ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನ ಶಿಕಾರಿ ಮಾಡಿ, ಒಬ್ಬ ಮುಖಂಡ ಕನಿಷ್ಠ 10 ಮಂದಿಯನ್ನ ಪಕ್ಷಕ್ಕೆ ಕರೆತನ್ನಿ: ಡಿಕೆಶಿ

Public TV
1 Min Read
d.k.shivakumar congress workers meeting

ರಾಮನಗರ: ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರನ್ನು ಶಿಕಾರಿ ಮಾಡಿ, ಒಬ್ಬ ಮುಖಂಡ ಕನಿಷ್ಠ 10 ಮಂದಿಯನ್ನು ಪಕ್ಷಕ್ಕೆ ಕರೆತನ್ನಿ ಎಂದು ಪಕ್ಷದ ಕಾರ್ಯಕರ್ತರಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ಟಾಸ್ಕ್‌ ನೀಡಿದ್ದಾರೆ.

ಚನ್ನಪಟ್ಟಣ (Channapatna) ಉಪಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಚನ್ನಪಟ್ಟಣ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಸಭೆಯನ್ನು ಡಿಸಿಎಂ ಡಿಕೆಶಿ ನಡೆಸಿದರು. ಇದನ್ನೂ ಓದಿ: NEET-UG ಕೇಂದ್ರವಾರು ಫಲಿತಾಂಶ ಪ್ರಕಟ

congress party workers channapatna

ಈ ವೇಳೆ ಮಾತನಾಡಿದ ಡಿಕೆಶಿ, ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನ ಶಿಕಾರಿ ಮಾಡಿ. ಒಬ್ಬೊಬ್ಬ ಮುಖಂಡ ಕನಿಷ್ಠ ಹತ್ತು ಮಂದಿಯನ್ನ ಪಕ್ಷಕ್ಕೆ ಕರೆತರಬೇಕು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಬೇಸತ್ತವರನ್ನ ಕಾಂಗ್ರೆಸ್‌ಗೆ ಕರೆತನ್ನಿ ಎಂದು ಸೂಚನೆ ನೀಡಿದ್ದಾರೆ.

ನನಗೆ ಚನ್ನಪಟ್ಟಣದಲ್ಲಿ ನಿಲ್ಲಬೇಕೆಂಬ ಆಸೆ ಇದೆ. ಆದರೆ ಪಾರ್ಟಿಯವರು ಬೇಡ ಅಂತಿದ್ದಾರೆ. ನೀನು ಕೆಪಿಸಿಸಿ ಅಧ್ಯಕ್ಷ, ಕನಕಪುರ ಎಂಎಲ್ಎ ಇದ್ದೀಯ. ನೀನು‌ ಮತ್ತೆ ನಿಲ್ಲೋದು ಬೇಡ ಎನ್ನುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಅಭ್ಯರ್ಥಿ ಯಾರೇ ಆಗಲಿ, ಡಿಕೆಶಿನೇ ಅಭ್ಯರ್ಥಿ ಎಂದು ಚುನಾವಣೆಯಲ್ಲಿ ಪ್ರಚಾರ ಮಾಡಿ ಎಂದು ಕಾರ್ಯಕರ್ತರಿಗೆ ಡಿಕೆಶಿ ಸಲಹೆ ನೀಡಿದ್ದಾರೆ. ಇದನ್ನೂ ಓದಿ: UPSC ಅಧ್ಯಕ್ಷ ಸ್ಥಾನಕ್ಕೆ ಮನೋಜ್‌ ಸೋನಿ ರಾಜೀನಾಮೆ

ಚನ್ನಪಟ್ಟಣ ಉಪಚುನಾವಣಾ ಕಣ ರಂಗೇರಿದೆ. ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಸದ್ದಿಲ್ಲದೇ ತಯಾರಿ ನಡೆಸುತ್ತಿದೆ. ಮೈತ್ರಿ ನಾಯಕರ ಒಳಜಗಳದ ಲಾಭ ಪಡೆಯಲು ಮುಂದಾಗಿರುವ ಕಾಂಗ್ರೆಸ್, ಸಾಲು ಸಾಲು ಸಭೆಗಳನ್ನ ನಡೆಸಿ ಪಕ್ಷ ಸೇರ್ಪಡೆ ಕಾರ್ಯಕ್ರಮಗಳನ್ನ ನಡೆಸುತ್ತಿದೆ.

Share This Article