– ತರಾತುರಿಯಲ್ಲಿ ಸಿಎಂಗೆ ಶೋಕಾಸ್ ನೋಟಿಸ್ ಕೊಡ್ತಾರೆ ಅಂದ್ರೆ ಏನು ಅರ್ಥ ಎಂದು ಡಿಸಿಎಂ ಪ್ರಶ್ನೆ
ಬೆಂಗಳೂರು: ಕಾನೂನು ಮತ್ತು ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಗಂಭೀರ ಆರೋಪ ಮಾಡಿದರು.
Advertisement
ಸಿಎಂ ಸಿದ್ದರಾಮಯ್ಯಗೆ (Siddaramaiah) ರಾಜ್ಯಪಾಲರ ನೋಟಿಸ್ ಸಂಬಂಧ ಕ್ಯಾಬಿನೆಟ್ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಅಬ್ರಹಾಂ ಅವರು ದೂರು ಕೊಟ್ಟ ದಿನವೇ ರಾಜ್ಯಪಾಲರು ಸಿಎಸ್ ಬಳಿ ವರದಿ ಕೇಳಿದ್ದಾರೆ. ಸಂವಿಧಾನದ ಕಗ್ಗೊಲೆ, ಪ್ರಜಾಪ್ರಭುತ್ವಕ್ಕೆ ಮಾರಕ ಆಗುವ ಪರಿಸ್ಥಿತಿ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಕಾನೂನು ಮತ್ತು ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನ ಬಳಸಿಕೊಂಡಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿದ್ದಾರೆ, ರಾಜೀನಾಮೆ ನೀಡಬೇಕು: ಶೋಭಾ ಕರಂದ್ಲಾಜೆ ಆಗ್ರಹ
Advertisement
Advertisement
ಅಬ್ರಾಹಂ ಎಂಬ ವ್ಯಕ್ತಿ ಬಗ್ಗೆ ಎಲ್ಲ ಗೊತ್ತಿದೆ. ಅಬ್ರಾಹಂ ಜುಲೈ 26ರಂದು ದೂರು ಕೊಡ್ತಾರೆ. ಜುಲೈ 5ರಂದು ಮುಖ್ಯ ಕಾರ್ಯದರ್ಶಿಗೆ ರಿಪೋರ್ಟ್ ಕೇಳಿರ್ತಾರೆ. ಜುಲೈ 15ರಂದು ಮತ್ತೆ ಸಿಎಸ್‌ಗೆ ಪತ್ರ ಬರೆಯುತ್ತಾರೆ. ರಾಜ್ಯ ರೈತ ಸಂಘಗಳ ಒಕ್ಕೂಟ ದೂರು ಕೊಟ್ಟಿದೆ. ಮುಡಾದಿಂದ ಸೈಟ್‌ಗಳ ಅನಧಿಕೃತ ಹಂಚಿಕೆ ಬಗ್ಗೆ ದೂರು ಕೊಡ್ತಾರೆ. ನ್ಯಾಯಾಂಗ ತನಿಖೆಗೆ ಆಗ್ರಹಿಸಿ ದೂರು ಕೊಡ್ತಾರೆ. ಅದಕ್ಕೆ ವಿವರಣೆ ಕೇಳಿ ಪತ್ರ ಬರೆಯುತ್ತಾರೆ. ರಾಜ್ಯಪಾಲರಿಗೆ ಡಿಟೇಲ್ ವರದಿ ಕೊಟ್ಟು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ವಹಿಸುತ್ತಾರೆ. ಅದಾದ ಬಳಿಕ ಅಬ್ರಾಹಂ ಜುಲೈ 26ರಂದು ದೂರು ಕೊಡ್ತಾರೆ. ಅವತ್ತೇ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ಕೊಡ್ತಾರೆ. 7 ದಿನಗಳ ಒಳಗಾಗಿ ಉತ್ತರಿಸುವಂತೆ ನೋಟಿಸ್ ಕೊಡ್ತಾರೆ ಎಂದು ತಿಳಿಸಿದರು.
