮ್ಮ ಜಿಲ್ಲೆಯವರೇ ನನ್ನನ್ನು ಏಸು ಕುಮಾರ ಎಂದು ಕರೆದಿದ್ದರು. ಯೇಸುವಿನ ಶಿಲಾಮೂರ್ತಿಗೆ ನಾನು ಪ್ರೋತ್ಸಾಹ ಕೊಟ್ಟೆ ಎಂಬ ಕಾರಣಕ್ಕೆ ಹೀಗೆ ಹೇಳಿದ್ದರು. ಯಾರೋ ಒಬ್ಬ ಎಂಪಿ ಮುಸ್ಲಿಮರ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ ಎಂದಿದ್ದ. ಬರಿ ಪಂಚರ್ ಹಾಕೋಕೆ ಲಾಯಕ್ಕು ಎಂದಿದ್ದ. ಅವರೆಲ್ಲ ನಮ್ಮ ಬ್ರದರ್ಸ್, ಅವರಿಲ್ಲದೆ ಬದುಕೋಕೆ ಆಗಲ್ಲ ಎಂದಿದ್ದೆ. ಚಿಕನ್ನು ಮಟನ್ನು ನಾವು ಕಡಿಯೋಕೆ ಆಗುತ್ತಾ? ಅವರೇ ಕಡಿಯುವವರು. ಯಾವ ಕೆಲಸ ಯಾರು ಮಾಡಬೇಕು ಅವರೇ ಮಾಡುತ್ತಾರೆ. ಅವರನ್ನು ಬ್ರದರ್ಸ್ ಅಂದಿದ್ದಕ್ಕೆ ನನ್ನನ್ನು ಇನ್ನೊಂದು ಹೆಸರಲ್ಲಿ ಕರೆದರು ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ನಾನು ಶಿವನ ಮಗ ಶಿವಕುಮಾರ್ ಎಂದು ತಂದೆ ಹೆಸರಿಟ್ಟರು. ದೊಡ್ಡ ಆಲದ ಕೆಂಪೇಗೌಡನ ಮಗ ನಾನು. ಶಿವನ ದೇವಸ್ಥಾನಕ್ಕೆ ಹೋದರೆ ಅಲ್ಲೂ ಏನೋ ಒಂದು ಕರೀತಾರೆ ಎಂದರು. ಇದನ್ನೂ ಓದಿ: ಡಿಸಿಎಂ ಅಧಿಕಾರ ದರ್ಪದಿಂದ ಹೇಳಿರಬಹುದು- ಡಿಕೆಶಿ ನಟ್ಟು, ಬೋಲ್ಟು ಹೇಳಿಕೆಗೆ ಫಿಲ್ಮ್ಂ ಚೇಂಬರ್ ಅಧ್ಯಕ್ಷ ಅಸಮಾಧಾನ
ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಪ್ರತ್ಯೇಕ ಇಬ್ಬರು ಗಡಿ ಉಸ್ತುವಾರಿ ಸಚಿವರ ನೇಮಕ ವಿಚಾರವಾಗಿ ಮಾತನಾಡಿ, ನಮ್ಮಲ್ಲೂ ಗಡಿಯಲ್ಲಿ ಉಸ್ತುವಾರಿ ಸಚಿವರಿದ್ದಾರೆ. ಗಡಿಯಲ್ಲಿರುವ ಮಂತ್ರಿಗಳೇ ಎಲ್ಲಾ ಕೆಲಸ ನಿಭಾಯಿಸುತ್ತಾರೆ ಎಂದು ತಿಳಿಸಿದರು.
ಡಿಕೆಶಿ ಹಿಂದುತ್ವ ನಿಲುವನ್ನು ಶ್ಲಾಘಿಸಿರುವ ಯಶ್‌ಪಾಲ್ ಸುವರ್ಣ, ಸ್ವಾಗತ ಕೋರಿರುವ ಸುನೀಲ್ ಕುಮಾರ್ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ಒಳ್ಳೆದಾಗಲಿ. ರಾಜ್ಯಕ್ಕೆ ಒಳ್ಳೆದಾಗಲಿ. ಅವರ ಮನೆಯನ್ನ (ಬಿಜೆಪಿ ಬಣ ಫೈ) ಸರಿ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.