– ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ ಡಿಕೆಶಿ 9,99,999 ರೂ. ವೆಚ್ಚದ ಸೇವೆ
ಉಡುಪಿ: ಉಡುಪಿ (Udupi) ಪ್ರವಾಸದಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಪು ಶ್ರೀ ಹೊಸ ಮಾರಿಗುಡಿಗೆ (Kapu Hosa Marigudi) ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
Advertisement
ಮಾರಿಯಮ್ಮನ ಗದ್ದುಗೆ ಪ್ರತಿಷ್ಠಾಪನೆಯಲ್ಲಿ ಶಿವಕುಮಾರ್ (D.K.Shivakumar) ಭಾನುವಾರ ಭಾಗಿಯಾದರು. ಕಾಪು ಶ್ರೀ ಹಳೆ ಮಾರಿಗುಡಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಾರಿಗುಡಿ ಗದ್ದುಗೆ ಪ್ರತಿಷ್ಠಾಪನಾ ಕಾರ್ಯಕ್ರಮ ಬೆಳಗ್ಗೆ 11:30 ಕ್ಕೆ ನಡೆಯಿತು. ಇದನ್ನೂ ಓದಿ: ಡಿಸಿಎಂ ಅಧಿಕಾರ ದರ್ಪದಿಂದ ಹೇಳಿರಬಹುದು- ಡಿಕೆಶಿ ನಟ್ಟು, ಬೋಲ್ಟು ಹೇಳಿಕೆಗೆ ಫಿಲ್ಮ್ಂ ಚೇಂಬರ್ ಅಧ್ಯಕ್ಷ ಅಸಮಾಧಾನ
Advertisement
Advertisement
ಹತ್ತು ದಿನಗಳ ಕಾಲ ನಡೆಯುತ್ತಿರುವ ಮಾರಿಯಮ್ಮನ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಡಿಸಿಎಂ ಪಾಲ್ಗೊಂಡರು. ಹೊಸ ಮಾರಿಗುಡಿ ದೇಗುಲ ಪ್ರವೇಶಿಸಿದ ಡಿಕೆಶಿ, ಮಾರಿಯಮ್ಮನ ಚಿನ್ನದ ಗದ್ದುಗೆಯಲ್ಲಿ ಪ್ರತಿಷ್ಠಾಪನಾ ವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾಪು ಮಾರಿಗುಡಿಯಲ್ಲಿರುವ ಉಚ್ಚಂಗಿ ದೇವಿಯ ದರ್ಶನ ಮಾಡಿದರು. ಕೆಂಪು ಕಲ್ಲಿನಿಂದ ನಿರ್ಮಾಣ ಆಗಿರುವ ದೇಗುಲ ವೀಕ್ಷಿಸಿದರು. ಬಾಗಲಕೋಟೆಯ ಇಳಕಲ್‌ನ ವಿಶಿಷ್ಟ ಕೆಂಪು ಕಲ್ಲಿನ ದೇಗುಲ ಇದಾಗಿದೆ. ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಹೊಸ ಮಾರಿಗುಡಿ ಇದು.
Advertisement
ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕಾಪು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸನ್ಮಾನಿಸಿದರು. ಕಾಪು ಮಾರಿಯಮ್ಮನ ಮೂರ್ತಿ, ಪ್ರಸಾದ ನೀಡಿ ಗೌರವಿಸಿದರು. ಇದನ್ನೂ ಓದಿ: ಸರ್ಕಾರದ ಖಜಾನೆ ಖಾಲಿಯಾಗಿದೆ, ಗ್ಯಾರಂಟಿ ಹೆಸರಲ್ಲಿ ಹೆಚ್ಚಿನ ತೆರಿಗೆ ಹಾಕಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ
ಕಾಪು ಹೊಸ ಮಾರಿಗುಡಿಗೆ ಡಿ.ಕೆ.ಶಿವಕುಮಾರ್ ಅವರು 9,99,999 ರೂಪಾಯಿ ವೆಚ್ಚದ ಸೇವೆ ಮಾಡಿದ್ದಾರೆ. ಡಿಕೆಶಿ ಪತ್ನಿ ಉಷಾ ಅವರ ಹೆಸರಲ್ಲಿ ಸೇವೆ ನೀಡಿದ್ದಾರೆ. ದೇಗುಲ ನಿರ್ಮಾಣ ಕಾರ್ಯಕ್ಕೆ ದೇಣಿಗೆ ನೀಡಿದ್ದಾರೆ.