ಬೆಳಗಾವಿ: ತಾಲೂಕಿನ ಸುವರ್ಣ ಸೌಧದ ಎದುರಿಗೆ ರೈತರಿಗೆ ಕೃಷಿ ಯಂತ್ರೋಪಕರಣ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಕುರ್ಚಿಗಳ ಮೇಲೆ ಕುಳಿತುಕೊಳ್ಳಲು ಹೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar), ನಾವೆಲ್ಲ ಕುರ್ಚಿಗಾಗಿ ಹೊಡೆದಾಡುತ್ತೇವೆ. ನೀವು ಕುರ್ಚಿ ಇದ್ರೂ ಯಾಕೆ ಕುಳಿತುಕೊಳ್ಳಲ್ಲ ಎಂದು ಕೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ನಿಮ್ಮನ್ನ ಗುರುತಿಸಿ ಸುವರ್ಣ ಸೌಧದ ಮುಂದೆ ಕರೆಯಿಸಿ ರೈತರಿಗೆ ಸಹಾಯ ಮಾಡ್ತಿದೆ. ಇದು ನಿಮ್ಮ ಭಾಗ್ಯ. ನಿಮ್ಮನ್ನ ನೋಡುವುದೂ ನಮ್ಮ ಭಾಗ್ಯ ಆಗಿದೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ- ಸರ್ಕಾರಕ್ಕೆ ತೇಜಸ್ವಿ ಸೂರ್ಯ ಎಚ್ಚರಿಕೆ
Advertisement
Advertisement
ಪ್ರಜಾಪ್ರಭುತ್ವದಲ್ಲಿ ನಾಲ್ಕು ಆಧಾರ ಸ್ತಂಭ ಮುಖ್ಯವಾಗಿದೆ. ಸಮಾಜದಲ್ಲಿ ಕೃಷಿಕ, ಸೈನಿಕ, ಶಿಕ್ಷಕ, ಕಾರ್ಮಿಕ ಮುಖ್ಯ. ಚಲುವರಾಯಸ್ವಾಮಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆಗಳು. ಅವರ ತಂದೆ ಈಗಲೂ ಕೃಷಿಕರಿದ್ದಾರೆ. ರೈತರಿಗೋಸ್ಕರ ಈ ದೇಶದಲ್ಲಿ ದೊಡ್ಡ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಮೂರು ಇಲ್ಲ ಎಂದು ಟೀಕಿಸಿದರು.
Advertisement
ಎಪಿಎಂಸಿ ಕಾಯ್ದೆ ಮಂಜೂರು ಮಾಡಿದ್ದರು. ಅದನ್ನ ಮೊನ್ನೆ ಹಿಂಪಡೆದಿದ್ದೇವೆ. ನಾವು ರೇಷ್ಮೆ ಬೆಳೆಯುತ್ತೇವೆ. ನಮ್ಮಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುತ್ತೇವೆ. ಉತ್ತರ ಕರ್ನಾಟಕ ಭಾಗದಿಂದಲೂ ರೇಷ್ಮೆ ನಮ್ಮ ಭಾಗಕ್ಕೆ ಬರ್ತಿದೆ. ರೈತರಿಗೆ ಶಕ್ತಿ ಕೊಟ್ಟು ನಮ್ಮ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ ಅಂತಾ ಇಲ್ಲಿಗೆ ಬಂದಿದ್ದೇವೆ. ಪ್ರಜಾಧ್ವನಿ ಯಾತ್ರೆ ಇಲ್ಲಿಂದ ಆರಂಭ ಮಾಡಿದೆವು. 36 ಸಾವಿರ ಕೋಟಿ ಹಣವನ್ನ ಗೃಹ ಲಕ್ಷ್ಮಿಯವರಿಗೆ ನೀಡುತ್ತಿದ್ದೇವೆ. ಐದು ಗ್ಯಾರಂಟಿ ನಮ್ಮ ಐದು ಬೆರಳು, ಒಂದು ಮುಷ್ಠಿ ಇದ್ದ ಹಾಗೆ. ನೀವೆಲ್ಲರೂ ನಮ್ಮ ಕೈ ಹಿಡಿಯಿರಿ ಎಂದು ಕೇಳಿಕೊಂಡರು. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅಶೋಕ್, ಅಶ್ವಥ್ ನಾರಾಯಣ್ ಸಮರ್ಥರು – ಸಿಪಿವೈ ಅಚ್ಚರಿ ಹೇಳಿಕೆ
Advertisement
200 ತಾಲೂಕು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಕುಡಿಯುವ ನೀರಿಗೆ ತೊಂದರೆ ಇದೆ. ಅದನ್ನ ಹೇಗೊ ಮ್ಯಾನೇಜ್ ಮಾಡ್ತಿದ್ದೇವೆ. ನರೇಗಾ ಯೋಜನೆಯಲ್ಲಿ ಐವತ್ತು ದಿನ ಬಂದ್ ಮಾಡಿ ನಿಮಗೆ ಮೋಸ ಮಾಡ್ತಿದ್ದಾರೆ. ಕಳಸಾ ಬಂಡೂರಿ ಯೋಜನೆ ಆಯ್ತು ಅಂತಾ ಅಂದು ಸಂಭ್ರಮಾಚರಣೆ ಮಾಡಿದ್ರೂ. ಆದ್ರೇ ಪರಿಸರ ಇಲಾಖೆಯಿಂದ ಒಂದು ಕ್ಲಿಯರೆನ್ಸ್ ಕೊಡಸ್ತಿಲ್ಲ. ಅದೇನೆ ಆಗಲಿ ಅಂತಾ ಯೋಜನೆಗೆ ನಾವು ಟೆಂಡರ್ ಕರೆದಿದ್ದೇವೆ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಬೈಯ್ಯುವವರು. ಆದರೆ ಈಗ ಎನೂ ಅಂತಿಲ್ಲ. ಇತ್ತ ಪ್ರಹ್ಲಾದ್ ಜೋಶಿ ಅವರು ಅರ್ಧ ಗಂಟೆ ಟೈಮ್ ತಗೊಂಡ್ರೆ ಆಗುತ್ತದೆ. ಆದರೆ ಬಾಯಿ ಬಿಡ್ತಿಲ್ಲ. ನಾವು ನಿಮ್ಮನ್ನ ಕೈ ಹಿಡಿದಿದ್ದೇವೆ. ನೀವು ನಮ್ಮನ್ನ ಕೈ ಹಿಡಿಯಿರಿ ಎಂದರು. ಇದನ್ನೂ ಓದಿ: ದಲಿತ ಸಿಎಂ ಹೇಳಿಕೆ ವಿಚಾರದಲ್ಲಿ ಸಚಿವ ಮಹದೇವಪ್ಪ ಯೂಟರ್ನ್