Advertisement
ಪ್ರಜಾಪ್ರಭುತ್ವದಲ್ಲಿ ಯಾವ ಯಾವ ಸರ್ಕಾರ ಇದ್ದಾಗ ಏನೇನು ತೀರ್ಮಾನ ಆಗಿದೆ ಎಂಬ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿದ್ದೇವೆ. 150 ಪೇಜ್ ಇದೆ. ಅದನ್ನ ಓದೋಕೆ ಎಷ್ಟು ಟೈಂ ಬೇಕು ಅಂತಾ ಗೊತ್ತು. ಇಷ್ಟು ಬೇಗ ನೋಟಿಸ್ ಕೊಡ್ತಾರೆ ಅಂದ್ರೆ ಏನು ಅರ್ಥ? 7 ದಿನ ಆಗ್ತಿದೆ ನೋಟಿಸ್ ಕೊಟ್ಟು. ನಿಮ್ಮ ಮೇಲೆ ಪ್ರಾಸಿಕ್ಯೂಶನ್‌ಗೆ ಏಕೆ ಕೊಡಬಾರದು ಎಂದು ನೋಟೀಸ್ ಕೊಟ್ಟಿದ್ದಾರೆ. ನಿಮ್ಮ ಮೇಲೆ, ನಿಮ್ಮ ಕುಟುಂಬದ ವಿರುದ್ಧ ಅಕ್ರಮದ ಆರೋಪ ಇದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲು ಆಗಬೇಕು ಅಂತಾ ದೂರು ಬಂದಿದೆ. ವಿವರಣೆ ಕೊಡಿ ಎಂದು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ರಾಜ್ಯಪಾಲರು ಮುಖ್ಯಕಾರ್ಯದರ್ಶಿ ವರದಿ ಪರಿಶೀಲನೆ ಮಾಡದೇ ಹೇಗೆ ಶೋಕಾಸ್ ನೋಟಿಸ್ ಅವತ್ತೇ ಕೊಡ್ತಾರೆ ಎಂದು ಡಿಕೆಶಿ ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಕ್ಷಣೆ ಮಾಡಲು ರಾಜ್ಯಪಾಲರ ವಿರುದ್ದ ಕ್ಯಾಬಿನೆಟ್ ನಿರ್ಣಯ : ಅಶೋಕ್ ಕಿಡಿ
ಇನ್ನೂ ತನಿಖೆಯನ್ನೇ ಮಾಡಿಲ್ಲ. ನ್ಯಾಯಾಂಗ ತನಿಖೆ ಆಗ್ತಿದೆ. ಅಧಿಕಾರಿಗಳ ತಂಡದಿಂದಲೂ ತನಿಖೆ ಮಾಡ್ತಿದ್ದಾರೆ. ಇಷ್ಟೊಂದು ತರಾತುರಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ನಿಮ್ಮ ಮೇಲೆ ಕೇಸ್ ಹಾಕಬೇಕು ಎಂದು ಶೋಕಾಸ್ ನೋಟಿಸ್ ಕೊಡ್ತಾರೆ ಅಂದರೆ ಏನು? ಸಂವಿಧಾನ ಮತ್ತೆ ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ವಾ ಎಂದು ಗವರ್ನರ್ ವಿರುದ್ಧ ಅಸಮಾಧಾನ ಹೊರಹಾಕಿದರು.
ರಾಜ್ಯಪಾಲರು ಸಿಎಂ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿರುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿದ್ದೇವೆ. ಅದಕ್ಕೆ ನಾವು ಮಂತ್ರಿ ಪರಿಷತ್ ಸಭೆ ನಡೆಸಿದ್ದೇವೆ. ಸಿಎಂ ಸಿದ್ದರಾಮಯ್ಯ ಬಿಟ್ಟು ನನ್ನ ಅಧ್ಯಕ್ಷತೆಯಲ್ಲಿ ಮಂತ್ರಿ ಪರಿಷತ್ ಸಭೆ ನಡೆಸಿದ್ದೇವೆ. ರಾಜ್ಯಪಾಲರಿಗೆ ಸಲಹೆ ನೀಡಿ ನಿರ್ಣಯ ತೆಗೆದುಕೊಂಡಿದ್ದೇವೆ. ಸಿಎಂಗೆ ರಾಜ್ಯಪಾಲರು ತಮ್ಮ ನೋಟಿಸ್ ವಾಪಸ್ ಪಡೆಯಬೇಕು ಎಂದು ನಿರ್ಣಯವಾಗಿದೆ. ಮತ್ತೆ ಟಿ.ಜೆ.ಅಬ್ರಾಹಂ ದೂರನ್ನ ವಜಾಗೊಳಿಸಬೇಕು ಎಂದು ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ರೆ ಮುಂದೇನು?